ಇಂಡಿಯನ್ ಹಿಪ್ ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್ – 2022 ಆಡಿಷನ್ ರೌಂಡ್‌ನಲ್ಲಿ ಪ್ರಥಮ

0

ಪುತ್ತೂರು: ದರ್ಬೆ ಬೆಥನಿ ಶಾಲೆ ಬಳಿ ಕಾರ್ಯನಿರ್ವಹಿಸುತ್ತಿರುವ NV ಡ್ಯಾನ್ಸ್ ಕ್ಲಾಸ್ ಇಲ್ಲಿ ತರಬೇತಿ ಪಡೆಯುತ್ತಿರುವ ನೃತ್ಯ ತಂಡವು ಮಾ.6 ರಂದು ಮಂಗಳೂರಿನ NITK ಸುರತ್ಕಲ್ ಇಲ್ಲಿ ನಡೆದ ಇಂಡಿಯನ್ ಹಿಪ್ ಹಾಪ್ ಡ್ಯಾನ್ಸ್ ಚಾಂಪಿಯನ್ ಶಿಪ್ – 2022 ಇದರ ಆಡಿಷನ್ ರೌಂಡ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮೇ.3 ರಿಂದ 7 ರವರೆಗೆ ಮುಂಬಾಯಿಯ ವಾಶಿಯಲ್ಲಿ ನಡೆಯುವ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿರುತ್ತಾರೆ.

ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಆದ್ಯಾ ಕೆ, 7 ನೇ ತರಗತಿಯ ಅಹನ ಕೆ, ಮನ್ವಿತ್ ಪಿ.ಎಸ್.,6 ನೇ ತರಗತಿಯ ಕೆಲಿಡಾ ಜೋಷ್ಣ ಡಿ.ಅಲ್ಮೇಡ, ಪ್ರಥಮ್ ಕಶ್ಯಪ್, 7 ನೇ ತರಗತಿಯ ,ಬೆಥನಿ ಹೈಸ್ಕೂಲಿನ 8 ನೇ ತರಗತಿಯ ಭವಿಕ್ಷ್ ನಾಯ್ಕ್ ಟಿ.,9 ನೇ ತರಗತಿಯ ತುಶಾಂತ್ ಸಿ.ಪಿ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇಲ್ಲಿಯ 7 ನೇ ತರಗತಿಯ ಜನಿತಾ ಸಿ.ಎನ್., 5ನೇತರಗತಿಯ ಸೃಷ್ಠಿ ಈ ತಂಡದಲ್ಲಿದ್ದಾರೆ ಎಂದು ತರಬೇತುದಾರರಾದ ನಿರಂಜನ್   ಹಾಗೂ  ವಿತನ್‌  ತಿಳಿಸಿದ್ದಾರೆ.  

LEAVE A REPLY

Please enter your comment!
Please enter your name here