ಮಾ.6:  ರೋಟರಿ ಈಸ್ಟ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್‌ಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಮಾ.6 ರಂದು ಅಧಿಕೃತ ಭೇಟಿ ನೀಡಿ, ಕ್ಲಬ್ ಹಮ್ಮಿಕೊಳ್ಳುವ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ ಕಬಕ ಜಂಕ್ಷನ್ ಬಳಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರನ್ನು ರೋಟರಿ ಈಸ್ಟ್‌ನ ಪದಾಧಿಕಾರಿಗಳು ಸ್ವಾಗತಿಸಲಿದ್ದಾರೆ. ಬಳಿಕ ಮುಳಿಯ ಗೋಶಾಲೆಗೆ ಭೇಟಿ, ಅಲ್ಲಿಯೇ ಬೆಳಗ್ಗಿನ ಉಪಹಾರ, ನಂತರ ಕೆದಂಬಾಡಿ, ಪ್ರಜ್ಞಾ ಆಶ್ರಮ್‌ನಲ್ಲಿನ ಪ್ರಾಜೆಕ್ಟ್‌ಗಳ ಉದ್ಘಾಟನೆ, ಮಧ್ಯಾಹ್ನ ರೋಟರಿ ಮನೀಷಾ ಸಭಾಂಗಣದಲ್ಲಿ ಭೋಜನ, ಬಳಿಕ ಕ್ಲಬ್ ಸದಸ್ಯರೊಂದಿಗೆ ಕ್ಲಬ್ ಅಸೆಂಬ್ಲಿ ನಡೆಯಲಿದೆ. ಸಂಜೆ ಮರೀಲ್ ದಿ ಪುತ್ತೂರು ಕ್ಲಬ್‌ನಲ್ಲಿ ಜರಗುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ, ವಲಯ ಕಾರ್ಯದರ್ಶಿ ಅಬ್ಬಾಸ್ ಕೆ.ಮುರ, ವಲಯ ಸೇನಾನಿ ಉಮೇಶ್ ನಾಯಕ್‌ರವರು ಈ ಸಂದರ್ಭದಲ್ಲಿ ಉಪಸ್ಥಿತಲಿರುವರು ಎಂದು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಪುರಂದರ ರೈ, ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here