ಬಪ್ಪಳಿಗೆ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

0

 

ಪುತ್ತೂರು: ಮೇ 7 ರಿಂದ 11ರ ತನಕ ಕಾರ್ಣಿಕ ಕ್ಷೇತ್ರವಾಗಿರುವ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ಎ.14ರಂದು ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಅವರು ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ನೆಲ್ಲಿಗುಂಡಿ, ನೇರಳಕಟ್ಟೆ ಅಮ್ಮನವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುರೇಶ್ ಸಂಪ್ಯ, ಸಮಿತಿ ಸಂಚಾಲಕ ಸಂಜೀವ ನೆಲ್ಲಿಗುಂಡಿ, ಕಾರ್ಯಾಧ್ಯಕ್ಷ ಭಾಸ್ಕರ ನೆಲ್ಲಿಗುಂಡಿ, ಅರ್ಚಕ ಸಂಜೀವ ಮೇಸ್ತ್ರಿ, ಪೂಜಾ ಸಮಿತಿ ಅಧ್ಯಕ್ಷ ಬೊಮ್ಮಣ್ಣ ನೆಲ್ಲಿಗುಂಡಿ, ಸುರೇಶ್ ನೆಲ್ಲಿಗುಂಡಿ, ಹಿರಿಯರಾದ ನಾರಾಯಣ ಪೂಜಾರಿ ಮತ್ತು ನಿತ್ಯಕರಸೇವಕರು ಉಪಸ್ಥಿತರಿದ್ದರು.

ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯ

ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯವು ನಿತ್ಯಕರಸೇವಕರ ಸಮೂಹದಲ್ಲಿ ನಿರಂತರ ನಡೆಯುತ್ತಿದ್ದು, ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಸೇವಾರ್ಥ ರೂಪದಲ್ಲಿ ದೇಣಿಗೆ ಸಮರ್ಪಣೆ ಮಾಡುವವರು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಥವಾ ಬ್ರಹ್ಮಕಲಶೋತ್ಸವ ಸಮಿತಿಯವರನ್ನು ಸಂಪರ್ಕಿಸುವಂತೆ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here