ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ ಬಿ.ಆರ್ ಅಂಬೇಡ್ಕರ್, ಮಹಾವೀರ ಜಯಂತಿ ಕಾರ್ಯಕ್ರಮ

0

  • ಬದುಕು ಹಸನು, ಮನಸ್ಸು ಸಮಾಜಮುಖಿ ಮಾಡುವಲ್ಲಿ ಅಂಬೇಡ್ಕರ್, ಮಹಾವೀರ ಸ್ಮರಣೆ ಅಗತ್ಯ – ಸಂಜೀವ ಮಠಂದೂರು
  • ಮಹಾಪುರುಷರ ಆಶಯಗಳು ಮುಂದಿನ ಪೀಳಿಗೆಗೆ ತಲುಪಬೇಕು – ಎ.ಸಿ ಗಿರೀಶ್ ನಂದನ್
  • ಹೋರಾಟ ಮಾಡದಿದ್ದರೂ ಮಾರಾಟವಾಗದಿರು – ಕೆ.ಜೀವಂಧರ್ ಜೈನ್
  • ಮನಪೂರ್ವಕದ ಕೆಲಸಕ್ಕೆ ಯಶಸ್ಸು ಸಿಗುತ್ತದೆ- ಡಾ. ಗಾನ ಪಿ ಕುಮಾರ್

ಪುತ್ತೂರು: ಬದುಕನ್ನು ಹಸನು, ಮನಸ್ಸನ್ನು ಸಮಾಜಮುಖಿ ಮಾಡುವಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಮಹಾವಿರರ ಸ್ಮರಣೆ ಮಾಡುವುದು ಅಗತ್ಯ. ಅವರ ಸ್ಮರಣೆಯೊಂದಿಗೆ ಸಮಾಜದಲ್ಲಿ ನಾವೇನು ಎಂಬ ಚಿಂತನೆ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಡಾ| ಬಿ.ಆರ್ ಅಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಮತ್ತು ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಬ ಸಾಹೇಬ್ ಅಂಬೇಡ್ಕರ್ ವಿಚಾರ ಇವತ್ತಿನ130 ಕೋಟಿ ಜನರ ಬದುಕಿನ ವಿಚಾರ. ಇವತ್ತಿಗೂ ಅವರು ಪ್ರಸ್ತುತ. ಯಾಕೆಂದರೆ ನಾವು ಅವರ ಮೂಲಕ ಪ್ರಮಾಣ ಮಾಡಿದ್ದೇವೆ. ಎಲ್ಲಾ ವಿಚಾರಗಳು ಜಗತ್ತಿನಲ್ಲಿ ತೋರಿಸುವ ಸಂಗತಿ ಸಂವಿಧಾನದಿಂದ ಆಗಿದೆ. ಅದೇ ರೀತಿ ಮುಂದೆಯೂ ಕೂಡಾ ಜಗತ್ತಿಗೆ ನಾಯಕನನ್ನು ಕೊಡಬೇಕೆಂಬುದು ನಮ್ಮ ಆಶಯ ಎಂದರು. ಸಮಾಜದಲ್ಲಿ ತುಳಿತಕ್ಕೊಳಗಾದವರು ಬಲಿ ಪಶುಗಳಾಗುತ್ತಾರೆ. ಆರ್ಥಿಕವಾಗಿ ಬಲಾಡ್ಯರು ವ್ಯಾರ್ಘವಾಗಿ ಇರುತ್ತಾರೆ. ಅದನ್ನು ಹೋಗಲಾಡಿಸುವ ಕೆಲಸ ಅಂಬೇಡ್ಕರ್ ಅವರು ಮಾಡಿದ್ದಾರೆ. ತನ್ನ ಕೊನೆಯ ಕಾಲದಲ್ಲಿ ಅವರು ಮುಸ್ಲಿಂ, ಕ್ರೈಸ್ತ ಮತಕ್ಕೆ ಹೋಗದೆ ಬೌಧ ಧರ್ಮವನ್ನು ಸ್ವೀಕರಿಸಿ ರಾಷ್ಟ್ರ ಭಕ್ತಿಯ ಬಗ್ಗೆ ಗೌರವ ತೋರಿಸಿದ್ದಾರೆ ಎಂದರು. ಅದೇ ರೀತಿ ಮಹಾವೀರರು ಬೋಗದಿಂದ ತ್ಯಾಗ ಜೀವನದ ಮಹತ್ವ ಸಾರಿದ್ದಾರೆ. ಅದು ಇವತ್ತಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಬಾಬ ಸಾಹೇಬ್ ಅಂಬೇಡ್ಕರ್ ಮತ್ತು ಮಹಾವೀರರ ಸಂದೇಶಗಳನ್ನು ನಾವು ಪಾಲಿಸಬೇಕೆಂದರು.

