ಬೆಳ್ಳಾರೆ ಜ್ಞಾನದೀಪದಲ್ಲಿ ಕ್ಷಯ ಮತ್ತು ವ್ಯಸನಮುಕ್ತ ಭಾರತ ಜಾಗೃತಿ ಕಾರ್ಯಕ್ರಮ

0

 

ಕ್ಷಯ ಮತ್ತು ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರೀಕನೂ ಸಹಕರಿಸುವ ಅಗತ್ಯವಿದೆ ಎಂದು ಸುಳ್ಯ ಅರೋಗ್ಯ ಇಲಾಖೆಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಹೇಳಿದರು.


ಅವರು ಬೆಳ್ಳಾರೆ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಕ್ಷಯ ಮತ್ತು ವ್ಯಸನ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಮಂಗಳೂರು ಜಿಲ್ಲಾ ಕ್ಷಯ ರೋಗ ಚಿಕಿತ್ಸಾ ಕೇಂದ್ರದ ಪಿ.ಪಿ.ಎಂ ಕೋಆರ್ಡಿನೇಟರ್ ಮನೋಜ್.ಕೆ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಗೀತೆಯ ಮೂಲಕ ಮಾಹಿತಿ ನೀಡಿದರು. ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಚಂದನ್ ಕೆ. ಎಸ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕ ಶರತ್ ಕಲ್ಲೋಣಿ ವಂದಿಸಿದರು. ಇಂಟರ್ಯಾಕ್ಟ್ ಕ್ಲಬ್ ಶಿಕ್ಷಕ ಸಂಯೋಜಕ ಗಣೇಶ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here