ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಗುವ ಸೇವೆಗಳು ಮತ್ತು ಕಾಲಮಿತಿ

0

  • ಸ್ಥಿರಾಸ್ತಿ ಬೆಲೆಯ ಶೇ. 6.60 ಅಥವಾ ಶೇ. 6.65 ಮಾತ್ರ ಸರಕಾರಕ್ಕೆ ಕಟ್ಟಬೇಕಾಗುತ್ತದೆ

 

ಸ್ಥಿರಾಸ್ತಿಗಳ ಪರಭಾರೆ, ಸಾಲ ಪಡೆಯಲು ಹಾಗೂ ವಿವಾಹ ನೋಂದಣಿಗಾಗಿ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಗೊಳಿಸುವುದು ಅವಶ್ಯಕವಾಗಿರುತ್ತದೆ. ವಿವಾಹ ನೋಂದಣಿಗಾಗಿ ವಿವಾಹಕ್ಕೆ ಒಳಪಡುವವರು ಸರಕಾರ ನಿಗದಿಪಡಿಸಿದ ವಯೋಮಿತಿಯವರಾಗಿದ್ದು ಪುತ್ತೂರು ಉಪ ನೋಂದಣಿ ಕಚೇರಿಗೆ ಒಳಪಟ್ಟು ವಾಸವಿದ್ದಲ್ಲಿ ಅಥವಾ ಮದುವೆ ಕಾರ್ಯವು ಕಚೇರಿಗೆ ಒಳಪಟ್ಟು ನಡೆದಿದ್ದಲ್ಲಿ ನೋಂದಣಿ ಮಾಡಬಹುದಾಗಿರುತ್ತದೆ. ವಿವಾಹ ನೋಂದಣಿಗಾಗಿ ಶಾಲಾ ದಾಖಲಾತಿ, ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯ ವಾಗಿರುತ್ತದೆ. ಮುಂದುವರೆದು ವಿವಾಹ ನೋಂದಣಿ ಶುಲ್ಕವಾಗಿ ರೂ.25 ಹಾಗೂ ಸ್ಕ್ಯಾನಿಂಗ್ ಶುಲ್ಕವಾಗಿ ರೂ. 280 ನ್ನು ಕೆ 2 ಚಲನ್ ಮುಖಾಂತರ ಪಾವತಿ ಮಾಡಬೇಕಾಗಿರುತ್ತದೆ. ಸ್ಥಿರಾಸ್ತಿಗಳ ಪರಭಾರೆಗೆ ಸಂಬಂಽಸಿದಂತೆ ಆಸ್ತಿಯನ್ನು ಕೊಳ್ಳುವವರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಾಗಿರುತ್ತದೆ. ಸ್ಥಿರಾಸ್ತಿಯು ಮಾರಾಟಗಾರನಿಗೆ ವರ್ಗಾವಣೆಗೊಂಡ ಬಗ್ಗೆ ಸದರಿ ವರ್ಗಾವಣೆ ಸಮಯದಲ್ಲಿ ಎಲ್ಲಾ ವಾರೀಸುದಾರರನ್ನು ಗಣನೆಗೆ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಅದಕ್ಕಾಗಿ ಋಣಭಾರ ಪತ್ರವನ್ನು ಹಾಗೂ ದೃಢೀಕೃತ ನಕಲನ್ನು ಪಡೆದುಕೊಂಡು ಕೂಲಂಕುಷವಾಗಿ ಪರಿಶೀಲಿಸಿಕೊಳ್ಳಬೇಕು. ಇಂತಹ ಪರಿಶೀಲನೆಗಾಗಿ ನ್ಯಾಯವಾದಿ ಅಥವಾ ಅಽಕೃತ ದಸ್ತಾವೇಜು ಬರಹಗಾರರ ಸಲಹೆ ಪಡೆಯುವುದು ಸೂಕ್ತವಾಗಿರುತ್ತದೆ.

