ಝಹ್‌ರಾ ಸ್ಟಿಚ್ಚಿಂಗ್ ಆಂಡ್ ರೆಡಿಮೇಡ್ ಸೆಂಟರ್ ಶುಭಾರಂಭ

0

ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಎ ಎಂ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವನ ಝಹ್‌ರಾ ಬುಕ್ ಹೌಸ್ ಇದರ ಶಾಖೆ ಝಹ್‌ರಾ ಸ್ಟಿಚ್ಚಿಂಗ್ ಆಂಡ್ ರೆಡಿಮೇಡ್ಸ್ ಎ. 10 ರಂದು ಸುಭಾರಂಭಗೊಂಡಿತು.

ಮಹ್‌ಮೂದುಲ್ ಫೈಝಿ ಓಲೆಮುಂಡೋವು ನೂತನ ಮಳಿಗೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬುಕ್ ಹೌಸ್ ಪ್ರಾರಂಭ ಮಾಡುವ ಮೂಲಕ ಮನೆ ಮಾತಾಗಿರುವ ಝಹ್‌ರಾ ಮಳಿಗೆಯಲ್ಲಿ ಹೊಸದಾಗಿ ಸ್ಟಿಚ್ಚಿಂಗ್ ವಿಭಾಗವನ್ನು ಆರಂಭಿಸಿರುವುದು ಉತ್ತಮವಾಗಿದೆ. ಇದರಿಂದ ಎಲ್ಲರಿಗೂ ಪ್ರಯೋಜನವಾಗಲಿ ಎಂದು ಹಾರೈಸಿ ಸಂಸ್ಥೆಗೆ ದುವಾಗೈದರು.

ಕಾರ್ಯಕ್ರಮದಲ್ಲಿ ಹಾಪಿಝ್ ಅಬ್ದುಸ್ಸಲಾಂ ನಿಝಾಮಿ, ಮೂಸಾ ಮುಸ್ಲಿಯಾರ್, ಅಝೀಝ್ ಸಅದಿ, ಜಾಬಿರ್ ಜ್ವಹರಿ, ಫಾರೂಕ್‌ಗ ಇರ್ಫಾನಿ ಮೊದಲಾದವರು ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಕರಾದ ಹಮೀದ್ ಮುಸ್ಲಿಯಾರ್‌ನೂತನ ಮಳಿಗೆಯಲ್ಲಿ ಉಸ್ತಾದರಿಗೆ ಬೇಕಾಗುವ ಸ್ಟಿಚ್ಚಿಂಗ್, ಮದುವೆಯ ವಿಶೇಷ ಸ್ಟಿಚ್ಚಿಂಗ್, ಮದ್ರಸ ಮಕ್ಕಳಿಗೆ ಬೇಕಾಗುವ ಎಲ್ಲಾ ತರದ ಯುನಿಫಾರಂ ಸ್ಟಿಚ್ಚಿಂಗ್, ಕಮೀಸ್, ಜುಬ್ಬಾ, ಶರ್ಟ್, ಪ್ಯಾಂಟ್, ಸೂಟ್, ಅರೇಬಿಯನ್ ಡ್ರೆಸ್, ಮದುಮಗನ ಡ್ರೆಸ್‌ಗಳನ್ನು ಹೊಲಿದು ಕೊಡಲಾಗುವುದು. ಅತ್ಯಂತ ಮಿತ ದರದಲ್ಲಿ ಗ್ರಾಹಕರಿಗೆ ಈ ಸೇವೆಯನ್ನು ನೀಡಲಾಗುವುದು ಎಂದು ಹೇಳಿ ಸಹಕರಿಸುವಂತೆ ಮನವಿ ಮಾಡಿದರು.

ಏಕೈಕ ಮಳಿಗೆ
ಪುತ್ತೂರಿನಲ್ಲಿ ಮದ್ರಸ ಮಕ್ಕಳ ಇಸ್ಲಾಮಿಕ ಯುನಿಫಾರಂ, ನಮಾಝ್ ಬೇಕಾದ ವಸ್ತಗಳ ಹೊಲಿಗೆ, ಮದುವೆ, ಹಾಗೂ ಮಸೀದಿಗಳ ಉಸ್ತಾದರುಗಳು ಧರಿಸುವ ಇಸ್ಲಾಮಿಕ್ ಹಾಗೂ ಅರೇಬಿಕ್ ಶೈಲಿಯ ವಸ್ತಗಳನ್ನು ಹೊಲಿಯುವ ಏಕೈಕ ಮಳಿಗೆಯಾಗಿದೆ. ಶುಭಾರಂಭದ ಪ್ರಯುಕ್ತ ಕಡಿಮೆದರದಲ್ಲಿ ಹೊಲಿದು ಕೊಡಲಾಗುತ್ತಿದ್ದು , ಮದ್ರಸ ವಿದ್ಯಾರ್ಥಿಗಳಿಗೆ ಮತ್ತು ಉಸ್ತಾದರಿಗಳಿಗೆ ವಿಶೇಷ ರಿಯಾಯಿತಿ ಇರುತ್ತದೆ.- ಹಮೀದ್ ಉಸ್ತಾದ್, ಮಾಲಕರು

LEAVE A REPLY

Please enter your comment!
Please enter your name here