ಇಲಾಖೆಗಳಲ್ಲಿ ಸಾರ್ವಜನಿಕರ ಲಂಚ ಭ್ರಷ್ಟಾಚಾರದ ಅನುಭವಗಳ ಸಂಗ್ರಹ

0

  • ಲಂಚ, ಭ್ರಷ್ಟಾಚಾರ ಮುಕ್ತ ಊರಿನೆಡೆಗೆ-ನಡಿಗೆ (ಜಾಥಾ), ಘೋಷಣೆ, ಪ್ರತಿಜ್ಞೆ
  • ಆಂದೋಲನದ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳ ಸಭೆ-ಉತ್ತಮ ಸೇವೆಯ ಘೋಷಣೆ

 

ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಲು ಸುದ್ದಿ ಜನಾಂದೋಲನ ನೀಡಿದ 100 ದಿನಗಳ ಗಡುವಿನಲ್ಲಿ ಇನ್ನು 58ದಿನಗಳು ಬಾಕಿ ಇದೆ. ಜನರ ರೋಷ, ಸಿಟ್ಟು ಏರುತ್ತಲೇ ಇದೆ. ಊರಿಗೆ ಊರೇ ಲಂಚ, ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಂತಿದೆ. ಅಲ್ಲಲ್ಲಿ ಬ್ಯಾನರ್, ಫಲಕಗಳು ರಾರಾಜಿಸುತ್ತಿವೆ. ಘೋಷಣೆ ಮೊಳಗುತ್ತಿವೆ. ಅಧಿಕಾರಿಗಳಿಗೆ ತಾವು ಜನರ ಸೇವೆಗಳಿಗಾಗಿ ಇರುವವರು ಎಂಬ ಭಾವನೆ ಉಂಟು ಮಾಡಲಿಕ್ಕಾಗಿ ಪ್ರತೀ ಗ್ರಾಮ ಪಂಚಾಯತ್‌ನಿಂದ, ನಗರ ವಾರ್ಡ್‌ನಿಂದ ತಲಾ 5ರಂತೆ ಜನರು ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕಿನೆಡೆಗೆ ನಡಿಗೆಯನ್ನು (ಜಾಥಾ) ಪುತ್ತೂರು ನಗರದಲ್ಲಿ ಮಾಡಲಿದ್ದಾರೆ. ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಮತ್ತು ಪ್ರತಿಜ್ಞೆ ಕೈಗೊಳ್ಳಲಿದ್ದಾರೆ. ಆ ನಂತರ ತಾಲೂಕಿನ ಎಲ್ಲಾ ಅಧಿಕಾರಿಗಳು ಸೇರಿ ನಡೆಯುವ ಸಭೆಯಲ್ಲಿ ಜಾಥಾದಲ್ಲಿ ಭಾಗವಹಿಸಿದ ಪ್ರತೀ ಗ್ರಾಮದ ಮತ್ತು ವಾರ್ಡ್‌ನ ಆಂದೋಲನದ ಪ್ರತಿನಿಧಿಗಳು ಭಾಗವಹಿಸಿ ಲಂಚ, ಭ್ರಷ್ಟಾಚಾರದ ನಿವಾರಣೆಯ ಬಗ್ಗೆ ಅಽಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಅವರು ಉತ್ತಮ ಸೇವೆ ನೀಡುವ ಭರವಸೆಯನ್ನು, ಪ್ರತಿeಯನ್ನು ಪಡೆಯಲಿದ್ದಾರೆ. ಉತ್ತಮ ಸೇವೆ ಮಾಡಿದರೆ ಅಽಕಾರಿಗಳಿಗೆ ಪುರಸ್ಕಾರ ಮಾಡುವುದಾಗಿ ಜನತೆ ಭರವಸೆ ನೀಡಲಿದ್ದಾರೆ.

ಈ ಮೇಲಿನ ಸಭೆಯಲ್ಲಿ ಜನರಿಗೆ ಲಂಚ ಭ್ರಷ್ಟಾಚಾರದ ಕೆಟ್ಟ ಅನುಭವಗಳನ್ನು ಮಂಡಿಸಲಿಕ್ಕಾಗಿ ಪ್ರತೀ ಗ್ರಾಮ ಪಂಚಾಯತ್‌ನಲ್ಲಿ, ನಗರದಲ್ಲಿ ಸುದ್ದಿ ಪ್ರತಿನಿಧಿಗಳು ಹಾಗೂ ವರದಿಗಾರರು ಸಾರ್ವಜನಿಕರನ್ನು ಸಂಪರ್ಕಿಸಲಿದ್ದಾರೆ. ಜನರ ಅನುಭವಗಳನ್ನು ಪರಿಶೀಲಿಸಿದ ನಂತರ ಅದನ್ನು ಪತ್ರಿಕೆ, ಸುದ್ದಿ ವೆಬ್‌ಸೈಟ್ ಮತ್ತು ಸುದ್ದಿ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಲಾಗುವುದು. ನಮ್ಮ ಊರು, ತಾಲೂಕು, ಲಂಚ ಭ್ರಷ್ಟಾಚಾರ ಮುಕ್ತವಾಗಬೇಕೆಂಬ ಆಶಯ ಇರುವ ಪ್ರತಿಯೊಬ್ಬ ಪ್ರಜೆ ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕ, ಬ್ಯಾನರ್ ಅಳವಡಿಸುವ ಮೂಲಕ ಸುದ್ದಿ ಜನಾಂದೋಲನದಲ್ಲಿ ಭಾಗಿಯಾಗಬೇಕೆಂದು ಬಯಸುತ್ತೇವೆ.

ಲಂಚ, ಭ್ರಷ್ಟಾಚಾರ ಮುಕ್ತ ಊರಿನೆಡೆಗೆ ನಡಿಗೆ ಜಾಥಾದಲ್ಲಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಇಚ್ಛಿಸುವ ಜನರು ತಮ್ಮ ಹೆಸರು, ಊರು, ಫೋನ್ ನಂಬ್ರ, ಫೋಟೋದೊಂದಿಗೆ ಸುದ್ದಿ ಜನಾಂದೋಲನದ ವಾಟ್ಸಪ್ ನಂಬ್ರಕ್ಕೆ ಅಥವಾ ಈ-ಮೇಲ್‌ಗೆ ಕಳುಹಿಸಬೇಕಾಗಿ ಕೇಳಿಕೊಳ್ಳುತ್ತೇವೆ. -ಸಂ

LEAVE A REPLY

Please enter your comment!
Please enter your name here