ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಶಿಲಾದ್ವಾರ ಮೂಹೂರ್ತ, ನೂತನ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

0

 

ಪುತ್ತೂರು : ಅರಿಯಡ್ಕ-ಕಲಿಯುಗದಲ್ಲಿ ಭಜನೆಗೆ ವಿಶೇಷವಾದ ಪಾವಿತ್ರ್ಯತೆ ಇದೆ. ಭಜನೆ ಮನೆ ಮನಗಳನ್ನು ಜೋಡಿಸುತ್ತದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ. ದೇವಸ್ಥಾನದಷ್ಟೇ ಪಾವಿತ್ರ್ಯ ಕ್ಷೇತ್ರ ಭಜನಾ ಮಂದಿರ ಕೂಡ ಮಂದಿರದ ಕೆಲಸಕಾರ್‍ಯಗಳು ಆದಷ್ಟು ಶೀರ್ಘವಾಗಿ ನೆರವೇರಿ, ಸುಂದರ ಮಂದಿರ ಲೋಕಾರ್ಪಣೆಗೊಳ್ಳಲಿ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಮಾ.20ರಂದು ಪುನಃನಿರ್ಮಿತ ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಅರಿಯಡ್ಕ ಇದರ ಶಿಲಾದ್ವಾರ ನ್ಯಾಸ ಮುಹೂರ್ತ ಕಾರ್‍ಯಕ್ರಮ ನೆರವೇರಿಸಿ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಮಾತಾಡಿದರು. ಕೊಂಬೆಟ್ಟು ಶ್ರೀರಾಮಕೃಷ್ಣ ಹೆಣ್ಮಕ್ಕಳ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತಾಡಿ ಭಜನಾಮಂದಿರ ಹಾಗೂ ನೂತನ ಸಮುದಾಯ ಭವನ ನಮ್ಮೂರಿನ ಸಕಲರಿಗೂ ಪ್ರಯೋಜವಾಗಲಿ, ಸಮಿತಿಯ ಯೋಚನೆ ಹಾಗೂ ಯೋಜನೆ ಕಾರ್‍ಯರೂಪಕ್ಕೆ ಬಂದು ಕೃಷ್ಣನ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಮೂಡಿಬರಲಿ.ನನ್ನಿಂದಾಗುವ ಸಹಕಾರವನ್ನು ಕ್ಷೇತ್ರಕ್ಕೆ ನೀಡುವೆ ಎಂದು ಶುಭಾಹಾರೈಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕರವರು ಮಾತಾಡಿ ಈ ಪುಣ್ಯಕ್ಷೇತ್ರ ಹಿಂದೂ ಸಂಸ್ಕೃತಿ-ಸಂಸ್ಕಾರವನ್ನು ನೀಡುವ ಕ್ಷೇತ್ರವಾಗಿ ಮೂಡಿಬರಲಿ.ಭಜನೆಯೊಂದಿಗೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಾಗಿರಲಿ ಎಂದು ಹಾರೈಸಿದರು. ಸಭಾದ್ಯಕ್ಷತೆ ವಹಿಸಿ ಮಾತಾಡಿದ ಶೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ ಮಾತಾಡಿ ಗ್ರಾಮದ ಪ್ರತಿಯೊಂದು ಮನೆಯಿಂದ ದೇಣಿಗೆ ಸಂಗ್ರಹಿಸುವ ಸಂಕಲ್ಪ ಮಾಡಿದಾಗ ಹಣ ತನಿಂದತಾನೇ ಬರಲು ಸಾಧ್ಯ. ಕ್ಷೇತ್ರದ ಕಾರ್‍ಯಗಳು ಅತೀಶೀರ್ಘ್ರದಲ್ಲಿ ಪೂರ್ಣಗೊಂಡು ಶ್ರೀಕೃಷ್ಣ ಬಾಲಾಲಯದಿಂದ ನೂತನ ಮಂದಿರದಲ್ಲಿ ಸ್ಥಾಪಿಸಲ್ಪಟ್ಟು ನಮ್ಮೆಲ್ಲರ ಆಶೋತ್ತರಗಳು ಈಡೇರಲಿ ಎಂದು ಹಾರೈಸಿದರು.

