ಪಾಲೆತ್ತಡಿ ಶ್ರೀ ಪಾಲೆಶ್ರೀ ಅಮ್ಮನವರು ಮತ್ತು ಪರಿವಾರ ದೈವಗಳು, ಶ್ರೀ ನಾಗದೇವರ ಪ್ರತಿಷ್ಠಾ ಕಾರ್ಯ

0

ನೂಜಿಬಾಳ್ತಿಲ: ನೂಜಿಬಾಳ್ತಿಲ ಗ್ರಾಮದ ಪಾಲೆತ್ತಡಿ ಪಾಲೆಶ್ರೀ ಅಮ್ಮನವರು ಮತ್ತು ಪರಿವಾರ ದೈವಗಳು ಹಾಗೂ ಶ್ರೀ ನಾಗದೇವರ ಪ್ರತಿಷ್ಠಾ ಕಾರ್ಯ ಮತ್ತು ದೈವಗಳ ನೆಯ ಮ ಎ.11ರಂದು ನಡೆಯಲಿದೆ.ಎ.9ರಂದು ಬೆಳಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಭಟ್ ಪಾದಲಡ್ಕ, ಭೂಷನ್ ಕುಮಾರ್ ಮರ್ಧಾಳ ಬಸದಿ, ಜಿನಚಂದ್ರ ಶೆಟ್ಟಿ ಬಾಳ್ತಿಲ, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯರಾದ ವಿನಯಕುಮಾರಿ ಬಳಕ್ಕ, ಚಂದ್ರಾವತಿ ಜಾಲು, ಸಂಜೀವ ಶೆಟ್ಟಿ ಅತ್ಯಡ್ಕ ಹೊಸಮಠ ಉಪಸ್ಥಿತರಿದ್ದರು. ಬಳಿಕ ಕಾರ್ಯಲಯ ಉದ್ಘಾಟನೆಯಲ್ಲಿ ಕೇಪು ಶ್ರೀ ಲಕ್ಷ್ಮೀ ಜನಾರ್ಧನ ಆಂಜನೇಯ ಕ್ಷೇತ್ರದ ಅಧ್ಯಕ್ಷ ಶಿವರಾಮ ಶೆಟ್ಟಿ, ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗುರುವ, ಬಾಬು ಗೌಡ ಕುಕ್ಕುತ್ತಡಿ, ಅಚ್ಚತ್ತ ಪಾಡ್ಲ, ದೇಜಪ್ಪ ಪೂಜಾರಿ ಕಂಪ, ಸದಾನಂದ ಗೌಡ ಸಾಂತ್ಯಡ್ಕ, ಭಾಸ್ಕರ ಗೌಡ ಎಳುವಾಲೆ, ಕೆಂಚಪ್ಪ ಗೌಡ ಕೆರ್ನಡ್ಕ ಉಪಸ್ಥಿತರಿದ್ದರು.

ಸಂಜೆ ಗಂಟೆ ಕ್ಷೇತ್ರಕ್ಕೆ ಆಗಮಿಸಿದ ಪುರೋಹಿತರಿಗೆ ಸ್ವಾಗತ ಮಾಡಲಾಯಿತು. ಬಳಿಕ ದೇವತಾ ಪ್ರಾರ್ಥನೆ ತೋರಣ ಮುಹೂರ್ತ, ಪ್ರಕಾರ ಶುದ್ಧಿ, ವಾಸ್ತು ರಕ್ಷೆ, ನವಗ್ರಹರಕ್ಷೊಗ್ನಹೋಮ, ಪ್ರಕಾರಬಲಿ, ಆದಿವಾಸ ನಡೆಯಿತು. ಎ.10ರಂದು ಬೆಳಗ್ಗೆ ಗಂಟೆ 9.21ರ ವೃಷಭ ಲಗ್ನದಲ್ಲಿ ಶ್ರೀನಾಗಬ್ರಹ್ಮದೇವರ ಪ್ರತಿಷ್ಠೆ, ನವಕಲಶಾಭಿಷೇಕ, ಪ್ರತಿಷ್ಠಾಹೋಮ, ಆಶ್ಲೇಷಬಲಿ, ಪ್ರಸನ್ನ ಪೂಜೆ, ಮಹಾಪೂಜೆ, ವಟು ಆರಾಧನೆ, ಪ್ರಸಾದ ವಿತರಣೆ ನಡೆಯಿತು. ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಇಂದು:-
ಎ.11ರಂದು ಬೆಳಗ್ಗೆ ಗಂಟೆ 11.45ರ ಮಿಥುನ ಲಗ್ನದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ದೈವ ಶ್ರೀ ಪಾಲೆಶ್ರೀ ಮತ್ತು ಬ್ರಹ್ಮ ದೈವಗಳಿಗೆ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗುಡಿಯಲ್ಲಿ ಪ್ರಕಾರಶುದ್ಧಿ, ವಾಸ್ತುರಕ್ಷೆ, ರಕ್ಷೋಘ್ನಹೋಮ, ಪ್ರಕಾರಬಲಿ, ಕೇತ್ರದಲ್ಲಿರುವ ಶ್ರೀ ಪಿಲಿಚಾಮುಂಡಿ, ಶ್ರೀ ಉಳ್ಳಾಕುಲು ಶ್ರೀ ಗುಳಿಗ ದೈವಗಳ ಪ್ರತಿಷ್ಠಾ ಕಾರ್ಯ ಹಾಗೂ ನವಕ ಪ್ರಧಾನ, ಪ್ರತಿಷ್ಠಾಹೋಮ, ಶಿಖರ ಸ್ಥಾಪನೆ, ತಂಬಿಲ ಸೇವೆ ನಡೆಯಲಿದೆ.

ಧಾರ್ಮಿಕ ಸಭೆ:
ಎ.11ರಂದು ಪೂರ್ವಾಹ್ನ ಗಂಟೆ 11.30ಕ್ಕೆ ಇಚ್ಲಂಪಾಡಿ ಬೀಡಿನ ಶುಭಾಕರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶುಭಾರ್ಶೀವಾದ ನೀಡಲಿದ್ದಾರೆ. ಎ.11ರ ರಾತ್ರಿ ಗಂಟೆ 7ರಿಂದ ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9ಕ್ಕೆ ಭಂಡಾರ ತೆಗೆದು ಬಳಿಕ ದೈವಗಳ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here