ಪ್ರತಿಷ್ಠಿತ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

0

ಪುತ್ತೂರು: ಪುತ್ತೂರು, ಸುಳ್ಯ, ಕಡಬದಾದ್ಯಂತ ಒಟ್ಟು 12 ಶಾಖೆಗಳನ್ನೊಳಗೊಂಡು ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪ್ರತಿಷ್ಠಿತ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 2022-23ರಿಂದ ಮುಂದಿನ 5 ವರ್ಷಗಳ ಸಾಲಿನ ಆಡಳಿತ ಮಂಡಳಿಗೆ ನಿರ್ದೇಶಕರ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.

ಸಂಘದ ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಎನ್. ಸುಂದರ್ ರೈ ಸವಣೂರು, ಡಾ| ರಾಜೇಶ್ ಎಸ್ ರೈ ಮಂಗಳೂರು, ಬಿ.ಮಹಾಬಲ ರೈ ಬೋಳಂತೂರು, ಎನ್ ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಕೇನ್ಯ ರವೀಂದ್ರನಾಥ ಶೆಟ್ಟಿ, ಎಸ್.ಎಂ ಬಾಪು ಸಾಹೇಬ್ ಸುಳ್ಯ, ಎನ್ ರಾಮಯ್ಯ ರೈ ತಿಂಗಳಾಡಿ, ವಿ.ವಿ. ನಾರಾಯಣ ಭಟ್ ನರಿಮೊಗರು, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಬಿ.ಸೀತಾರಾಮ ಶೆಟ್ಟಿ ಮಂಗಳೂರು, ಜೈರಾಜ್ ಭಂಡಾರಿ ನೋಣಾಲು, ಎಂ. ಮಹಾದೇವ್ ಮಂಗಳೂರು, ಪೂರ್ಣಿಮ ಎಸ್.ಆಳ್ವ ಮಂಗಳೂರು ಮತ್ತು ಯಮುನಾ ಎಸ್ ರೈ ಗುತ್ತುಪಾಲ್ ರವರು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಸಂಘದ ಆಡಳಿತ ಮಂಡಳಿಗೆ ಚುನಾವಣೆಯು ಮಾ.13ಕ್ಕೆ ನಿಗದಿಯಾಗಿತ್ತು. ಅದಕ್ಕೂ ಮೊದಲೇ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಿಟರ್ನಿಂಗ್ ಅಧಿಕಾರಿ  ಸುಕನ್ಯಾರವರು ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರ ಘೋಷಣೆಯನ್ನು ಮಾಡಿದ್ದಾರೆ.

ನಿರಂತರ ಅವಿರೋಧ ಆಯ್ಕೆ
ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು 2002ರಲ್ಲಿ ಆರಂಭಗೊಂಡಿದ್ದು, ಅಲ್ಲಿಂದ ಸಂಘದ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯುತ್ತಿದೆ. ಸಂಘದ ಸ್ಥಾಪಕ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರ ನೇತೃತ್ವದಲ್ಲಿ ಈಗಾಗಲೇ ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ದರ್ಬೆ, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಉತ್ತಮ ವ್ಯವಹಾರ ನಡೆಸುತ್ತಿದೆ.

LEAVE A REPLY

Please enter your comment!
Please enter your name here