ಸುನಾದ ಸಂಗೀತ ಕಲಾಶಾಲೆಯಿಂದ ಸುನಾದ ಗೃಹ ಸಂಗಮ, ಸನ್ಮಾನ

0

 

 

ಪುತ್ತೂರು : ಸುನಾದ ಸಂಗೀತ ಕಲಾಶಾಲೆ ಪುತ್ತೂರು ಅರ್ಪಿಸುವ ಸುನಾದ ಗೃಹ ಸಂಗಮ ಕಾರ್ಯಕ್ರಮ ಮಾ.13ರಂದು ಬನ್ನೂರು ಮೇಲ್ಮಜಲು ಉಮೇಶ್ ದೇವಾಡಿಗರ ಮನೆಯಲ್ಲಿ ನಡೆಯಿತು. ವಿದುಷಿ ಶಿಲ್ಪಾ ಸಿ.ಎಚ್.ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್‌ನಲ್ಲಿ ಕೇಶವ ಮೋಹನ್ ಕುಮಾರ್ ಮೈಸೂರು, ಮೃದಂಗದಲ್ಲಿ ಡಾ|ಅಕ್ಷಯ ನಾರಾಯಣ ಕಾಂಚನ, ಮೋರ್ಚಿಂಗ್‌ನಲ್ಲಿ ವಿದ್ವಾನ್ ಶ್ಯಾಂಭಟ್ ಅರಂಭೂರು ಸಹಕರಿಸಿದರು.

 

 

ಗೌರವಾರ್ಪಣೆ: ಕಲಾವಿದರಿಗೆ ಉಷಾ ಶ್ರೀಧರ್ ಭಂಡಾರಿಯವರು ಸ್ಮರಣೆಕೆ ನೀಡಿ ಗೌರವಿಸಿದರು, ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್ ದಂಪತಿಗಳಿಗೆ ಕಶೆ ಕೋಡಿ ಸೂರ್ಯ ನಾರಾಯಣ ಭಟ್ ಸನ್ಮಾನಿಸಿದರು.   ಎಂ. ವೇಣುಗೋಪಾಲ್ ಪುತ್ತೂರು ಫಲತಾಂಬೂಲ ಹಾಗೂ ಗುರುಕಾಣಿಕೆ ನೀಡಿ ಗೌರವಿಸಿದರು.

ಸನ್ಮಾನ: ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್‍ಯನಾರಾಯಣ ಭಟ್, ಕಹಳೆ ನ್ಯೂಸ್‌ನ ಮುಖ್ಯಸ್ಥ, ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ಮತ್ತು ಬೆಳ್ತಂಗಡಿ ಸುದ್ದಿ ಪತ್ರಿಕೆಯ ಸಿಇಒ ಸಿಂಚನ ಊರುಬೈಲು ರವರನ್ನು ಸನ್ಮಾನಿಸಲಾಯಿತು.   ಉಮೇಶ್ ದೇವಾಡಿಗ, ಸರಸ್ವತಿ ಉಮೇಶ್, ತ್ರೀವೇಣಿ ಗಣೇಶ್ , ವೇಣುಗೋಪಾಲ ಪುತ್ತೂರು  ಗಣೇಶ್ ಬಿ.  ಬಂದ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.    ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here