ಪುತ್ತೂರು: ರಿಕ್ಷಾ ಪಲ್ಟಿಯಾಗಿ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪದ ಕಟ್ಟತ್ತಡ್ಕ ಎಂಬಲ್ಲಿ ಮಾ.19ರಂದು ನಡೆದಿದೆ. ಕುಂಬ್ರದಿಂದ ಕಟ್ಟತ್ತಡ್ಕಕ್ಕೆ ಹೋಗುತ್ತಿದ್ದ ರಿಕ್ಷಾ ಕಟ್ಟತಡ್ಕ ತಿರುವಿನಲ್ಲಿ ಪಲ್ಟಿಯಾಗಿದ್ದು ರಿಕ್ಷಾದಲ್ಲಿದ್ದ ಮಹಿಳೆ ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ರಿಕ್ಷಾಗೂ ಹಾನಿ ಸಂಭವಿಸಿದೆ. ಗಾಯಾಳು ಮಹಿಳೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದಾಗಿ ತಿಳಿದುಬಂದಿದೆ.