ಕಂದಾಯ ದಾಖಲೆಗಳು ಮನೆ ಬಾಗಿಲಿಗೆ: ಮರ್ದಾಳದಲ್ಲಿ ಚಾಲನೆ

0

ಕಡಬ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಮರ್ದಾಳ ಅಂಬೇಡ್ಕರ್ ಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

 


ಕಡಬ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದ್ದು ಮರ್ದಾಳ ದಲ್ಲಿ ಸಾಂಕೇತಿಕವಾಗಿ ದಾಖಲೆಗಳನ್ನು ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಡಬ ತಹಸೀಲ್ದಾರ್ ಅನಂತ ಶಂಕರ್ ಬಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರಕಾರ ಜನರ ಮನೆಬಾಗಿಲಿಗೆ ಕಂದಾಯ ಇಲಾಖಾ ದಾಖಲೆಗಳನ್ನು ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದೆ. ಕೆಲವು ಫಲಾನುಭವಿಗಳಿಗೆ ಇಲ್ಲಿ ದಾಖಲೆ ಹಸ್ತಾಂತರಿಸಲಾಗುತ್ತಿದೆ. ಬಳಿಕ ಗ್ರಾಮ ಪ್ರತೀ ಮನೆಮನೆಗಳಿಗೆ ಭೇಟಿ ನೀಡಿ ದಾಖಲೆಗಳ ಹಸ್ತಾಂತರಿಸಲಾಗುವುದು, ಈ ಕಾರ್ಯ ಇಡೀ ರಾಜ್ಯದಲ್ಲಿ ಏಕ ಕಾಲದಲ್ಲಿ ನಡೆಯಲಿದೆ, ಅದೇ ರೀತಿ ಕಡಬ ತಾಲುಕಿನ ಎಲ್ಲಾ ಗ್ರಾಮಗಳಲ್ಲಿ ಕಾರ್ಯಕ್ರಮ ಅನುಷ್ಠಾನವಾಗಲಿದೆ ಎಂದು ಹೇಳಿದರು. ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕೋಡಂದೂರು ದಾಖಲೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪುತ್ತೂರು ಎ.ಪಿ.ಎಂಸಿ ನಿರ್ದೆಶಕ ಮೇದಪ್ಪ ಗೌಡ ಡೆಪ್ಪುಣಿ, ಗ್ರಾಮಲೆಕ್ಕಾಧಿಕಾರಿ ಶೃತಿ, ಮರ್ದಾಳ ಗ್ರಾ.ಪಂ ಸದಸ್ಯರಾದ ಗಂಗಾಧರ ರೈ ಬಸವಪಾಲು, ಸ್ಮಿತಾ ಮಾಯಿಪಾಜೆ, ಮೀನಾಕ್ಷಿ , ಯಮುನಾ, ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಸಹಾಯಕ ಉದಯಕುಮಾರ್ ಪಿ.ಆರ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here