ಮಹಾಪುರುಷರ ಆಶಯಗಳು ಮುಂದಿನ ಪೀಳಿಗೆಗೆ ತಲುಪಬೇಕು:

ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾವೀರ ಜಯಂತಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಮಹಾನುಭಾವರಿಬ್ಬರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮಾತನಾಡಿ ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನ ತಂದು ಕೊಟ್ಟ ಬಿ.ಆರ್ ಅಂಬೇಡ್ಕರ್ ಅವರ ಸಾಧನೆಯ ಹಾದಿಯನ್ನು ನಾವು ಪಡೆಯಬೇಕು. ಅಂಬೇಡ್ಕರ್ ಅವರ ಪುಸ್ತಕ ಭಂಡಾರದಲ್ಲಿ ೫೦ಸಾವಿರಕ್ಕೂ ಮಿಕ್ಕಿ ಪುಸ್ತಕಗಳಿದ್ದವು. ಇತ್ತೀಚಿಗಿನ ದಿನದಲ್ಲಿ ನಾವು ಪುಸ್ತಕ ಓದುವುದು ಕಡಿಮೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಪುಸ್ತುಕ ಓದುವ ಹವ್ಯಾಸ ಬೆಳೆಸಬೇಕೆಂದರು. ಅದೇ ರೀತಿ ಸುಖ ಸಂಪತನ್ನು ತ್ಯಜಿಸಿ ಅಹಿಂಸೆ ಮತ್ತು ಸತ್ಯದ ಕುರಿತು ಜ್ಞಾನೋದಯ ನೀಡಿದ ಮಹಾವೀರರನ್ನು ನಾವು ಸದಾ ನಮ್ಮ ಮಾರ್ಗದರ್ಶಕರನ್ನಾಗಿ ಮುಂದಿಡಬೇಕೆಂದ ಅವರು ಇವತ್ತಿನ ದಿನಗಳಲ್ಲಿ ಇಂತಹ ಮಹಾಪುರಷರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ಸರಕಾರ ಇಂತಹ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ಹೋರಾಟ ಮಾಡದಿದ್ದರೂ ಮಾರಾಟವಾಗದಿರಿ:

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಸಂವಿಧಾನದ ಆಶಯದಂತೆ ನಡೆದು ಹೋರಾಟ ಮಾಡದಿದ್ದರೂ ಮಾರಾಟವಾಗದಿರು ಎಂಬ ಕಲ್ಪಣೆಯಂತೆ ಅಂಬೇಡ್ಕರ್ ಅವರು ರಾಜಕೀಯ ಉದ್ಯೋಗವಲ್ಲಾ ಸಾಮಾಜಿಕ ಜವಾಬ್ದಾರಿ ಎಂದು ಸಾರಿದರು. ಈ ನಿಟ್ಟಿನಲ್ಲಿ ಅವರ ಸಮಾನವಾಗಿರುವ 24ನೇ ತೀರ್ಥಂಕರ ಮಹಾವೀರರವರು ಕೂಡಾ ನಮಗೆಲ್ಲ ಮಾರ್ಗದರ್ಶಕರು ಎಂದರು.

ಮನಪೂರ್ವಕದ ಕೆಲಸಕ್ಕೆ ಯಶಸ್ಸು ಸಿಗುತ್ತದೆ:

ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ಮಾತನಾಡಿ ನಮ್ಮಲ್ಲಿ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆಯೋ ಇಲ್ಲವೋ ಆದರೆ ನಿಮ್ಮ ಮನಪೂರ್ವಕವಾಗಿ ಮಾಡಿದ ಕೆಲಸಕ್ಕೆ ಒಂದಲ್ಲಾ ಒಂದು ದಿನ ಯಶಸ್ಸು ಸಿಗುತ್ತದೆ. ನಿಮ್ಮ ಶತ್ರುಗಳಿಗೂ ಕೂಡಾ ಆಗ ಮನವರಿಕೆ ಆಗುತ್ತದೆ. ಇಬ್ಬರು ಮಹಾಪುರುಷರ ಪಾತ್ರವೂ ಇದಕ್ಕೆ ಮಾದರಿಯಾಗಿದೆ ಎಂದರು.

