ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಿಕೆ ಕುಬ್ಜ ಸಂಕರಣ ತಳಿಗಳ ಕುರಿತು ಮಾಹಿತಿ ಕಾರ್ಯಾಗಾರ

0

  • ಅಡಿಕೆ ಕೊಳೆರೋಗಕ್ಕೆ ಬುಡಕ್ಕೆ ಬಿಡುವ ಔಷಧಿ ಸಂಶೋಧನೆಯಾಗಲಿ- ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು; ಅಡಿಕೆ ಕೃಷಿಯಲ್ಲಿ ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಿರುವ ಸಿ.ಪಿ.ಸಿ.ಆರ್.ಐ ಅಡಿಕೆ ಬೆಳೆಗಾರರ ಪ್ರಮುಖ ಸಮಸ್ಯೆಯಾಗಿರುವ ಕೂಲಿಯಾಳುಗಳ ಕೊರತೆ ಮತ್ತು ಹವಾಮಾನ ವೈಪರೀತ್ಯಗಳಿಂದ ಅಡಿಕೆ ಕೃಷಿ ಬಾಧಿಸುವ ಕೊಳೆ ರೋಗಕ್ಕೆ ಬುಡಕ್ಕೆ ಬಿಡುವ ಔಷಧಿಯನ್ನು ಸಂಶೋಧನೆ ನಡೆಸಬೇಕಾದ ಅವಶ್ಯಕತೆಯಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

 

ಸಿ.ಪಿ.ಸಿ.ಆರ್.ಐ ವಿಟ್ಲ, ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೆಶನಾಲಯ ಕಲ್ಲಿಕೋಟೆ ಹಾಗೂ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಮಾ.9ರಂದು ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಡಿಕೆ ಕುಬ್ಜ ಸಂಕರಣ ತಳಿಗಳ ಕುರಿತು ಮಾಹಿತಿ ಕಾರ್ಯಾಗಾರ ಕೃಷಿಕ್ಷೇತ್ರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಡಿಕೆ ಜಿಲ್ಲೆಯ ಜೀವನಾಡಿ. ಇಲ್ಲದಿದ್ದರೆ ಬದುಕ ಕಷ್ಟ. ಅಡಿಕೆ ಕೃಷಿ ಅಭಿವೃದ್ಧಿಯಲ್ಲಿ ಬೆಳೆಗಾರರಿಗೆ ಸಿಪಿಸಿಆರ್.ಐ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಅಡಿಕೆ ಕೃಷಿಯಲ್ಲಿ ಮರಕ್ಕೆ ಹತ್ತು ಕಾರ್ಮಿಕರ ಕೊರತೆಯೇ ಪ್ರಮುಖವಾಗಿದೆ. ಸಂಶೋಧನೆಯ ಮೂಲಕ ಕುಬ್ಜ ತಳಿ ಅಭಿವೃದ್ಧಿಪಡಿಸಿರು ಸಿ.ಪಿ.ಸಿ.ಆರ್.ಐ ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಿಸಲು ಬುಡಕ್ಕೆ ಔಷಧಿ ಸಂಶೋಧನೆ ನಡೆಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಎಸ್.ಬಿ. ಜಯರಾಮ ರೈ ಮಾತನಾಡಿ, ಕೃಷಿ ಯಲ್ಲಿ ವಿಧಾನಗಳು ಬದಲಾಗಿದೆ. ವಿವಿಧ ತಳಿಯ ಗಿಡಗಳಿವೆ. ಅದರ ವಿಧಾನವು ವಿಭಿನ್ನವಾಗಿ ದೆ. ಅದಕ್ಕೆ ಪೂರಕವಾಗಿ ಗಿಡಗಳನ್ನು ಬೆಳೆಸಬೇಕು. ವಿವಿಧ ರೋಗಳು ಬರುತ್ತಿದ್ದು ಅದಕ್ಕೆ ಪರಿಹಾರ ಕಂಡು ಕೊಳ್ಳಬೇಕು ಎಂದರು.

 


ಅಧ್ಯಕ್ಷತೆ ವಹಿಸಿದ್ದ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ, ಅಡಿಕೆ ಕೃಷಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಇಳಿಕೆ ಸಾಮಾನ್ಯ. ಅದರೂ ಬೇಡಿಕೆ ಯಾವತ್ತೂ ಇದೆ. ಅಡಿಕೆ ಕೃಷಿಯಲ್ಲಿ ಮಾಡಿದ ಸಾಧನೆ ಬೇರೆ ಕ್ಷೇತ್ರದಲ್ಲಿ ಸಾಧ್ಯವಿಲ್ಲ. ಸಂಘದ ಮೂಲಕ ಅಡಿಕೆ ಬೆಳೆಗಾರರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದ್ದು ವಿಜ್ಞಾನಿಗಳು ಮೂಲಕ ಅಡಿಕೆ ಕೃಷಿಗೆ ಸಂಬಂಧಿಸಿದ ಆಧುನಿಕ ಕೃಷಿ ವಿಧಾನಗಳ ಮಾಹಿತಿಗಳನ್ನು ರೈತರಿಗೆ ತಲುಪಿಸುವ ಕಾರ್ಯಾ ಮಾಡಲಾಗುತ್ತಿದೆ ಎಂದರು.

ಸಂಘದ ನಿರ್ದೇಶಕ ಎಸ್.ಡಿ ವಸಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ಹಣಾಧಿಕಾರಿ ಜಯಪ್ರಕಾಶ್ ರೈ ವಂದಿಸಿದರು. ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಿ.ಪಿ.ಸಿ.ಆರ್ ವಿಜ್ಞಾನಿಗಳಾದ ಡಾ.ನಾಗರಾಜ್ ಎನ್.ಆರ್, ಡಾ.ರಾಜ್ ಕುಮಾರ್ ಹಾಗೂ ಡಾ.ಭವಿಷ್ ಕುಬ್ಜ ತಳಿ ಹಾಗೂ ಕೃಷಿ ಅಭಿವೃದ್ಧಿ, ಬಾಧಿಸುವ ರೋಗಳು ಹಾಗೂ ಉತ್ಪಾದನೆ ಕುರಿತು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here