ನಿಡ್ಪಳ್ಳಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆದ 2021-22 ನೇ ಸಾಲಿನ ಡ್ರಾಯಿಂಗ್ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ ಇಲ್ಲಿನ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.100 ಫಲಿತಾಂಶ ಬಂದಿರುತ್ತದೆ.
ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ ಭವಿಷ್ಯ. ಪಿ, ಶ್ರೇಯಾ.ಜಿ, ಸಿಂಚನಾ.ಬಿ, ನಮಿತಾ.ಎಂ.ಬಿ, ಅಜಿತ್.ಸಿ, ದರ್ಶನ್.ಎಂ.ಎಸ್, ದಿಶಾ.ಎನ್, ನೀಷ್ಮ.ಕೆ.ಡಿ, ಆಶಿತ್ ರಾಜ್.ಸಿ, ವಿಜೇತ್, ಮೊಕ್ಷಿತ್ ಎ.ಡಿ ಇವರು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಗುರು ನಾರಾಯಣ. ಕೆ ತಿಳಿಸಿದ್ದಾರೆ.