ಕಡತ ವಿಲೇವಾರಿ ಅಭಿಯಾನ ಪುತ್ತೂರು ಎ.ಸಿ ಕಚೇರಿ ಶೇ. 100 ಗುರಿ ಸಾಧನೆ

0

ಪುತ್ತೂರು: ಕಡತ ವಿಲೇವಾರಿಗೆ ಸಂಬಂಧಿಸಿ ಫೆ.19 ರಿಂದ 28ರ ತನಕ ನಡೆದ ಅಭಿಯಾನದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಶೇ. 100 ಗುರಿ ಸಾಧನೆ ಮಾಡಿದೆ.


ವಿವಿಧ ಇಲಾಖೆಗಳಲ್ಲಿನ 03 ವರ್ಗಗಳಲ್ಲಿ ಬಾಕಿ ಇರುವ ಹಳೆಯ ಕಡತಗಳು, ದೂರು ಅರ್ಜಿಗಳು ಮತ್ತು ವಿವಿಧ ಸೇವೆಗಳಲ್ಲ ಮಾಹಿತಿಗೆ ಸಂಬಂಧಿಸಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಾಕಿ ಉಳಿದಿದ್ದ 243 ಕಡತಗಳು ವಿಲೇವಾರಿಯಾಗಿದ್ದು ಶೇ. 100 ಕಡತ ವಿಲೇವಾರಿ ಸಾಧನೆ ಮಾಡಿದೆ. ಅದೇ ರೀತಿ ಪುತ್ತೂರು ತಹಶೀಲ್ದಾರ್ ಕಚೇರಿಯಲ್ಲಿ 2466 ಕಡತ ಬಾಕಿ ಇದ್ದು, ಈ ಪೈಕಿ 2150೦ ಕಡತ ವಿಲೇವಾರಿಯಾಗಿದೆ. ಶೇ. 87 ಗುರಿ ಸಾಧನೆ ಆಗಿದೆ. ಬಾಕಿ ಇರುವ ಸೇವೆಗಳ ಪೈಕಿ 806  ರಲ್ಲಿ 657 ಪೂರ್ಣಗೊಂಡಿದ್ದು, ಶೇ.೮೨ ಸಾಧನೆ ಮಾಡಿದೆ. ಒಟ್ಟು ಶೆ. 86 ಗುರಿ ಸಾಧನೆ ಆಗಿದೆ. ಕಡಬದಲ್ಲಿ ಒಟ್ಟು ಶೇ. 70ಗುರಿ ಸಾಧಿಸಲಾಗಿದೆ.

ಕಡತ ಮತ್ತು ಸೇವೆಗಳ ಪೈಕಿ ವಿವಿಧ ಸರಕಾರಿ ಯೋಜನೆಗೆ ಬಾಕಿ ಇರುವ ಅರ್ಜಿಗಳಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ 806 ರಲ್ಲಿ ಶೇ. 100 ಗುರಿ ಸಾಧಿಸಲಾಗಿದೆ. ಕಡದಲ್ಲೂ ತಹಸೀಲ್ದಾರ್ ಕಚೇರಿಯಲ್ಲಿ ಶೇ.100 ಗುರಿ ಸಾಧನೆ ಮಾಡಲಾಗಿದೆ.

LEAVE A REPLY

Please enter your comment!
Please enter your name here