ಅರಂತೋಡು – ತೊಡಿಕಾನ ಪ್ರಾ. ಕೃ. ಪ. ಸ. ಸಂಘ :  ಭೂ ಖರೀದಿ ಸಾಲದ ಯೋಜನೆಗೆ ಚಾಲನೆ

0

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲಿ ಕೃಷಿಯೇತರ ಭೂ ಖರೀದಿ ಸಾಲದ ಯೋಜನೆಗೆ ಅ. 20  ರಂದು ಚಾಲನೆಯನ್ನು ನೀಡಲಾಯಿತು. ಈ ಯೋಜನೆಯ ಮೊದಲ ಗ್ರಾಹಕರಾದ ಸಂಘದ ಸದಸ್ಯ ನವೀನ್ ಅಳಿಕೆ ಇವರಿಗೆ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಚೆಕ್ ಅನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ,ನಿಧೀಶ್ ಅರಂತೋಡು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ವಾಸುದೇವ ನಾಯಕ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here