ಪುತ್ತೂರು ಜಾತ್ರೆಗೆ ಬ್ರಹ್ಮರಥ ಸಿದ್ಧತೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ಏ.17ರಂದು ನಡೆಯಲಿರುವ ಬ್ರಹ್ಮರಥೋತ್ಸವಕ್ಕೆ ರಥ ಕಟ್ಟುವ ಕೆಲಸ ಭರದಿಂದ ನಡೆಯುತ್ತಿದೆ.

 

 


ಬಿಸಿಲ ತಾಪಕ್ಕೆ ಅನುಗುಣವಾಗಿ ಬೆಳಿಗ್ಗೆ ಮತ್ತು ಸಂಜೆ ಮಾತ್ರ ರಥ ಕಟ್ಟುವ ಕೆಲಸ ನಡೆಯುತ್ತಿದ್ದು, ನುರಿತ ದೇವಳದ ನಿತ್ಯ ಕಾಯಕ ಮಾಡುವವರೇ ರಥ ಕಟ್ಟುವ ಕೆಲಸವನ್ನು ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ಅವರ ಮಾರ್ಗದರ್ಶನದಂತೆ ಮಾಡುತ್ತಿದ್ದಾರೆ. ಏ.1ರಂದು ದೇವಸ್ಥಾನದಲ್ಲಿ ಗೊನೆ ಮುಹೂರ್ತ ನಡೆಯಲಿದ್ದು, ಏ.10ರಿಂದ ದೇವಳದ ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದ್ದು, ಜಾತ್ರೆ ಆರಂಭಕ್ಕೆ ಮುನ್ನ ಬ್ರಹ್ಮರಥ ಸಿದ್ಧತೆ ನಡೆಯಬೇಕಾಗಿದೆ.

ಕಬ್ಬಿಣದ ರಾಡ್ ಅಳವಡಿಸುವ ಕಾರ್ಯ:
ಬ್ರಹ್ಮರಥಕ್ಕೆ ಇದೀಗ ಕಬ್ಬಿಣದ ರಾಡ್‌ಗಳನ್ನು ಅಳವಡಿಸುವ ಕೆಲಸ ದೇವಳದ ನಿತ್ಯ ನೌಕರರು ನಿರ್ವಹಿಸುತ್ತಿದ್ದು, ಇವರ ಕೆಲಸ ಪೂರ್ಣಗೊಂಡ ಬಳಿ ಬ್ರಹ್ಮರಥವನ್ನು ಪತಾಕೆಗಳಿಂದ ಅಲಂಕರಿಸುವ ಕೆಲಸವನ್ನು ಸುಬ್ರಹ್ಮಣ್ಯದ ರಥಕಟ್ಟುವ ಕೆಲಸಗಾರರಾದ ನಾಗೇಶ್ ಮತ್ತು ತಂಡದವರು ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here