ಪುಣ್ಚಪ್ಪಾಡಿ ಮಕ್ಕಳ ಶಿಬಿರ ಕಲಿಕೆಯ ಕನಸಿನ ಸಮಾರೋಪ

0

  • ಬಾಲ್ಯದಲ್ಲಿ ಸಿಗುವ ಅವಕಾಶಗಳೇ ಮಕ್ಕಳ ಮುಂದಿನ ಬೆಳವಣಿಗೆಗೆ ದಾರಿ – ಕಸಾಪ ಜಿಲ್ಲಾಧ್ಯಕ್ಷ ಡಾಕ್ಟರ್ ಎಂಪಿ ಶ್ರೀನಾಥ್

ಪುತ್ತೂರು: ಬಾಲ್ಯದಲ್ಲಿ ಸಿಗುವ ಅವಕಾಶಗಳು ಮಕ್ಕಳ ಮುಂದಿನ ಬೆಳವಣಿಗೆಗೆ ದಾರಿ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಉಜಿರೆ ಹೇಳಿದರು. ಅವರು ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಮಕ್ಕಳ ಕಲಿಕಾ ಶಿಬಿರ ಕಲಿಕೆಯ ಕನಸಿನ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು. ನಮ್ಮ ಕಾಲದಲ್ಲಿ ಇಂತಹ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಸರಕಾರಿ ಶಾಲೆಗಳಲ್ಲಿ ಇಂತಹ ವಿಫುಲವಾದ ಅವಕಾಶಗಳಿವೆ. ಇವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಸಾಹಿತಿ, ಸಂಘಟಕ, ನ್ಯಾಯವಾದಿ, ರೋಟರಿ ಅಧ್ಯಕ್ಷರಾದ ಭಾಸ್ಕರ ಕೋಡಿಂಬಾಳ ಮಾತನಾಡಿ ನಾವು ನಮ್ಮ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಬೇಕು. ಅದಕ್ಕೆ ಇರುವ ಒಂದೇ ದಾರಿಯೆಂದರೆ ಮಕ್ಕಳಿಗೆ ಅವಕಾಶವನ್ನು ನೀಡುವುದು. ಪುಣ್ಚಪ್ಪಾಡಿ ಈ ಶಾಲೆಯ ಶಿಬಿರ ನಿಜಕ್ಕೂ ಕನಸಿನ ಲೋಕವನ್ನು ಸೃಷ್ಟಿಸಿದೆ ಎಂದರು.ಊರಿನ ಹಿರಿಯರಾದ ಪಿ.ಡಿ. ಕೃಷ್ಣಕುಮಾರ್ ರವರು ಮಾತನಾಡಿ ಪುಣ್ಚಪ್ಪಾಡಿ ಊರು ಬಹಳ ಸಹೃದಯ ನಾಗರಿಕರ ಊರು.  ಈ ಊರಿನ ಶಾಲೆಯಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಹಿತೈಷಿಗಳಾದ ಸಚಿನ್ ಕುಮಾರ್ ಜೈನ್ ಮಾತನಾಡಿ ಪುಣ್ಚಪ್ಪಾಡಿ ಶಾಲೆ ಬಹಳಷ್ಟು ಕ್ರಿಯಾತ್ಮಕ ಕೆಲಸಗಳನ್ನು ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂದರೆ ಇದೆ ಕನಸಿನ ಕಲಿಕೆ ಎಂದರು.ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಮಾತನಾಡಿದ ಎಕ್ಸಲೆಂಟ್ ಕಾಲೇಜು ಮೂಡಬಿದ್ರೆಯ ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ ಮಾತನಾಡಿ ಇಂದು ರಾಷ್ಟ್ರವ್ಯಾಪಿಯಾಗಿ, ರಾಜ್ಯವ್ಯಾಪಿಯಾಗಿ ಬೆಳೆದು ನಿಂತವರೆಲ್ಲ ಬಾಲ್ಯದಲ್ಲಿ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡವರು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಉಮಾಶಂಕರ ಗೌಡ, ಶಾಲಾ ಗ್ರಂಥಾಲಯಕ್ಕೆ ಕಪಾಟುಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳಾದ ದಿ. ಕುಮಾರ್ ಕೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಇವರ ಮನೆಯವರಾದ ವಿಜಯಲಕ್ಷ್ಮಿ ಮತ್ತು  ಶರತ್ ಕುಮಾರ್ ಇವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಧನಂಜಯ ಮರ್ಕಂಜ,  ಪ್ರಜಿತ್  ರೈ ಸೂಡಿಮುಳ್ಳು, ರಂಜಿತ್ ಪುಣ್ಚಪ್ಪಾಡಿ,  ಅಖಿಲ ನೆಕ್ರಾಜೆ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಓಂತಿಮನೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲಾಕೃತಿಗಳು, ನೃತ್ಯ, ಹಾಡುಗಳ ಪ್ರದರ್ಶನ ನಡೆಯಿತು. ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಊರವರು ಪಾಲ್ಗೊಂಡಿದ್ದರು. ಪದವೀಧರ ಶಿಕ್ಷಕಿ ಶೋಭಾ ಕೆ. ಸ್ವಾಗತಿಸಿ ಫ್ಲಾವಿಯಾ ವಂದಿಸಿದರು.ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ವಿಶೇಷತೆಗಳು :

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್ ಉಜಿರೆ ದಂಪತಿಗಳು ಕಾರ್ಯಕ್ರಮದಲ್ಲಿ ಬಹಳಷ್ಟು ಖುಷಿಪಟ್ಟರು. ಬರೀ ಸೀರೆಗಳಿಂದ ನಿರ್ಮಾಣಗೊಂಡ ಮಕ್ಕಳ ಕಲಿಕೆಯ ‘ಕನಸಿನ ಕಲಿಕಾ’ ಕುಟೀರ ಎಲ್ಲರ ಗಮನಸೆಳೆಯಿತು. ಊರವರೆಲ್ಲರೂ ಸೇರಿ ಮಕ್ಕಳಿಗೆ ದಿನನಿತ್ಯ ದೇಸಿ ಭೋಜನ, ಗಂಜಿ ಚಟ್ನಿ, ಸಿಹಿತಿನಿಸು, ಹಣ್ಣು ಇತ್ಯಾದಿಗಳನ್ನು ನೀಡುತ್ತಿದ್ದರು. ಕಲಿಕಾ ಶಿಬಿರವನ್ನು ಊರಿಗೆ ಹಬ್ಬವಾಗಿ ಆಚರಣೆ ಮಾಡಿದರು.

LEAVE A REPLY

Please enter your comment!
Please enter your name here