ಸುಳ್ಯದಲ್ಲಿ ಕ.ಸಾ.ಪ.ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ

0


ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಕೇಶವ ದೇವಸ್ಥಾನ ಇದರ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ಶ್ರೀ ಚೆನ್ನ ಕೇಶವ ದೇವಸ್ಥಾನದ ಸಭಾಂಗಣ ಸುಳ್ಯದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಇದರ ಪೂರ್ವಾದ್ಯಕ್ಷ ಶ್ರೀಮತಿ ಮೀನಾಕ್ಷಿ ಗೌಡ ಎಂ. ಇವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇದರ ಅಧ್ಯಕ್ಷ ಕೆ. ಆರ್. ಗೋಪಾಲಕೃಷ್ಣ, ಶ್ರೀಮತಿ ಗಿರಿಜಾ ಎಂ. ವಿ. , ಶ್ರೀಮತಿ ಯಶೋದಾ ಎಂ. ಬಿ, ಮತ್ತು ವೇದಾವತಿ ಕೇರ್ಪಳ ಇವರು ಸಹಕರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ ತುದಿಯಡ್ಕ ಇವರು ವಹಿಸಿದರು.

ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಲೀಲಾ ದಾಮೋದರ್, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಶ್ರೀಮತಿ ಹೇಮಾ ದೇಂಗೋಡಿ, ಕೇಶವ ಸಿ ಎ, ಲೋಕನಾಥ ಬೊಳುಬೈಲು, ಜಯರಾಮ ಶೆಟ್ಟಿ, ಪ್ರಭಾಕರನ್ ಸಿ ಹೆಚ್ ಇವರು ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ತೇಜಸ್ವಿ ಕಡಪಳ ವಂದಿಸಿದರು.

LEAVE A REPLY

Please enter your comment!
Please enter your name here