ಕುಡಿಪ್ಪಾಡಿ:ಸಂಜೀವಿನಿ ಒಕ್ಕೂಟದಿಂದ ಮಹಿಳಾ ದಿನಾಚರಣೆ

0

  • ಕಾನೂನುಗಳ ದುರುಪಯೋಗಪಡಿಸಬಾರದು-ಶಾಂತಿ ಹೆಗಡೆ

 

ಪುತ್ತೂರು:ಮಹಿಳೆಯರ ವಿರುದ್ಧ ದೌರ್ಜನ್ಯ, ಅನ್ಯಾಯಗಳು ನಡೆದಾಗ ವಿರೋಧಿಸಬೇಕು. ಆದರೆ ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನನ್ನು ಯಾವತ್ತೂ ದುರುಪಯೋಗಪಡಿಸಬಾರದು ಎಂದು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ.ಹೆಗಡೆ ಹೇಳಿದರು.

ಕುಡಿಪ್ಪಾಡಿ ಗ್ರಾ.ಪಂನ ಸಂಜೀವಿನಿ ಒಕ್ಕೂಟದಿಂದ ಮಾ.29ರಂದು ಕುಡಿಪ್ಪಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಘಟನೆಗಳು ಸಂಭವಿಸದಾಗ ನಿಜವಾಗಿಯೂ ಮಹಿಳೆಗೆ ಅನ್ಯಾಯವಾಗಿದ್ದರೆ ಮಾತ್ರ ಪ್ರತಿಭಟನೆ ನಡೆಸಬೇಕು. ಸುಳ್ಳು ಆರೋಗಳ ವಿರುದ್ಧ ಪ್ರತಿಭಟನೆ ನಡೆಸಬಾರದು. ಮಹಿಳಾ ದಿನಾಚರಣೆಗಳು ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿ ಸಂಭ್ರಮಿಸುವಂತಿರಬೇಕು. ಮಹಿಳೆಗೆ ತನ್ನ ಮನೆಯವರ ಸಹಕಾರ ದೊರೆತಾಗ ಆ ಮಹಿಳೆಯು ಯಶಸ್ವೀ ಸಾಧಕಿಯಾಗಲು ಸಾಧ್ಯ. ಮಹಿಳೆಯೂ ಸಂಘಟನಾತ್ಮಕವಾಗಿ ಬೆಳೆಯಬೇಕು. ಕಾನೂನುಗಳ ಬಗ್ಗೆ ಜಾಗೃತರಾಗಿರಬೇಕು. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನ ನಡೆಸುವಂತಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಸಂಜೀವಿನಿ ಒಕ್ಕೂಟದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮಾತನಾಡಿ, ಸರಕಾರದ ಯೋಜನೆ, ಕಾನೂನುಗಳು ಜಾರಿಯಾದ ಮಾತ್ರಕ್ಕೆ ಮಹಿಳೆಯರು ಸ್ವಾವಲಂಭಿಯಾಗಲು ಸಾಧ್ಯವಿಲ್ಲ. ಅವರಲ್ಲಿಯೂ ಆಸಕ್ತಿ ಮುಖ್ಯವಾಗಿದೆ. ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ಅವುಗಳನ್ನು ಸದುಪಯೋಗಪಡಿಸಿಕೊಂಡಾಗ ಸ್ವಾವಲಂಭಿ ಬದುಕು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕುಡಿಪ್ಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಶೋಭಾ ಮಯ್ಯ ಮಹಿಳೆಯರ ಹಕ್ಕುಗಳು ಮತ್ತು ರಕ್ಷಣೆಯ ಕುರಿತು ಮಾಹಿತಿ ನೀಡಿದರು. ಕುಡಿಪ್ಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಸುಮಿತ್ರ, ಸದಸ್ಯರಾದ ಗಿರಿಧರ ಗೋಮುಖ, ಸ್ಮಿತಾ ಹಣಿಯೂರು, ಕಾರ್ಯದರ್ಶಿ ಭವಾನಿ, ಚಂದ್ರಾವತಿ, ಕಿರಿಯ ಆರೋಗ್ಯ ಸಹಾಯಕಿ ತೇಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶಾಲಾಕ್ಷಿ ಪ್ರಾರ್ಥಿಸಿದರು. ಶಶಿಕಲಾ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಎಲ್‌ಸಿಆರ್‌ಪಿ ಲೀಲಾವತಿ ವರದಿ ವಾಚಿಸಿದರು. ಎಂಬಿಕೆ ಭವ್ಯ ಕಾರ್ಯಕ್ರಮ ನಿರೂಪಿಸಿ, ಧಮಯಂತಿ ವಂದಿಸಿದರು. ಎಲ್‌ಸಿಆರ್‌ಪಿ ಕವಿತಾ ಸಹಕರಿಸಿದರು. ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here