ಬ್ರಹ್ಮರ್ಷಿ ಕುಂಟಾರು ರವೀಶತಂತ್ರಿಯವರು ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ನೂತನ ಸಮುದಾಯಭವನಕ್ಕೆ ಶಂಕುಸ್ಥಾಪನೆ ನೇರವೇರಿಸಿದರು.

 

ಗೌರವಾರ್ಪಣೆ: ಸರ್ವವಿಧದಲ್ಲಿ ಸಹಕಾರ ನೀಡಿದ ಅಮ್ಮಣ್ಣ ರೈ ಡಿ. ಪಾಪೆಮಜಲು, ಮನು ರೈ ನರಿಮೊಗ್ರು, ನಿರಂಜನ್ ನನ್ಯ ಕಾವು,ನಾರಾಯಣ ಪೂಜಾರಿ ಮಡ್ಯಂಗಳ, ದೀಪಕ್ ಕುಲಾಲ್ ಕೌಡಿಚ್ಚಾರು, ಶಿಲ್ಪಿ ಶಂಕರ ಮುರುಡೇಶ್ವರರವರನ್ನು ಸಂಸದರು ಶಾಲು ಹಾಕಿ ಗೌರವಿಸಿದರು.

ವೇದಿಕೆಯಲ್ಲಿ ಅರಿಯಡ್ಕ ಗ್ರಾ.ಪಂಚಾಯತ್ ಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ, ಉದ್ಯಮಿ ಸುಖೇಶ್ ಚೌಟ ಬಡಕಬೈಲು, ಜಗದೀಶ್ ಅಧಿಕಾರಿ ಮಂಗಳೂರು, ಜೀರ್ಣೊದ್ವಾರ ಸಮಿತಿ ಅಧ್ಯಕ್ಷ ವಾಸುಪೂಜಾರಿ ಗುಂಡ್ಯಡ್ಕ, ಆಡಳಿತ ಸಮಿತಿ ಅಧ್ಯಕ್ಷ ರಾಮದಾಸ ರೈ ಮದ್ಲ, ಭಜನಾ ಸಂಕೀರ್ತನಾ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಕುತ್ಯಾಡಿ ಉಪಸ್ಥಿತರಿದ್ದರು.

ಕೊರಗಪ್ಪ ಗೌಡ ಮಡ್ಯಂಗಳ, ಜಗದೀಶ್ ನಾಯ್ಕ ಬೇಂಗತ್ತಡ್ಕ, ಪ್ರತೀಕ್ ಅಕಾಯಿ ರಾಜೇಶ್ ರೈ ಕುತ್ಯಾಡಿ, ವಿಜಯಭಾರತಿ, ಸುಶಾಂತ್ ರೈ ಕುತ್ಯಾಡಿ ಶಾಲು ಹಾಕಿ ಗೌರವಿಸಿದರು. ಆಡಳಿತ ಸಮಿತಿ, ಜೀರ್ಣೊದ್ಧಾರ ಸಮಿತಿ ಮತ್ತು ಭಜನಾ ಸಂಕೀರ್ತನ ಸಮಿತಿ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು. ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಪ್ರಸ್ತಾವಿಕ ಮಾತಾಡಿ ಸ್ವಾಗತಿಸಿದರು, ಆಡಳಿತ ಸಮಿತಿ ಪ್ರ.ಕಾರ್‍ಯದರ್ಶಿ ದುರ್ಗಾಪ್ರಸಾದ್ ಕುತ್ಯಾಡಿ ಮನವಿ ವಾಚಿಸಿ, ಅನೂಪ ಕೃಷ್ಣ ರೈ ಕುತ್ಯಾಡಿ ಪ್ರಾರ್ಥಿಸಿದರು. ಜೀರ್ಣೊದ್ವಾರ ಸಮಿತಿ ಪ್ರಧಾನ ಕಾರ್‍ಯದರ್ಶಿ ಲೋಕೆಶ್ ರೈ ಅಮೈ ವಂದಿಸಿ, ಕಾರ್‍ಯದರ್ಶಿ ಗಂಗಾಧರ ನಾಯ್ಕ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here