ಮಡಿಕೇರಿಯಿಂದ ನಾಪತ್ತೆಯಾಗಿದ್ದ ಮುಸ್ಲಿಂ ಮಹಿಳೆ ಕಡಬದಲ್ಲಿ ಪತ್ತೆ

0

  • ಮಹಿಳೆ ಮಡಿಕೇರಿ ಪೊಲೀಸರ ವಶಕ್ಕೆ 

ಕಡಬ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಮುಸ್ಲಿಂ ಮಹಿಳೆಯೋರ್ವರು ಕಡಬ ಸಮೀಪದ ನೆಟ್ಟಣದ ಮಹಿಳೆಯೋರ್ವರ ಮನೆಯಲ್ಲಿದ್ದು, ಅವರನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದಾರೆ.

ಮಡಿಕೇರಿ ಭಾಗದ ಮುಸ್ಲಿಂ ಮಹಿಳೆಯೋರ್ವರು ಹಿಂದೂ ಯುವಕನನ್ನು ಮದುವೆಯಾಗಿದ್ದು ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು ಎನ್ನಲಾಗಿದ್ದು, ಬಳಿಕ ಆ ಮಹಿಳೆ ಸುಳ್ಯಕ್ಕೆ ಬಂದಿದ್ದರು ಎನ್ನಲಾಗಿದ್ದು ಅಲ್ಲಿಂದ ನೆಟ್ಟಣ ಸಮೀಪದ ಮುಸ್ಲಿಂ ಸಮುದಾಯದ ಮಹಿಳೆಯೋರ್ವರು ಮನೆ ಕೆಲಸಕ್ಕೆಂದು ಕರೆ ತಂದಿದ್ದರು ಎಂದು ತಿಳಿದು ಬಂದಿದೆ. ನಾಪತ್ತೆಯಾಗಿದ್ದ ಮಹಿಳೆಯ ಪತಿ ಮಡಿಕೇರಿಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಮಹಿಳೆಯು ನೆಟ್ಟಣದಲ್ಲಿ ಇರುವುದನ್ನು ಪೋಲಿಸರು ಪತ್ತೆ ಹಚ್ಚಿದ್ದರು. ಮಾ.19ರಂದು ನೆಟ್ಟಣದ ಮಹಿಳೆ ಹಾಗೂ ನಾಪತ್ತೆಯಾಗಿದ್ದ ಮಹಿಳೆ ಅಟೋ ರಿಕ್ಷಾದಲ್ಲಿ ಕಡಬಕ್ಕೆ ಬರುತ್ತಿದ್ದ ವೇಳೆ ಐತ್ತೂರು ಪಂಚಾಯತ್ ಬಳಿ ಪೋಲಿಸರು ಅವರನ್ನು ವಶಪಡಿಸಿಕೊಂಡಿದ್ದರು. ಇದೀಗ ಮಡಿಕೇರಿ ಪೊಲೀಶರು ಮಹಿಳೆಯನ್ನು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here