ಹೋರಾಟದ ನಡುವೆಯೂ ಹರಿಹರದಲ್ಲಿ ಏಕಾಏಕಿ ತೆರೆದುಕೊಂಡ ಬಾರ್ & ರೆಸ್ಟೋರೆಂಟ್

0

 

ಮದ್ಯ ಮಾರಾಟ ಮುಕ್ತ ಹೋರಾಟಗಾರರಿಂದ ತೀವ್ರ ವಿರೋಧ, ಧರಣಿ ಕುಳಿತು ಪ್ರತಿಭಟನೆ

 

ಹರಿಹರ ಪಲ್ಲತಡ್ಕದಲ್ಲಿ ಏಕಾಏಕಿ ಇಂದು ಮಂಗಳಾ ಬಾರ್& ರೆಸ್ಟೋರೆಂಟ್ ತೆರದುಕೊಂಡಿದ್ದು, ಮದ್ಯ ಮಾರಾಟ ಮುಕ್ತ ಹೋರಾಟಗಾರು ಅಂಗಡಿಯ ಮೆಟ್ಟಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿರುವುದಾಗಿ ತಿಳಿದು ಬಂದಿದೆ.

 

ಕಳೆದ ಕೆಲವು ತಿಂಗಳಿನಿಂದ ಹರಿಹರದಲ್ಲಿ ಮದ್ಯದಂಗಡಿ ಆರಂಭವಾಗುವುದನ್ನು ತಡೆಯಲು ಹೋರಾಟ ನಡೆಸಲಾಗಿತ್ತು. ಆದರೆ ಇಂದು ತೇಜಕುಮಾರ್  ಕಜ್ಜೋಡಿಯವರಿಗೆ ಸೇರಿದ ಜಾಗದಲ್ಲಿ ಮಂಗಳಾ ಬಾರ್ & ರೆಸ್ಟೋರೆಂಟ್ ಆರಂಭವಾಗಿದ್ದು ಹೋರಾಟಗಾರು ಜಮಾಯಿಸುತ್ತಿದ್ದಾರೆ.

ಕೆಲವು ಹೋರಾಟಗಾರರು ಬಾರ್ ಮೆಟ್ಟಲಲ್ಲಿ ಕುಳಿತು ಧರಣಿ ಆರಂಭಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾಗಿ ತಿಳಿದುಬಂದಿದೆ .

LEAVE A REPLY

Please enter your comment!
Please enter your name here