ಫಿಲೋಪ್ರಭಾ – ಕಾಲೇಜು ವಾರ್ಷಿಕ ಸಂಚಿಕೆಯ ಬಿಡುಗಡೆ

0

 

ಪುತ್ತೂರು : ಕಾಲೇಜಿನ ವಾರ್ಷಿಕ ಸಂಚಿಕೆ ಅನ್ನುವುದು ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲು ಯುಕ್ತ ವೇದಿಕೆ. ಎಂದು ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕರಾದ ಅ| ವಂ| ಜೆರೋಮ್ ಲಾರೆನ್ಸ್ ಮಸ್ಕರೇನ್ಹಸ್ ಹೇಳಿದರು. ಅವರು 2020-21 ರ ವಾರ್ಷಿಕ ಸಂಚಿಕೆ ಫಿಲೋಪ್ರಭಾವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ದಾಖಲಿಸುವ ವಾರ್ಷಿಕ ಸಂಚಿಕೆಗಳು ಕಾಲೇಜಿನ ಬಗ್ಗೆ ಅಮೂಲ್ಯ ಮಾಹಿತಿ ನೀಡುತ್ತವೆ ಎಂದು ಅವರು ಹೇಳಿದರು. ಕೊವಿಡ್ ಕಾಲ ಘಟ್ಟದಲ್ಲಿಯೂ ಕಾಲೇಜು ವಾರ್ಷಿಕ ಸಂಚಿಕೆಯನ್ನು ಹೊರತಂದದ್ದು ಶ್ಲಾಘನೀಯವೆಂದು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ ಸಂಪಾದಕ ಮಂಡಳಿಯನ್ನು ಅಭಿನಂದಿಸಿದರು. ಫಿಲೋಪ್ರಭಾದ ಸಂಪಾದಕರಾದ ಪ್ರೊ.ವಿನಯ ಚಂದ್ರ ವಾರ್ಷಿಕ ಸಂಚಿಕೆಯ ಕುರಿತು ಮಾಹಿತಿ ಮಾಹಿತಿ ನೀಡಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋ, ಪ್ರೊ.ಝುಬೇರ್, ಪ್ರೊ.ಗಣೇಶ್ ಭಟ್, ಪ್ರೊ.ದಿನಕರ ರಾವ್, ಪ್ರೊ.ಉದಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here