ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್‌ನ ವಾರ್ಷಿಕೋತ್ಸವ

0

  • ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಕ್ಕೆ ರಿಕ್ರಿಯೇಷನ್ ಸಹಕಾರಿ – ಕಿಶೋರ್ ಕುಮಾರ್ ಕೊಡ್ಗಿ

ಪುತ್ತೂರು ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ವಾರ್ಷಿಕ ದಿನಾಚರಣೆಯು ರಿಕ್ರಿಯೇಷನ್ ಸೆಂಟರಿನ ಸಭಾಂಗಣದಲ್ಲಿ ನಡೆಯಿತು.

ಕ್ಯಾಂಪ್ಕೋ ಕಿಶೋರ್ ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಕಾರ್ಯಕ್ರಮದ ಮೂಲಕ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಮ್ಮ ಸಂಸ್ಥೆಯ ಉದ್ಯೋಗಿಗಳು ಖುಷಿಯಲ್ಲಿ ಇರಬೇಕು, ಖುಷಿಯಲ್ಲಿ ಜೀವನ ಮಾಡಬೇಕು, ಆ ಸಂತೋಷದ ಪ್ರತಿಫಲವಾಗಿ ತಮ್ಮ ಕೆಲಸವನ್ನು ತೋರಿಸಬೇಕು. ನಮ್ಮ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹ ಮಾಡಲು ಈ ರಿಕ್ರಿಯೇಷನ್ ಸಹಕಾರಿಯಾಗಿದೆ ಎಂದ ಅವರು ಕ್ಲಬ್‌ನಿಂದ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.

ಕ್ಯಾಂಪ್ಕೋ ಸಂಸ್ಥೆಯ ವ್ಯವಸ್ಥಾಪನ ನಿರ್ದೇಶಕರಾದ ಕೃಷ್ಣ ಕುಮಾರ್ ಎಚ್. ಎಂ ರವರು ಮಾತನಾಡಿ ಹುಟ್ಟು ಮತ್ತು ಸಾವು ಬದಲಾಗಲು ಸಾಧ್ಯವಿಲ್ಲ, ಆದರೆ ಹುಟ್ಟು ಮತ್ತು ಸಾವಿನ ನಡುವೆ ಇರುವಂತಹ ಸಮಯದಲ್ಲಿ ನಮಗೆ ಬೇಕಾದ ರೀತಿಯಲ್ಲಿ ಅದನ್ನು ಫಲಗಿಸಬಹುದು.ನಮ್ಮ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಅಳವಡಿಸಿದರೆ ಉತ್ತಮ ಜೀವನ ಸಾಗಿಸಬಹುದು ಎಂದರು. ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರುಗಳಾದ ಕೃಷ್ಣ ಪ್ರಸಾದ್ ಮಡ್ತಿಲ, ರಾಘವೇಂದ್ರ ಭಟ್, ಡಾ. ಜಯಪ್ರಕಾಶ್, ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಯೂನಿಯನ್ ಅಧ್ಯಕ್ಷ ತೀರ್ಥರಾಮ್ ಶುಭ ಹಾರೈಸಿದರು.

ಸನ್ಮಾನ- ಗೌರವ:

ಎಸ್. ಎಸ್. ಎಲ್. ಸಿ, ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇನ್ನಿತರ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ಹಾಗೂ ರಾಜ್ಯ,ರಾಷ್ಟ್ರಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಸ್ಥಾನಗಳಿಸಿರುವ ವಿದ್ಯಾರ್ಥಿಗಳನ್ನು ಮತ್ತು ಚಾಕಲೇಟು ಕಾರ್ಖಾನೆಯಲ್ಲಿ ನಿವೃತ್ತಿ ಹೊಂದಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡಾ ಕೂಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಸ್ವಚ್ಚ ವಸತಿ ನಿಲಯವನ್ನು ಗುರುತಿಸಿ ಬಹುಮಾನವನ್ನು ನೀಡಲಾಯಿತು. ಬಿಂದು ಪ್ರಶಾಂತ್ ಡಿ. ಎಸ್, ಶಶಿಕಲಾ ಶೇಖರ ಪೂಜಾರಿ, ಪಾವನಾ ಜಗದೀಶ್ ಮತ್ತು ವಾಣಿ ಪ್ರಶಾಂತ್ ಭಟ್ ಪ್ರಾರ್ಥನೆ ಹಾಡಿದರು. ರಿಕ್ರಿಯೇಷನ್ ಸೆಂಟರಿನ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ರಿಕ್ರಿಯೇಷನ್ ಸೆಂಟರಿನ ಕಾರ್ಯದರ್ಶಿ ರಮೇಶ್ ನೆಗಳಗುಳಿ ವರದಿ ವಾಚನ ಮಾಡಿದರು. ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷ ಶ್ಯಾಮ್ ಪ್ರಸಾದ್ ಎಚ್ ಸ್ವಾಗತಿಸಿ, ಉಪಾಧ್ಯಕ್ಷೆ ಸುಲತಾ ಸತೀಶ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ಸಭಾ ಕಾರ್ಯಕ್ರಮದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಖಾದರ್ ಮತ್ತು ಉಷಾ ಕಿರಣ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಭಾ ಕಾರ್ಯಕ್ರಮದ ಮೊದಲು ರಿಕ್ರಿಯೇಷನ್ ಸೆಂಟರಿನ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.ಈ ಸಭೆಯಲ್ಲಿ ಕ್ರತಿ, ವ್ರಂದ, ವಿಧಿತಾ ಮತ್ತು ಶ್ರಾವ್ಯ ಪ್ರಾರ್ಥಿಸಿರು. ಕೋಶಾಧಿಕಾರಿ ಪ್ರಶಾಂತ್ ಭಟ್ ಲೆಕ್ಕಾಚಾರವನ್ನು ಮಂಡಿಸಿದರು, ಕಾರ್ಯದರ್ಶಿ ರಮೇಶ್ ನೆಗಳಗುಳಿ ವರದಿವಾಚನ ಮಾಡಿದರು. ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಎಚ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here