ನ.11 ರಂದು ಮರ್ಕಂಜದಲ್ಲಿ ರೋಟರಿ ಸಿರಿ ಸಂಭ್ರಮ

0

 

ವಿದ್ಯಾಸಿರಿ, ಆರೋಗ್ಯ ಸಿರಿ ಮತ್ತು ಜಲಸಿರಿ ಯೋಜನೆಗಳಿಗೆ ಚಾಲನೆ

 

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ವತಿಯಿಂದ ರೋಟರಿ ಜಿಲ್ಲಾ ಯೋಜನೆಗಳಾದ ವಿದ್ಯಾಸಿರಿ, ಆರೋಗ್ಯ ಸಿರಿ ಮತ್ತು ಜಲ ಸಿರಿ ಯೋಜನೆಗಳ ಉದ್ಘಾಟನಾ ಸಮಾರಂಭ ಹಾಗೂ ರೋಟರಿ ಸಿರಿ ಸಂಭ್ರಮ ನ.೧೧ರಂದು ಮರ್ಕಂಜ ಗೋಳಿಯಡ್ಕ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಳ್ಯ ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಪಿ.ಮುರಳೀಧರ ರೈ ಹೇಳಿದರು.


ನ.೪ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. “ವಿದ್ಯಾಸಿರಿ ಯೋಜನೆಯಲ್ಲಿ ಇ ಲರ್ನಿಂಗ್ ಸ್ಕೂಲ್ ಹಿ.ಪ್ರಾ.ಶಾಲೆ ಮುಡ್ನೂರು ಮರ್ಕಂಜದಲ್ಲಿ ಸೆಲ್ಕೊ ಸೋಲಾರ್ ಸಂಸ್ಥೆಯ ಸಹಯೋಗದಲ್ಲಿ ನಡೆಯುವುದು. ಆರೋಗ್ಯ ಸಿರಿ ಯೋಜನೆಯಲ್ಲಿ ಉಚಿತ ದಂತ ಚಿಕಿತ್ಸೆ ಶಿಬಿರ, ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಶಿಬಿರ ನಡೆಯುವುದು. ಜಲಸಿರಿ ಶುದ್ಧ ಕುಡಿಯುವ ನೀರಿನ ಘಟಕ ಗೋಳಿಯಡ್ಕ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ನಡೆಯಲಿದೆ.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ದೋಳ ಬಾಲಕೃಷ್ಣ ಗೌಡ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ್ ರೈ ರೆಂಜಾಳ, ದಂತ ವೈದ್ಯೆ ಡಾ| ಅಮೂಲ್ಯ ವಿ ರೈ, ಬಾಲ ಪ್ರತಿಭೆ ಪ್ರಣಣ್ಯ ಕುದ್ಪಾಜೆ ಯವರನ್ನು ಸನ್ಮಾನಿಸಲಾಗುವುದು ಎಂದು ಮುರಳೀಧರ್ ರೈ ಹೇಳಿದರು.

ಝೋನಲ್ ಲೆಫ್ಟಿನೆಂಟ್ ಪ್ರೀತಮ್ ಡಿ.ಕೆ., ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ., ಕಾರ್ಯಕ್ರಮ ಸಂಯೋಜಕ ಗಿರೀಶ್ ನಾರ್ಕೋಡ್, ಹೇಮಂತ್ ಕಾಮತ್, ಚೇತನ್ ಇದ್ದರು.

LEAVE A REPLY

Please enter your comment!
Please enter your name here