ಹಾಗೆ ಸೂಕ್ತವೆನಿಸಿದ ಸ್ಥಿರಾಸ್ತಿಯನ್ನು ಭೂ ಮಂಜೂರಾತಿಯಾದಲ್ಲಿ ಮಾನ್ಯ ತಹಶೀಲ್ದಾರರಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವುದು ಅಗತ್ಯವಾಗಿರುತ್ತದೆ. ನಂತರದ ಹಂತದಲ್ಲಿ ಇಬ್ಬರು ಪಕ್ಷಕಾರರು ಸ್ಥಿರಾಸ್ತಿಯ ಸಂಪೂರ್ಣ ಮಾಹಿತಿಯೊಂದಿಗೆ ನ್ಯಾಯವಾದಿ ಅಥವಾ ಅಧಿಕೃತ ದಸ್ತಾವೇಜು ಬರಹಗಾರರಿಂದ ದಸ್ತಾವೇಜನ್ನು ತಯಾರಿಸಿಕೊಳ್ಳಬೇಕು. ದಸ್ತಾವೇಜನ್ನು ತಯಾರಿಸುವಾಗ ಸ್ಥಿರಾಸ್ತಿಯ ವ್ಯವಹರಿಸಿದ ಬೆಲೆಯನ್ನು ದಾಖಲಿಸಬೇಕು. ಹಾಗೆಯೇ ಸ್ಥಿರಾಸ್ತಿಗೆ ಸಂಬಂಽಸಿದ ಇತರೆ ಮಾಹಿತಿ ತಪ್ಪದೆ ದಸ್ತಾವೇಜಿನಲ್ಲಿ ಉಲ್ಲೇಖಿಸಬೇಕು. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಬದಿಯಿಂದ ಸ್ವತ್ತುಗಳಾಗಿದ್ದರೆ, ಆ ರಸ್ತೆಗಳ ಬಗ್ಗೆ ವಿವರ, ಉದ್ಯಾನವನದ ಹತ್ತಿರವಿದ್ದರೆ ಹಾಗೆಯೇ ಆರ್‌ಟಿಸಿಯಲ್ಲಿ ಬೆಳೆಗಳು ತಪ್ಪಾಗಿದ್ದಲ್ಲಿ ಅಥವಾ ಇಲ್ಲದಿದ್ದಲ್ಲಿ ದಸ್ತಾವೇಜಿನಲ್ಲಿ ಅದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಆಸ್ತಿಯ ಅಪಮೌಲ್ಯ ಅಪರಾಧವಾಗಿದ್ದು ಮಾನ್ಯ ಜಿಲ್ಲಾ ನೋಂದಣಾಧಿಕಾರಿಗಳು ಯಾವುದೇ ನೋಂದಣಿಯ ತನಿಖೆಯನ್ನು ನಡೆಸಬಹುದಾಗಿರುತ್ತದೆ. ಒಂದು ಪಕ್ಷ ತನಿಖೆಯಲ್ಲಿ ಅಪಮೌಲ್ಯವಾಗಿದ್ದು ರುಜುವಾತಾದಲ್ಲಿ ಹತ್ತು ಪಟ್ಟು ದಂಡ ವಿಧಿಸುವ ಅವಕಾಶವಿರುತ್ತದೆ. ಹಾಗಾಗಿ ಅಂತಹ ಸನ್ನಿವೇಶಗಳಿಗೆ ಅವಕಾಶ ಮಾಡಿಕೊಡದೆ ದಸ್ತಾವೇಜನ್ನು ಸರಿಯಾಗಿ ಬರೆಯಿಸುವುದು ಮತ್ತು ಸರಿಯಾದ ಮೌಲ್ಯವನ್ನು ಉಲ್ಲೇಖಿಸಿ ತಯಾರಿಸಿಕೊಳ್ಳಬೇಕು. ತಯಾರಿಸಿದ ನಂತರ ಉಪನೋಂದಣಿ ಕಚೇರಿಗೆ ದಸ್ತಾವೇಜನ್ನು ಹಾಜರುಪಡಿಸಬೇಕು. ಉಪ ನೋಂದವಣಾಧಿಕಾರಿಗಳು ದಸ್ತಾವೇಜು ಪರಿಶೀಲಿಸಿ ಅದಕ್ಕೆ ತಗಲುವ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ತಿಳಿಸಿದ ನಂತರ ಅಂತಹ ಮೊತ್ತವನ್ನು ಕೆ೨ ಚಲನ್ ಮುಖಾಂತರ ಬ್ಯಾಂಕ್‌ನಲ್ಲಿ ಪಾವತಿಸಿದ ನಂತರ ದಾಸ್ತಾವೇಜು ನೋಂದಣಿಯಾಗುತ್ತದೆ. ನೋಂದಣಿಯಾದ ಮಾತ್ರಕ್ಕೆ ಸರಿಯಾದ ಹಕ್ಕು ವರ್ಗಾವಣೆಯಾಗಿದೆ ಎಂದಲ್ಲ ಈ ಮೊದಲೇ ತಿಳಿಸಿದಂತೆ ಕ್ರಯಕ್ಕೆ ಪಡೆಯುವವನು ಸ್ಥಿರಾಸ್ತಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿಕೊಳ್ಳಬೇಕು. ಮುಂದುವರೆದು ಸ್ಥಿರಾಸ್ತಿಗಳಿಗೆ ಸಂಬಂಽಸಿದ ಇತರೆ ಕಾರ್ಯಗಳಾದ ದಾನ, ಹಕ್ಕು, ಖುಲಾಸೆ ವಿಭಾಗ ಜಿಪಿಎ ಇತ್ಯಾದಿಗಳನ್ನು ಮಾಡುವಾಗಲೂ ಸಹ ಆಸ್ತಿ ಮೂಲ ದಾಖಲಾತಿಗಳನ್ನು ಪರಿಶೀಲಿಸುವುದು ಅತಿ ಮುಖ್ಯವಾಗಿರುತ್ತದೆ. ಈ ಮೇಲೆ ತಿಳಿಸಿದ ಕ್ರಿಯೆಗಳಿಗೆ ಕುಟುಂಬ ವ್ಯಾಖ್ಯಾನವಿದ್ದು, ಪಕ್ಷಕಾರರು ಆ ಕುಟುಂಬದ ವ್ಯಾಖ್ಯಾನಕ್ಕೆ ಒಳಪಟ್ಟಿದ್ದಲ್ಲಿ ಅಂತಹ ದಸ್ತಾವೇಜುಗಳಿಗೆ ಕಡಿಮೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿಧಿಸಬಹುದಾಗಿರುತ್ತದೆ.

