ದರ್ಬೆ: ಶಿಥಿಲಾವಸ್ಥೆಯಲ್ಲಿದ್ದ ನ್ಯಾಯಾಧೀಶರ ವಸತಿಗೃಹಗಳಿಗೆ ಮುಕ್ತಿ

0

ಪುತ್ತೂರು: ದರ್ಬೆಯಲ್ಲಿ ಕಳೆದ ಹಲವು ವರ್ಷಗಳಿಂದ ಉಪಯೋಗವಿಲ್ಲದೇ ಅನಾಥವಾಗಿರುವ ನ್ಯಾಯಾದೀಶರ ವಸತಿಗೃಹಗಳಿಗೆ ಕೊನೆಗೂ ಮುಕ್ತಿ ದೊರಕಿ ಹೊಸ ವಸತಿಗೃಹಗಳ ನಿರ್ಮಾಣ ಕೆಲಸ ಆರಂಭಗೊಂಡಿದೆ.

ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಮತ್ತು ಕಟ್ಟಡದ ಛಾವಣಿಗಳು ಕುಸಿದು ಕಟ್ಟಡ ಸಾಮಾಗ್ರಿಗಳು ಕಳ್ಳಕಾಕರ ಪಾಲಾಗುತ್ತಿದೆ ಬಿಸಿಲು ಮಳೆಗೆ ಹಾಳಾಗಿ ಸಾರ್ವಜನಿಕ ಆಸ್ತಿ ನಷ್ಟವಾಗುತ್ತಿದೆ ಎಂದು ಹಳೆ ಕಟ್ಟಡ ನವೀಕರಿಸಲು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬರಲಾಗಿತ್ತು. ಬಳಿಕ ಇದಕ್ಕೆ ೫ಕೋಟಿ ೩೫ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ವಸತಿ ಗೃಹಗಳಿಗೆ ಆಡಿಳಿತಾತ್ಮಕ ಅನುಮೋದನೆ ದೊರಕ್ಕಿತ್ತಾದರೂ ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಅನುದಾನಗಳ ಮಂಜೂರಾತಿಯಲ್ಲಿ ವಿಳಂಬವಾಗಿತ್ತು ಇದೀಗ ಅನುದಾನಗಳು ಮಂಜೂರಾತಿಗೊಂಡು ಸೀದಿ ಕನ್‌ಸ್ಟ್ರಕ್ಷನ್ ಮಂಗಳೂರು ಇವರಿಗೆ ಗುತ್ತಿಗೆ ನೀಡಲಾಗಿದ್ದು ಕೆಲಸ ಭರದಿಂದ ಸಾಗುತ್ತಿದೆ ಎಂದು ಕಲಿಯುಗ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here