ಧರ್ಮಸ್ಥಳ ಕ್ಷೇತ್ರದಿಂದ‌ ಬೆಟ್ಟಂಪಾಡಿ ದೇವಾಲಯದ ಅನ್ನಛತ್ರ ಸಭಾಂಗಣ ಕಾಮಗಾರಿಗೆ ರೂ. 5 ಲಕ್ಷ ನೆರವು

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯಾದ ಅನ್ನಛತ್ರ ಮತ್ತು ಸಭಾಂಗಣ ನಿರ್ಮಾಣ ಕಾರ್ಯಗಳಿಗೆ ಧರ್ಮಸ್ಥಳ ಶ್ರೀ ಕ್ಷೇತ್ರದ ವತಿಯಿಂದ ಧರ್ಮಾಧಿಕಾರಿ ಡಾ| ಡಿ.‌ವೀರೇಂದ್ರ ಹೆಗ್ಗಡೆಯವರು ರೂ. 5 ಲಕ್ಷವನ್ನು ನೀಡಿದ್ದು, ದೇಣಿಗೆಯ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಪುತ್ತೂರು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆನಂದ ಕೆ., ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್ ರವರು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್ ಬಲ್ಲಾಳ್ ರವರಿಗೆ ಹಸ್ತಾಂತರಿಸಿದರು.

ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ, ಡಾ. ಶ್ರೀಕೃಷ್ಣ ಭಟ್, ಬಿ. ವೆಂಕಟ್ರಾವ್, ಭಾಸ್ಕರ ರೈ ಗುತ್ತು, ಮೋನಪ್ಪ ಗೌಡ ಮಿತ್ತಡ್ಕ, ಬಾಬು ಗೌಡ ಪಾರ, ಶೇಷಪ್ಪ ರೈ ಮೂರ್ಕಾಜೆ, ಈಶ್ವರ ಭಟ್ ಮಜಲುಗುಡ್ಡೆ, ಬಿ. ವಿಷ್ಣುರಾವ್,  ಸಂಜೀವ ರೈ ಕೊಮ್ಮಂಡ, ಪ್ರಭಾಕರ ರೈ ಬಾಜುವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here