ಉಪನೋಂದಣಿ ಕಚೇರಿಯಲ್ಲಿ ಇ ಸಿ ಮತ್ತು ಸಿಸಿ ಪ್ರತಿಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಫಾರಂ 22 ರನ್ನು ಭರ್ತಿ ಮಾಡಿ ಶುಲ್ಕವನ್ನು ಕೆ2 ಚಲನ್ ಅಥವಾ ನಗದಾಗಿ ಸಲ್ಲಿಸಬಹುದಾಗಿರುತ್ತದೆ. ದೃಢೀಕೃತ ನಕಲನ್ನು ತೆಗೆದುಕೊಳ್ಳಲು ಆನ್ ಲೈನ್ ಮತ್ತು ಮ್ಯಾನ್ವಲ್ ಪದ್ದತಿಯನ್ನು ಬಳಸಬಹುದಾಗಿರುತ್ತದೆ. ಈ ಮೇಲಿನ ಮಾಹಿತಿಯಲ್ಲಿ ವ್ಯತ್ಯಾಸಗಳಿದ್ದರೆ ತಿಳಿಸಿರಿ, ಅದನ್ನು ಮುಂದಿನ ಸಂಚಿಕೆಯಲ್ಲಿ, ವೆಬ್‌ಸೈಟ್‌ನಲ್ಲಿ, ಸುದ್ದಿ ಚಾನೆಲ್‌ನಲ್ಲಿ ಸರಿಪಡಿಸಿ ನಿಖರ ಮಾಹಿತಿ ನೀಡಲಾಗುವುದು.

ಸ್ಥಿರಾಸ್ತಿ ಬೆಲೆಯ ಶೇ.6.65 ಗ್ರಾಮೀಣ ಪ್ರದೇಶಕ್ಕೆ 6.60 ನಗರ ಪ್ರದೇಶಕ್ಕೆ ಮಾತ್ರ ಸರಕಾರಕ್ಕೆ ಕಟ್ಟಬೇಕಾಗುತ್ತದೆ ಸ್ಥಿರಾಸ್ತಿ ಮಾರಾಟ ನೋಂದಣಿಯ ಸಂದರ್ಭ ಮುದ್ರಾಂಕ ಶುಲ್ಕ ಶೇ.5ನ್ನು ಪಾವತಿಸಬೇಕು. ನೋಂದಣಿ ಶುಲ್ಕ ಶೇ.1., ಸೆಸ್ ಶೇ.0.5, ಸರ್‌ಚಾರ್ಚ್ ಗ್ರಾಮೀಣ ಭಾಗಕ್ಕೆ ಶೇ. 0.15 ಹಾಗೂ ನಗರ ಪ್ರದೇಶಕ್ಕೆ ಶೇ.0.10 ನೀಡಬೇಕಾಗುತ್ತದೆ. ಉಳಿದಂತೆ ಪರಿವರ್ತನಾ ಶುಲ್ಕ ರೂ.35, (ಪ್ರತೀ ಆರ್.ಟಿ.ಸಿ.), ಸ್ಕಾನಿಂಗ್ ಶುಲ್ಕ (ಡಾಕ್ಯುಮೆಂಟ್ ಮೇಲೆ ಅವಲಂಬಿತ), ಪ್ರಮಾಣಪತ್ರ ಶುಲ್ಕ ರೂ.40, ಎಂದು ಸಬ್‌ರಿಜಿಸ್ಟಾರ್ ಮಾಹಿತಿ ನೀಡಿದ್ದಾರೆ.

