ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ 13ನೇ ವಾರ್ಷಿಕೋತ್ಸವ, ಅರ್ಧ ಏಕಾಹ ಭಜನೆ, ಶ್ರೀರಾಮ ಕಲ್ಪೋಕ್ತ ಪೂಜೆ, ರಂಗಪೂಜೆ

0

 

ಪುತ್ತೂರು:ಆರ್ಯಾಪು ಗ್ರಾಮದ ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರದ 13ನೇ ವಾರ್ಷಿಕೋತ್ಸವದ ಅಂಗವಾಗಿ ಅರ್ಧ ಏಕಾಹ ಭಜನೆ ಮತ್ತು ಸಾಮೂಹಿಕ ಶ್ರೀರಾಮ ಕಲ್ಪೋಕ್ತ ಪೂಜೆ ಹಾಗೂ ರಂಗಪೂಜೆಯು ಎ.10ರಂದು ನಡೆಯಿತು.

ವೇ.ಮೂ ಉದಯ ನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ ಗಣಪತಿ ಹವನ, ಬಳಿಕ ಅರ್ಧ ಏಕಾಹ ಭಜನೆ ಆರಂಭಗೊಂಡು ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಾಮೂಹಿಕ ಶ್ರೀ ರಾಮ ಕಲ್ಪೋಕ್ತ ಪೂಜೆ ಆರಂಭ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಜೆ ಬಂಗಾರಡ್ಕ ಪ್ರಾರ್ಥನಾ ಮತ್ತು ಆರಾಧನಾ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀದುರ್ಗಾ ಭಜನಾ ಮಂಡಳಿ ಕುಂಜೂರುಪಂಜ, ಶ್ರೀ ಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು, ಸುಭದ್ರಾ ಮಹಿಳಾ ಭಜನಾ ಮಂಡಳಿ ಮುಕ್ರಂಪಾಡಿ, ದುರ್ಗಾಶ್ರೀ ಮಹಿಳಾ ಭಜನಾ ಮಂಡಳಿ ಬಲ್ನಾಡು, ಮೋಹನ ಆರ್ಲಪದವು ಮತ್ತು ಶ್ರೀ ಗಣೇಶ ನೀರ್ಚಾಲು ಬಳಗ, ವೈಷ್ಣವೀ ವೈದೇಹಿ ಭಜನಾ ಮಂಡಳಿ ಬೊಳುವಾರು, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಹಾಗೂ ಸ್ಕಂದ ಭಜನಾ ಮಂಡಳಿ ಕಾರ್ಪಾಡಿ ಅರ್ಧ ಏಕಾಹ ಭಜನೆಯಲ್ಲಿ ಸಹಕರಿಸಿದರು.

ಶಾಸಕ ಸಂಜೀವ ಮಠಂದೂರು, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ವಸಂತ ಶ್ರೀದುರ್ಗಾ, ಗೀತಾ, ಪಿಡಿಓ ನಾಗೇಶ್, ಮಾಜಿ ಸದಸ್ಯ ಜಯಂತ ಶೆಟ್ಟಿ ಕಂಬಳತ್ತಡ್ಡ, ಹರಿಪ್ರಸಾದ್ ಯಾದವ್, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here