ಅತ್ತಿಕರಮಜಲು, ಬಾಳಿಲ ಮಸೀದಿಯಲ್ಲಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಪ್ರಯುಕ್ತ ಮೀಲಾದ್ ಕಾರ್ಯಕ್ರಮ

0

 

 

ಮೊಹಿಯದ್ದೀನ್ ಜುಮ್ಮಾ ಮಸ್ಜಿದ್ ಅತ್ತಿಕರಮಜಲು, ಬಾಳಿಲ ಹಾಗೂ ಮಿನ್ನತುಲ್ ಹುದಾ ಯಂಗ್ ಗೈಸ್ ಅತ್ತಿಕರಮಜಲು, ಬಾಳಿಲ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಜಶ್ನೇ ಮೀಲಾದ್, Milaad Fest 2022 ಕಾರ್ಯಕ್ರಮವು ಆದಿತ್ಯವಾರದಂದು ಅತ್ತಿಕರಮಜಲು ಮಸೀದಿ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.


ಬೆಳಗ್ಗೆ 9 ಗಂಟೆಗೆ ಮಸೀದಿ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ರವರು ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಜಿ ಪಿ ಇಸಾಕ್ ಸಾಹೇಬ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು
ಮಸೀದಿ ಖತೀಬರಾದ ಬಹು ಯಾಸಿರ್ ಅರಾಫತ್ ಕೌಸರಿ ಅವರು ದುವಾ ಮೂಲಕ ಉದ್ಘಾಟಿಸಿದರು.ಮಿನ್ನತುಲ್ ಹುದಾ ಯಂಗ್ ಗೈಸ್ ಅತ್ತಿಕರಮಜಲು ಇದರ ಅಧ್ಯಕ್ಷರಾದ ಶರೀಫ್ ಭಾರತ್ ಬಾಳಿಲ ಸ್ವಾಗತ ಭಾಷಣ ಮಾಡಿದರು.ನಂತರ ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹು ಝುಬೈರ್ ಮುಸ್ಲಿಯಾರ್, ಶರೀಫ್ ಅಮ್ಜದಿ, ಇಬ್ರಾಹಿಂ ಅತ್ತಿಕರಮಜಲು, ಎಂ ಎಂ ಯೂಸುಫ್ ಮುಸ್ಲಿಯಾರ್, ಜಮಾತ್ ಕಮೀಟಿ ಸದಸ್ಯರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮದ್ರಸ ವಿದ್ಯಾರ್ಥಿಗಳು,ಜಮಾಅತ್ ಸದಸ್ಯರುಗಳು ಹಾಗೂ ಊರಿನ ಹಿರಿಯರು, ಕಿರಿಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮೌಲೂದ್ ಪಾರಾಯಣದ ನಂತರ ಸೀರಣಿ ವಿತರಣೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

 

LEAVE A REPLY

Please enter your comment!
Please enter your name here