ಅಂದರೆ ಸ್ಥಿರಾಸ್ತಿ ಮಾರಾಟ ನೋಂದಣಿಯ ಸ್ಟ್ಯಾಂಪ್ ಡ್ಯೂಟಿ 5 + ನೋಂದಣಿ ಶುಲ್ಕ + ಸೆಸ್ ಶೇ. 0.5 ಮತ್ತು ಸರ್ ಚಾರ್ಜ್ ನಗರ ಪ್ರದೇಶಕ್ಕೆ 0.10 ಅಂದರೆ 6.60 ಹಾಗೂ ಗ್ರಾಮಾಂತರ ಪ್ರದೇಶಕ್ಕೆ 0.15 ಸೇರಿ ಸರಿಸುಮಾರು ಶೇ. 6.65 ಸರಕಾರಕ್ಕೆ ಕಟ್ಟಬೇಕಾಗುತ್ತದೆ. ಅಂದರೆ 10 ಲಕ್ಷ ಮೌಲ್ಯದ ಸ್ಥಿರಾಸ್ತಿ ಕ್ರಯಪತ್ರದ ವೇಳೆ 66,000 ನಗರ ಪ್ರದೇಶದಲ್ಲಿ ರೂ.66,500 ಸಾವಿರ ಗ್ರಾಮೀಣ ಪ್ರದೇಶದಲ್ಲಿ ಸರಕಾರಕ್ಕೆ ಪಾವತಿಸಬೇಕಾಗುತ್ತದೆ. 20 ಲಕ್ಷ ಮೌಲ್ಯದ ಸ್ಥಿರಾಸ್ತಿ ಕ್ರಯಪತ್ರದ ವೇಳೆ ರೂ.1 ಲಕ್ಷದ 32 ಸಾವಿರವನ್ನು ನಗರ ಪ್ರದೇಶದಲ್ಲಿ, ರೂ.1 ಲಕ್ಷದ 33 ಸಾವಿರವನ್ನು ಗ್ರಾಮೀಣ ಪ್ರದೇಶದಲ್ಲಿ ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ಅದೇ ಶೇ. ಪ್ರಮಾಣದಲ್ಲಿ ಆಸ್ತಿ ಮೌಲ್ಯದ ಮೇಲೆ ಹಣ ಪಾವತಿಸಬೇಕಾಗುತ್ತದೆ. (ಚಲನ್ ಮೂಲಕ) ಇದರ ಜತೆಗೆ ಪ್ರಮಾಣಪತ್ರ ಶುಲ್ಕ ರೂ.40, ಪರಿವರ್ತನಾ ಶುಲ್ಕ ರೂ.35 ಪಾವತಿಸಿದರೆ ಸಾಕಾಗುತ್ತದೆ. ಅದಕ್ಕೆ ಎಲ್ಲದಕ್ಕೂ ರಶೀದಿಯನ್ನು ಪಡೆಯಬಹುದು, ಪಡೆಯಬೇಕು. ದಸ್ತಾವೇಜು ಬರಹಗಾರರು ಅಥವಾ ವಕೀಲರ ಸರ್ವಿಸ್ ಚಾರ್ಜ್ ಪ್ರತ್ಯೇಕವಾಗಿರುತ್ತದೆ.

[box type=”info” bg=”#” color=”#” border=”#” radius=”2″]ದಸ್ತಾವೇಜುಗಳ ನೋಂದಣಿಯನ್ನು 7 ದಿನಗಳ ಕಾಲ ಮಿತಿಯಲ್ಲಿ ಪೂರ್ತಿಗೊಳಿಸುವುದು. : ಕೆ2 ಚಲನ್ ಮೂಲಕ ಪಾವತಿ ವಿವಾಹ ನೋಂದಣೆ – ೩೦ ದಿನಗಳ ಕಾಲಾವಕಾಶ ; 305 ರೂ ಶುಲ್ಕು ನೀಡಬೇಕು. ವಿಶೇಷ ವಿವಾಹ ನೋಂದಣೆ – 30 ದಿನಗಳ ಕಾಲಾವಕಾಶ – 305 ರೂ ಶುಲ್ಕು ನೀಡಬೇಕು. ಋಣಬಾರ ಪ್ರಮಾಣ ಪತ್ರ – 30 ದಿನಗಳ ಕಾಲಾವಕಾಶ : 30 ರೂ ಶುಲ್ಕ ಹಾಗೂ ಪ್ರತೀ ವರ್ಷದ ಋಣಭಾರ ಪ್ರಮಾಣ ಪತ್ರಕ್ಕೆ ರೂ.೧೦ರಂತೆ ನೀಡುವುದು. ನೋಂದಾಯಿಸಿದ ದಸ್ತಾವೇಜುಗಳ ದೃಢೀಕೃತ ನಕಲು – 30 ದಿನಗಳ ಕಾಲಾವಕಾಶ ಆನ್‌ಲೈನ್[/box]

 

LEAVE A REPLY

Please enter your comment!
Please enter your name here