ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನಿಂದ ಪಡ್ನೂರುನ ಹರೀಶ್ಚಂದ್ರ ಆಚಾರ್ಯರವರಿಗೆ ನೆರವು

0

ಪುತ್ತೂರು: ಮಳೆಗಾಲದಲ್ಲಿ ಕುಸಿದು ಬಿದ್ದು ವಾಸಿಸಲು ಅಸಾಧ್ಯವಾಗಿದ್ದ ಪಡ್ನೂರು ಗ್ರಾಮದ ರೆಂಜಾಳ ಹರಿಶ್ಚಂದ್ರ ಆಚಾರ್ಯರವರ ಮನೆಯನ್ನು ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈರವರು ದುರಸ್ತಿ ಮಾಡಿಸಿ ಫೆ.26ರಂದು ಹಸ್ತಾಂತರ ಮಾಡಿದರು. ಹರಿಶ್ಚಂದ್ರ ಆಚಾರ್ಯರವರು ಅಶೋಕ್ ರೈಯವರನ್ನು ಭೇಟಿ ಮಾಡಿ ವಾಸ ಮಾಡಲು ಕಷ್ಟವಾಗಿರುವ ಬಗ್ಗೆ ತಿಳಿಸಿ ಮನೆ ದುರಸ್ತಿ ಮಾಡಿಸಿಕೊಡುವಂತೆ ವಿನಂತಿಸಿದ್ದರು. ತಕ್ಷಣ ಅಶೋಕ್ ರೈಯವರು ತಮ್ಮ ರೈ ಎಸ್ಟೇಟ್ ಎಜ್ಯುಕೇಶನಲ್, ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಪಂದಿಸಿದ್ದರು. ದೀಪ ಪ್ರಜ್ವಲನೆ ಮಾಡುವ ಮೂಲಕ ಹರಿಶ್ಚಂದ್ರ ಆಚಾರ್ಯರವರಿಗೆ ಅಶೋಕ್ ರೈ ಮನೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here