ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕ್ಷಯರೋಗ ಹೆಚ್ಚಳ – ಕ್ಷಯರೋಗ ಜಾಗೃತಿ ಕಾರ್ಯಗಾರದಲ್ಲಿ ಡಾ. ಜೆ.ಸಿ ಅಡಿಗ

0

  • ಸೂಕ್ತವಾದ ಔಷಧಿಯಿಂದ ಕ್ಷಯ ರೋಗ ನಿರ್ಮೂಲನೆ – ಡಾ. ಬದ್ರುದ್ದೀನ್

ಪುತ್ತೂರು: ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಟಿಬಿ ಕಾಯಿಲೆಗೆ ಒಳಗಾಗುತ್ತಿದ್ದು, ನಮ್ಮಲ್ಲಿ ಕೊರೋನಾದಿಂದಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದೆ. ಕ್ಷಯ ರೋಗ ಹೆಚ್ಚಾಗಿದೆ ಎಂದು ಚೇತನಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜೆ.ಸಿ ಅಡಿಗ ಅವರು ಹೇಳಿದ್ದಾರೆ.


ಭಾರತೀಯ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಬ್ರೈಟ್ ಕಾಲೇಜ್ ಆಫ್ ಪಾರಮೆಡಿಕಲ್ ಸಯನ್ಸ್ ಚೇತನಾ ಆಸ್ಪತ್ರೆ ಇದರ ಸಹಯೋಗದಲ್ಲಿ ಚೇತನಾ ಆಸ್ಪತ್ರೆಯ ಬಳಿಯ ಕಟ್ಟಡದಲ್ಲಿ ಎ.13ರಂದು ನಡೆದ ಕ್ಷಯ ರೋಗ ನಿರ್ಮೂಲನ ಜಾಗೃತಿ ಕಾರ್ಯಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತಾಡಿದರು. ಕ್ಷಯರೋಗ ಹೆಚ್ಚಾಗಿ ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ರೋಗವಿರುವ ವ್ಯಕ್ತಿ ಕೆಮ್ಮಿದಾಗ ಹೊರ ಹೊಮ್ಮುವ ಹನಿಗಳಿಂದ ಇದು ಹರಡುತ್ತದೆ. ಇದು ಸುಲಭವಾಗಿ ಹರಡುವ ರೋಗವಾಗಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು. ಇದರ ಜೊತೆಗೆ ಕೊರೋನಾಕ್ಕಿಂತಲು ಕ್ಷಯ ರೋಗ ಅಪಾಯಕಾರಿ, ಕೊರೋನಾ ಸಂದರ್ಭ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕ್ಷಯರೋಗ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದ್ದು ಕೇಂದ್ರ ಸರಕಾರ ಕ್ಷಯ ರೋಗ ನಿರ್ಮೂಲನೆಗೆ ಹಲವು ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.

ಸೂಕ್ತವಾದ ಔಷಧಿಯಿಂದ ಕ್ಷಯ ರೋಗ ನಿರ್ಮೂಲನೆ:
ಕ್ಷಯ ರೋಗ ನಿರ್ಮೂಲನಾ ಜಿಲ್ಲಾ ಅಧಿಕಾರಿ ಡಾ. ಬದ್ರುದ್ದೀನ್ ಅವರು ಮಾತನಾಡಿ ಸೂಕ್ತ ಅವಧಿಯವರೆಗೆ ಸೂಕ್ತವಾದ ಔಷಧಗಳನ್ನು ತೆಗೆದುಕೊಂಡರೆ ಕ್ಷಯವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗ ಪತ್ತೆ ಮತ್ತು ಕ್ಷಯರೋಗದ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜನರು ಮುಂದೆ ಬಂದು, ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. , ಬ್ರೈಟ್ ಕಾಲೇಜ್ ಆಫ್ ಪಾರಮೆಡಿಕಲ್ ಸಯನ್ಸ್‌ನ ಮೊಹಮ್ಮದ್ ಸಲೀಮ್ ಅವರು ಸಂದರ್ಭೋಚಿವಾಗಿ ಮಾತನಾಡಿದರು. ಆಸ್ಕರ್ ಆನಂದ್, ಬ್ರೈಟ್ ಕಾಲೇಜ್ ಆಫ್ ಪಾರಮೆಡಿಕಲ್ ಸಯನ್ಸ್‌ನ ಪ್ರಾಂಶುಪಾಲೆ ಪಾತಿಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತೀಯ ರೆಡ್‌ಕ್ರಾಸ್‌ನ ನವೀನ್‌ಚಂದ್ರ, ಬ್ರೈಟ್ ಪಾರಮೆಡಿಕಲ್‌ನ ಮೊಬಿನಾ, ಚೇತನಾ ಅತಿಥಿಗಳನ್ನು ಗೌರವಿಸಿದರು. ಭಾರತೀಯ ರೆಡ್‌ಕ್ರಾಸ್‌ನ ಸಭಾಪತಿ ಸಂತೋಷ್ ಶೆಟ್ಟಿ ಸ್ವಾಗತಿಸಿ, ಭಾರತೀಯ ರೆಡ್‌ಕ್ರಾಸ್‌ನ ಗೌರವ ಕಾರ್ಯದರ್ಶಿ ಆಸ್ಕರ್ ಆನಂದ್ ವಂದಿಸಿದರು. ಪ್ಯಾಟ್ರಿಕ್ ಸಿಪ್ರಿಯನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here