ರಾಮಕುಂಜ ಗ್ರಾಮದ ಪೆರ್ಜಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಹಾಗು ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ ಮತ್ತು ವರ್ಣರ ಪಂಜುರ್ಲಿ ಹಾಗು ಯಜ್ಞ ವಾರಹಿ ದೇವಿಯ ಪ್ರತಿಷ್ಠಾ ಮಹೋತ್ಸವ

0


ಆಲಂಕಾರು : ರಾಮಕುಂಜ ಗ್ರಾಮದ ಪೆರ್ಜಿ ಪಾಂಗಣ್ಣಾಯ ಮನೆತನದ ಕುಲದೇವರಾದ ಶ್ರೀ ವೆಂಕಟರಮಣ ದೇವರ ಹಾಗು ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ ಮತ್ತು ವರ್ಣರ ಪಂಜುರ್ಲಿ ಹಾಗು ಯಜ್ಞ ವಾರಹಿ ದೇವಿಯ ಪ್ರತಿಷ್ಠಾ ಮಹೋತ್ಸವ ಎ.8 ರಂದು ಹಾಗು ಎ.9 ರಂದು ನಡಯಿತು.

ಎ.16 ರಂದು ಚಂಡಿಕಾ ಹೋಮ ಹಾಗು ನೇಮೋತ್ಸವ ನಡೆಯಲಿದೆ.

ಎ.9 ಶನಿವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಹ ವಾಚನ, ಗಣಹೋಮ, ಪಂಚವಿಂಶತಿಕಲಶ ಆರಾಧನೆ, ದುರ್ಗಾಹೋಮ, ವಿಷ್ಣುಗಾಯತ್ರಿ ಹೋಮ,ಪುರುಷ ಸೂಕ್ತಹೋಮ, ಶ್ರೀ ಲಕ್ಷೀ೬ ವೆಂಕಟರಮಣ ದೇವರ ಪ್ರತಿಷ್ಠೆ,,ಶಿಖರ ಪ್ರತಿಷ್ಠೆ ,ರಕ್ತೇಶ್ವರಿ,ವರ್ಣರ ಪಂಜುರ್ಲಿ ,ಯಜ್ಞವಾರಹಿ ಪ್ರತಿಷ್ಠೆ, ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಪ್ರತಿಷ್ಠಾ ಕಾರ್ಯವು ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ಕಲ್ಪಡ ಮತ್ತು ವೇದಮೂರ್ತಿ ಶ್ರೀ ನರಹರಿ ಉಪಾಧ್ಯಾಯ ಇರ್ಕಿ ಮಠ ಇವರ ನೇತೃತ್ವದಲ್ಲಿ ನಡೆಯಿತು.ಈ ಸಂಧರ್ಭದಲ್ಲಿ ಶ್ರೀಮತಿ ಮತ್ತು ಶ್ರೀ ವೆಂಕಟರಮಣ ಪಾಂಗಣ್ಣಾಯ ಪೆರ್ಜಿ ಮತ್ತು ಸಹೋದರರು ಹಾಗು ಕುಟುಂಬಸ್ಥರು, ಹಾಗು ಸುಬ್ರಹ್ಮಣ್ಯ ಪಾಂಗಣ್ಣಾಯ ರತ್ನಾಕರ ಪಾಂಗಣ್ಷಾಯ,ಕೊಕ್ಕಡ,ಹರಿಪ್ರಸಾದ್ ಪಾಂಗಣ್ಣಾಯ ಪೆರ್ಜಿ ಹಾಗು ಶ್ರೀಮತಿ ಮತ್ತು ಶ್ರೀ ಮೋನಪ್ಪ ಗೌಡ ಪೆರ್ಜಿ ಮತ್ತು ಸಹೋದರರು ಹಾಗು ಕುಟುಂಬಸ್ಥರು ಮತ್ತು ಪೆರ್ಜಿ, ಬಟ್ಟೋಡಿ,ಕಜೆ,ವಳಂಜ,ಆನ,ಉರ್ಕ, ಅರ್ವೆ ,ಬೊಳ್ಳರೋಡಿ,ನೀರಾಜೆ,ಬರೆಂಬಾಡಿಯ ಹತ್ತು ಸಮಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಅಗಮಿಸಿದ ಭಕ್ತಾಧಿಗಳು ದೈವ ದೇವರ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು

LEAVE A REPLY

Please enter your comment!
Please enter your name here