ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೋತ್ಸವ ಸಂಪನ್ನ

0


ಆಲಂಕಾರು: ಸೀಮಾ ದೇವಸ್ಥಾನ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮಾ.14 ರಿಂದ ಮಾ.24ರ ತನಕ ಜಾತ್ರೋತ್ಸವ ನಡೆಯಿತು. ಮಾ.23 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, ಯಾತ್ರಾಹೋಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಲಂಕಾರು ಇವರಿಂದ ಭಜನಾ ಕಾರ್ಯಕ್ರಮ ನಂತರ , ಅವಭೃತ ಮೆರವಣಿಗೆ, ಕಟ್ಟೆಪೂಜೆ, ಸನತಮೊಗರು ಕುಮಾರಧಾರೆಯಲ್ಲಿ ಅವಭೃತ ಆನಂತರ ಧ್ವಜಾವರೋಹಣ ನಡೆಯಿತು. ಮಾ.24 ರಂದು ಬೆಳಿಗ್ಗೆ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮೊತ್ಸವ ನಡೆಯಿತು. ಮದ್ಯಾಹ್ನ ಅಯ್ಯಪ್ಪ ಭಕ್ತವೃಂದ ಶರವೂರು,ಆಲಂಕಾರು ಮತ್ತು ರಾಮಕುಂಜ ಇವರಿಂದ ಗಂಜಿ ಊಟ ಸೇವೆ ನಡೆಯಿತು.

 

ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಸಾದ್.ಟಿ, ಶೀನಪ್ಪ ಕುಂಬಾರ ಪ್ರಶಾಂತ್ ಕುಮಾರ್ ರೈ ಮನವಳಿಕೆ, ಲಕ್ಷ್ಮೀ ನಾರಾಯಣ ಅಡೀಲು, ಬಾಬು ಕುಪ್ಲಾಜೆ ಮರುವಂತಿಲ, ಅಶಾ ಈಶ್ವರಭಟ್, ಮಂಜುಳಾ ಚಂದ್ರಶೇಖರ್ ಕಲ್ಲೇರಿ ಹಾಗು ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳು ಮತ್ತು ಊರ ಪರವೂರ ಭಕ್ತಾಧಿಗಳು ಶರವೂರು ಜಾತ್ರೋತ್ಸವದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here