ಪುತ್ತೂರು ವಕೀಲರ ಸಂಘದ ಚುನಾವಣೆ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

0

  • ಅಧ್ಯಕ್ಷ ಸ್ಥಾನಕ್ಕೆ 3
  • ಉಪಾಧ್ಯಕ್ಷ ಸ್ಥಾನಕ್ಕೆ 2
  • ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ತಲಾ 2  ಅಭ್ಯರ್ಥಿಗಳು
  • ಖಜಾಂಜಿ ಸ್ಥಾನ ಖಾಲಿ

ಪುತ್ತೂರು:ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಚುನಾವಣೆ ಮಾ.5ರಂದು ನಡೆಯಲಿದ್ದು ಒಟ್ಟು 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ನಾಮಪತ್ರ ಹಿಂಪಡೆಯಲು ಫೆ.28 ಕಡೆ ದಿನವಾಗಿತ್ತು.

 


ಫೆ.21 ರಿಂದ ಫೆ.24ರ ಸಂಜೆ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು.ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದರು.ಫೆ.25ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು.ಫೆ.28ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಇಬ್ಬರು, ಉಪಾಧ್ಯಕ್ಷ ಸ್ಥಾನದಿಂದ ಒಬ್ಬರು ಹಾಗೂ ಖಜಾಂಜಿ ಸ್ಥಾನದಿಂದ ಒಬ್ಬರು ನಾಮಪತ್ರ ಹಿಂಪಡೆದಿರುವುದರಿಂದ ಒಟ್ಟು 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಮನೋಹರ್ ಕೆ.ವಿ., ವಿವೇಕಾನಂದ ಕೆ.ಎಸ್, ಜಗನ್ನಾಥ ರೈ ಜಿ ಅವರು ಅಂತಿಮ ಕಣದಲ್ಲಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದೇವಾನಂದ ಕೆ, ಸಂತೋಷ್ ಕುಮಾರ್ ಎಮ್ ನಾಮಪತ್ರ ಹಿಂಪಡೆದಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ ಭಂಡಾರಿ ಹಾಗೂ ಕೃಷ್ಣಪ್ಪ ಗೌಡ ಅವರು ಅಂತಿಮ ಕಣದಲ್ಲಿದ್ದಾರೆ.ಹರಿಣಾಕ್ಷಿ ಜೆ.ಶೆಟ್ಟಿ ನಾಮಪತ್ರ ಹಿಂಪಡೆದಿದ್ದಾರೆ.ಕಾರ್ಯದರ್ಶಿ ಸ್ಥಾನಕ್ಕೆ ಚಿನ್ಮಯ್ ರೈ ಎಸ್.ಎನ್ ಹಾಗೂ ದೀಪಕ್ ಅಂತಿಮ ಕಣದಲ್ಲಿದ್ದಾರೆ. ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ವರಿ ಎಮ್ ಹಾಗೂ ಸೀಮಾ ಎಂ.ಎ.ಅಂತಿಮ ಕಣದಲ್ಲಿದ್ದಾರೆ. ಖಜಾಂಜಿ ಸ್ಥಾನಕ್ಕೆ ಹಾಲಿ ಖಜಾಂಜಿ ಚೇತನ್ ನಾಯಕ್ ಎಮ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.ಆದರೆ ಅವರೂ ನಾಮಪತ್ರ ಹಿಂತೆಗೆದುಕೊಂಡಿರುವುದರಿಂದ ಖಜಾಂಜಿ ಸ್ಥಾನ ಖಾಲಿಯಾಗಿದೆ.

ಮಾ.5ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4ರ ತನಕ ಮತದಾನ ನಡೆಯಲಿದೆ.ಅದೇ ದಿನ ಸಂಜೆ ಗಂಟೆ 4.30ರ ಬಳಿಕ ಚುನಾವಣಾ ಮತ ಎಣಿಕೆ ಮತ್ತು ಘೋಷಣೆ ನಡೆಯಲಿದೆ.ಮುಖ್ಯ ಚುನಾವಣಾಧಿಕಾರಿಯಾಗಿ ಎನ್.ಕೆ.ಜಗನ್ನಿವಾಸ ರಾವ್ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಫಝಲ್ ರಹಿಮ್ ಮತ್ತು ಶ್ಯಾಮ್ ಪ್ರಸಾದ್ ಕೈಲಾರ್ ಚುನಾವಣಾ ಪ್ರಕ್ರಿಯೆ ನಡೆಸಲಿದ್ದಾರೆ.ಪುತ್ತೂರು ವಕೀಲರ ಸಂಘದಲ್ಲಿ 400 ಮಂದಿ ಸದಸ್ಯರಿದ್ದರೂ ಸುಮಾರು 294 ಮಂದಿ ಮಾತ್ರ ಮತದಾನದ ಅರ್ಹತೆ ಹೊಂದಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here