ಎಪಿಎಂಸಿ ರೈಲ್ವೇ ಗೇಟ್ ಲಾಕ್ ಜಾಮ್ – ತುಸು ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ

0

ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯ ಬಳಿಯ ರೈಲ್ವೇಗೇಟ್ ಲಾಕ್ ಜಾಮ್ ಆಗಿ ತುಸು ಹೊತ್ತು ವಾಹನ ಸಂಚಾರಕ್ಕೆ ತೊಂದರೆ ಆದ ಘಟನೆ ಎ.11 ರಂದು ನಡೆದ ಮತ್ತು ತಾಂತ್ರಿಕ ಸಿಬ್ಬಂದಿ ಬಂದು ಲಾಜ್ ತೆರವುಗೊಳಿಸಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಲಭಿಸಿತು‌. ಗೂಡ್ಸ್ ರೈಲು ಬರುವ ಹಿನ್ನಲೆಯಲ್ಲಿ ಎಪಿಎಂಸಿ ಬಳಿಯ ರೈಲ್ವೇ ಗೇಟ್ ಹಾಕಲಾಗಿತ್ತು. ಗೂಡ್ಸ್ ರೈಲು ಬಂದ ಬಳಿಕ ರೈಲ್ವೇ ಸಿಬ್ಬಂದಿ ರೈಲ್ವೇ ಗೇಟ್ ತೆಗೆಯಲು ಆಗದೆ. ಅದರ ಗೇಟ್ ಲಾಕ್ ಜಾಮ್ ಆಗಿತ್ತು. ಲಾಕ್ ತೆಗೆಯಲು ಹಲವು ಸಮಯ ಬೇಕಾಯಿತು‌. ಇತ್ತ ಕಡೆ ಗಂಟೆಗಟ್ಟಲೆ ಸರಥಿ ಸಾಲಿನಲ್ಲಿ ನಿಂತ ವಾಹನಗಳು ಮರಳಿದ ಘಟನೆ ನಡೆಯಿತು. ಈ ನಡುವೆ ರೈಲ್ವೇ ತಾಂತ್ರಿಕ ಸಿಬ್ಬಂದಿ ಬಂದು ಲಾಕ್ ತೆಗೆದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿದೆ.

LEAVE A REPLY

Please enter your comment!
Please enter your name here