ಬೆಳ್ಳಾರೆಯಲ್ಲಿ ಕೆಂಪೇ ಗೌಡ ಪ್ರತಿಮೆಗೆ ಪವಿತ್ರ ಮೃತ್ತಿಕೆ ಸಂಗ್ರಹ

0

 

ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇ ಗೌಡ ಕಂಚಿನ ಪ್ರತಿಯೆಯ ಹಿನ್ನೆಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು, ಈ ಅಭಿಯಾನ ರಥವು ನ‌.01 ರಂದು ಬೆಳ್ಳಾರೆಗೆ ಆಗಮಿಸಿತು.

ಬೆಳ್ಳಾರೆ ಅಂಬೇಡ್ಕರ್ ಭವನದ ಸಮೀಪ ಸ್ವಾಗತಿಸಲಾಯಿತು.ಬೆಳ್ಳಾರೆ, ಕೊಡಿಯಾಲ,ಪೆರುವಾಜೆ,ಕಳಂಜ, ಬಾಳಿಲ ಪಂಚಾಯತ್ ನಿಂದ ಪವಿತ್ರ ಮೂಲ ಮೃತ್ತಿಕೆ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ, ಸದಸ್ಯ ರವೀಂದ್ರ ರೈ ಟಪ್ಪಾಲುಕಟ್ಟೆ, ಹರ್ಷ ಜೆ,ಪಿ.ಡಿ.ಒ ಹೂವಪ್ಪ ಗೌಡ ,ಕಾರ್ಯದರ್ಶಿ ಜಯಶೀಲ ರೈ, ಕೊಡಿಯಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಪಿ.ಡಿ.ಒ ಚಂದ್ರಾವತಿ, ಪೆರುವಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪಿ.ಡಿಒ ಜಯಪ್ರಕಾಶ್ ಅಲೆಕ್ಕಾಡಿ, ಸದಸ್ಯ ಪದ್ಮನಾಭ ಪೆರುವಾಜೆ,ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ,ಉಪಾಧ್ಯಕ್ಷ ಗಣೇಶ್ ರೈ,ಪಿ.ಡಿ.ಒ ಕೀರ್ತಿಪ್ರಸಾದ್, ಸಿಬ್ಬಂದಿಗಳಾದ ತಿರುಮಲೇಶ್ವರ,ಗಿರಿಧರ,
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಹಾಲು ಸೊಸೈಟಿ ಅಧ್ಯಕ್ಷ ರುಕ್ಮಯ್ಯ ಗೌಡ , ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್,ಕಾರ್ಯದರ್ಶಿ ಆನಂದ ಉಮಿಕ್ಕಳ, ಸಂಜಯ್ ನೆಟ್ಟಾರ್, ಪದ್ಮನಾಭ ಬೀಡು ,ಆನಂದ ಪಡ್ಪು, ಚಂದ್ರಹಾಸ ಮಣಿಯಾಣಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here