ಈಶ್ವರಮಂಗಲ: ಕೆ.ವಿ.ಜಿ. ದಂತ ಮಹಾವಿದ್ಯಾಲಯದ ದಂತ ಆರೋಗ್ಯ ಉಪಕೇಂದ್ರ ಉದ್ಘಾಟನೆ

0

 

ಪುತ್ತೂರು: ಸುಳ್ಯದ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಅತ್ಯಾಧುನಿಕ ತಂತ್ರಜ್ಞಾನದ ನೂತನ ದಂತ ಆರೋಗ್ಯ ಉಪಕೇಂದ್ರವು ಈಶ್ವರಮಂಗಲದ ಹೀರಾ ಕಾಂಪ್ಲೆಕ್ಸ್‌ನಲ್ಲಿ ಏ.೦೫ರಂದು ಉದ್ಘಾಟನೆಗೊಂಡಿತು. ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಡಾ.ಆಂಜನಪ್ಪ ಟಿ.ಹೆಚ್‌ಯವರು ಆರೋಗ್ಯ ಉಪಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಳ್ಳಿಯ ಜನರು ಆರೋಗ್ಯವಂತಹ ಜೀವಿಗಳು ಏಕೆಂದರೆ ಇಲ್ಲಿ ಒಳ್ಳೆಯ ಪರಿಸರ ಇದೆ. ರೈತರಾಗಿ ಮಣ್ಣಿನಲ್ಲಿ ಕೆಲಸ ಮಾಡಿಕೊಂಡು ಉತ್ತಮ ಆರೋಗ್ಯವರ್ಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಪೇಟೆಯಲ್ಲಿ ಸಿಗಲ್ಲ, ಏನೇ ಆದರೂ ನಾವು ಜೀವನದಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುವವರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘ ಇದರ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ಇವರು ಅಧ್ಯಕತೆಯನ್ನು ವಹಿಸಿ ಮಾತನಾಡಿ, ನನ್ನ ತಂದೆಯವರ ಕನಸಿನಂತೆ ಹಳ್ಳಿಯ ಜನರಿಗೆ ಉತ್ತಮ ಆರೋಗ್ಯ ನೀಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಸುಳ್ಯದಲ್ಲಿ ಆಸ್ಪತ್ರೆಯನ್ನು ಆರಂಭಿಸಿದ್ದೆವು. ಅವರ ಆಶಯದಂತೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅದರಂತೆ ಬೇರೆ ಬೇರೆ ಹಳ್ಳಿಯಲ್ಲಿ ಕ್ಲಿನಿಕ್, ಸಂಚಾರಿ ಆಸ್ಪತ್ರೆಗಳನ್ನು ಮಾಡುವ ಮೂಲಕ ಹಳ್ಳಿಯ ಜನರಿಗೆ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಕಾಳಜಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ನಿರ್ದೇಶಕಿ ಡಾ. ಜ್ಯೋತಿ ಆರ್.ಪ್ರಸಾದ್, ಆಡಳಿತ ಮಂಡಳಿ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಸದಸ್ಯರಾದ ಎನ್.ಎ.ರಾಮಚಂದ್ರ , ಜಾಕೆ ಮಾಧವ ಗೌಡ, ಮಂಗಳೂರು ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಈಶ್ವರಮಂಗಲ ಹಿರಾ ಕಾಂಪ್ಲೆಕ್ಸ್‌ನ ಮಾಲಕ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಆಂಜನಪ್ಪ ಟಿ.ಹೆಚ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಮನೋಜ್ ಕುಮಾರ್, ಡಾ.ಜಲೀಲ, ಡಾ.ಉಜ್ವಲ್, ಬಿ.ಟಿ ಮಾಧವ, ಡಾ. ಹೇಮಂತ್ ಸೂಂತೋಡು, ಡಾ.ಅಭಿಜ್ಞಾ ನೀರ್ಪಾಡಿ, ಜಯಂತ್ ತಾಳೂರು, ಡಾ.ಹೇಮಂತ್, ಪ್ರಸನ್ನ ಕಲ್ಲಾಜೆ, ಡಾ.ಸುಪ್ರೀಯ ಹೂ ನೀಡಿ ಸ್ವಾಗತಿಸಿದರು. ಡಾ. ಅಲೀನ್, ಡಾ.ಅಂಜನ್ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥ ಡಾ.ನುಸ್ರತ್ ಫರೀದ್ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here