ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಅನಾವರಣ

0

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಎ5ರಿಂದ ಎ10ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಮಾ 16ರಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ಗ್ರಾಮ ದೈವಸ್ಥಾನ, ಕೊಯಕ್ಕುಡೆ ಶ್ರೀ ಶಿರಾಡಿ ರಾಜನ್ ದೈವಸ್ಥಾನ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕೆಡೆಂಜಿಗುತ್ತು, ನಗ್ರಿಗುತ್ತು ಇಲ್ಲಿ ಆಮಂತ್ರಣ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

 

 

 

ಈ ಸಂದರ್ಭದಲ್ಲಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು, ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಹರೀಶ್ ಆಚಾರ್ ನಗ್ರಿಗುತ್ತು, ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ತೋಟಂತಿಲ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಸದಸ್ಯರಾದ ಮಹಾಲಿಂಗೇಶ್ವರ ಶರ್ಮ ಕಜೆ, ಬಾಲಕೃಷ್ಣ ಗೌಡ ನೂಜಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಉಪಾಧ್ಯಕ್ಷರಾದ ಚಂದ್ರಶೇಖರ ಬರೆಪ್ಪಾಡಿ, ನಾಗೇಶ್ ಕೆ.ಕೆಡೆಂಜಿ, ಜತೆ ಕಾರ್ಯದರ್ಶಿ ಭರತ್ ಕುಮಾರ್ ನಡುಮನೆ, ಆಡಳಿತ ಸಮಿತಿಯ ಖಾಯಂ ಆಹ್ವಾನಿತರಾದ ಜತ್ತಪ್ಪ ರೈ ಬರೆಪ್ಪಾಡಿ, ಚೆನ್ನಪ್ಪ ಗೌಡ ನೂಜಿ, ತಾರಾನಾಥ ರೈ ನಗ್ರಿ, ಸುರೇಶ್ ಕಾಪಿನಕಾಡು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೇಸರಿ ಶಾಲು ವಿತರಣೆ, ಲಕ್ಕಿಡಿಪ್ ಪುಸ್ತಕ ಅನಾವರಣ: ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕೇಸರಿ ಶಾಲು ವಿತರಣೆ ಮತ್ತು ಲಕ್ಕಿಡಿಪ್ ಪುಸ್ತಕದ ಅನಾವರಣವು ನಡೆಯಿತು.

LEAVE A REPLY

Please enter your comment!
Please enter your name here