ಉಪ್ಪಿನಂಗಡಿಯಲ್ಲಿ ಮೆಚ್ಚಿ ಸಂಭ್ರಮ

0

  • ಮಹಾಕಾಳಿ ದೇವಿಗೆ ಹೂವಿನ ಅಲಂಕಾರ
  • 8 ಮಂದಿಯಿಂದ 2 ದಿನಗಳಿಂದ ಅಲಂಕಾರ
  • ಸೌಂದರ್ಯ ಹೆಚ್ಚಿಸಿಕೊಂಡ ಮಹಾಕಾಳಿ ಮಂದಿರ

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಮಖೆ ಜಾತ್ರೆ ಉತ್ಸವಾದಿಗಳ ಪ್ರಕಾರದ ಮಹಾಕಾಳಿ ಮೆಚ್ಚಿ ಸಂಭ್ರಮ ಮಾ.8ರಂದು ರಾತ್ರಿ ನಡೆಯಲಿದ್ದು, ಅದರ ಸಲುವಾಗಿ ಮಹಾಕಾಳಿ ದೇವಿ ಮತ್ತು ಮಂದಿರ ಪೂರ್ಣಪ್ರಮಾಣದಲ್ಲಿ ಹೂವಿನಿಂದ ಅಲಂಕಾರಗೊಂಡಿದೆ.


ಮಾ. 7ರಂದು ಬೆಳಿಗ್ಗೆ 7 ಗಂಟೆಯಿಂದ ಶಂಕರ ನಾರಾಯಣ ಭಟ್ ನೇತೃತ್ವದಲ್ಲಿ ಮಂದಿರದ ಒಳಗಡೆ ದೇವಿಯ ಸಹಿತ ಹೂವಿನಿಂದ ಶೃಂಗಾರ, ಅಲಂಕಾರ ಆರಂಭವಾಗಿದ್ದು, ಮಂದಿರದ ಹೊರಗಡೆ ಸುತ್ತ-ಮುತ್ತ ಸುರೇಂದ್ರ ಕುಡುವ ಉಜಿರೆ ಇವರ ನೇತೃತ್ವದಲ್ಲಿ ಅಲಂಕಾರ ನಡೆಯುತ್ತಿದ್ದು, ಮಂಗಳವಾರ ಸಂಜೆಯ ಹೊತ್ತಿಗೆ ಅಲಂಕಾರ ಪೂರ್ಣಗೊಂಡು ಮಹಾಕಾಳಿ ಮಂದಿರ ತನ್ನ ಸೌಂದರ್ಯ ಹೆಚ್ಚಿಕೊಂಡು ಹೂವಿನಿಂದ ಕಂಗೊಳಿಸುತ್ತಿದ್ದುದು ಕಂಡು ಬಂತು.

2ದಿನಗಳಿಂದ ಅಲಂಕಾರ:
ಶಂಕರ ನಾರಾಯಣ ಭಟ್ ಮತ್ತು ಸುರೇಂದ್ರ ಕುಡುವ ಉಜಿರೆ ನೇತೃತ್ವದಲ್ಲಿ ಮಾ.7ರಂದು ಬೆಳಿಗ್ಗಿನಿಂದ ಅಲಂಕಾರ ಆರಂಭಗೊಂಡಿರುತ್ತದೆ. 8 ಮಂದಿ ನಿರಂತರವಾಗಿ ಅಲಂಕಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾ. 8ರಂದು ರಾತ್ರಿ ನಡೆಯುವ ಮೆಚ್ಚಿ ಕಾರ‍್ಯಕ್ರಮಕ್ಕೆ ಮುನ್ನ ಅಲಕಾರ ಪೂರ್ಣಗೊಳ್ಳಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here