ಕೆಎಸ್ಸಾರ್ಟಿಸಿಯಿಂದ ಕುಕ್ಕೆಸುಬ್ರಹ್ಮಣ್ಯದಿಂದ ತಿರುಪತಿಗೆ ಪ್ರತಿದಿನ ರಾಜಹಂಸ ಬಸ್ ಸೌಲಭ್ಯ

0

ಪುತ್ತೂರು: ಪವಿತ್ರ ತೀರ್ಥ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ತಿರುಪತಿಗೆ ಯಾತ್ರೆ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ‌ ನಿಗಮವು ನೂತನವಾಗಿ ರಾಜಹಂಸ ಬಸ್ ಸೌಲಭ್ಯವನ್ನು ಪ್ರಾರಂಭಿಸಿದ್ದು ಮಾ.26ರಂದ ಚಾಲನೆ ದೊರೆಯಲಿದೆ.

 

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ನೂತನ ಬಸ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಪ್ರತಿದಿನ ಸುಬ್ರಹ್ಮಣ್ಯದಿಂದ ತಿರುಪತಿಗೆ ಸೌಲಭ್ಯವಿದ್ದು ಕುಕ್ಕೆ ಸುಬ್ರಹ್ಮಣ್ಯದಿಂದ ರಾತ್ರಿ 9:00ಕ್ಕೆ ಹೊರಡುವ ಬಸ್ ಹಾಸನ, ಬೆಂಗಳೂರು, ಚಿತ್ತೂರು ಮೂಲಕ ಪ್ರಯಾಣಿಸಿ ಬೆಳಿಗ್ಗೆ 10:30ಕ್ಕೆ ತಿರುಪತಿಗೆ ತಲುಪಲಿದೆ. ತಿರುಪತಿಯಿಂದ ಸಂಜೆ 4:00 ಗಂಟೆಗೆ ಹೊರಡುವ ಬಸ್ ಇದೇ ಮಾರ್ಗವಾಗಿ ಬೆಳಗ್ಗೆ 05:45ಕ್ಕೆ ಕುಕ್ಕೆಸುಬ್ರಹ್ಮಣ್ಯಕ್ಕೆ ತಲುಪಲಿದೆ. ಕುಕ್ಕೆ ಸುಬ್ರಹ್ಮಣ್ಯದಿಂದ ತಿರುಪತಿಗೆ ರೂ. 910/- ಪ್ರಯಾಣ ದರವನ್ನು‌ ನಿಗಮವು ನಿಗದಿಗೊಳಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here