ಬಾತೃತ್ವ, ಸಮಾನತೆಯ ಮಾರ್ಗದರ್ಶನ:

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹೋಬಲೇಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಕುರಿತು ಮಾತನಾಡಿದರು. ಭಾರತದ ಭವಿಷ್ಯಕ್ಕಾಗಿ ದುಡಿಯುವ ಮೂಲಕ ಎಲ್ಲರಿಗೂ ಸಮಾನ ಮತದಾನದ ಹಕ್ಕು ಕೊಟ್ಟ ಧೀರ ಅಂಬೇಡ್ಕರ್ ಅವರು ತನ್ನ ತ್ಯಾಗ ಮನೋಭಾವದಿಂದ ದೇಶಕ್ಕೆ ವಿಶ್ವಮಾನವರಾದರು. ಅವರ ಬಾತೃತ್ವ ಮತ್ತು ಸಮಾನತೆಯನ್ನು ಬೆಳೆಸಿಕೊಳ್ಳೊಣ ಎಂದರು.

ಜೈನ ಧರ್ಮ ರಾಜ್ಯಶ್ರಯ ಪಡೆದು ಧರ್ಮ:

ವಳಾಲು ಸರಕಾರಿ ಶಾಲಾ ಸಹ ಶಿಕ್ಷಕಿ ಪುಷ್ಪಲತಾ ಎಮ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಹಾವೀರರ ಕುರಿತು ಮಾತನಾಡಿದರು. ಜೈನ ಧರ್ಮ ಇವತ್ತು ನಿನ್ನೆಯದಲ್ಲ. ಅದು ರಾಜ್ಯಾಶ್ರಯ ಪಡೆದ ಧರ್ಮ. ದೇಹ ದಂಡನೆ ಮಾಡಿದಾಗ ನಾವು ಯಾರು ಎಂದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಮಹಾವೀರರ ಸಮಾಜಕ್ಕೆ ಮಾರ್ಗದರ್ಶಕರಾದರು. 24ನೇ ತೀರ್ಥಕಂರಾದ ಅವರು ಸಮಾಜಕ್ಕೆ ಉತ್ತಮ ವಿಚಾರ ನೀಡಿದರು. ವೇದಿಕೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಮನೇಜರ್ ಕೃಷ್ಣ, ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಜೈನ ಸಮಾಜದ ರಾಜಶೇಖರ್ ಜೈನ್, ಪರಿಶಿಷ್ಟ ಜಾತಿ ಮುಖಂಡ ಮುತ್ತಣ್ಣ, ಕೃಷಿ ಇಲಾಖೆಯ ನಾರಾಯಣ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಪಶು ಇಲಾಖೆ ವೈದ್ಯಾಧಿಜಾರಿ ಡಾ. ಪ್ರಸನ್ನ ಹೆಬ್ವಾರ್, ಸಮಾಜ ಕಲ್ಯಾಣ ಇಲಾಖೆಯ ಪ್ರೇಮಲತಾ ಅತಿಥಿಗಳನ್ನು ಗೌರವಿಸಿದರು. ಹಾರಾಡಿ ಮೆಟ್ರಿಕ್ ವಸತಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಜೆ ಸ್ವಾಗತಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಉದ್ಘಾಟನೆಯ ಬಳಿಕ ಆರಂಭದಲ್ಲಿ ಸಂವಿಧಾನ ಅಶಯಕ್ಕೆ ದೃಢ ಸಂಕಲ್ಪ ಮಾಡುವ ನಿಟ್ಟಿನಲ್ಲಿ ಸಂವಿಧಾನದ ಪೀಠಿಕೆಯನ್ನು ಪ್ರಮಾವಣ ವಚನದ ಮೂಲಕ ಬೋದಿಸಲಾಯಿತು.

ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯಿಂದ ಅಂಬೇಡ್ಕರ್ ಕಾರ್ಯಕ್ರಮ ಸಾರ್ಥಕ

ತಳಮಟ್ಟದವರಿಗೆ ಸರಕಾರದ ಸೌಲಭ್ಯ ಸಿಗುವಂತಾಗಬೇಕು. ಅವರಿಗೂ ಸಮಾನವಾಗಿ ಬದುಕುವ ಹಕ್ಕು ನೀಡಬೇಕೆಂಬುದು ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಯಂತೆ ಇವತ್ತು ಅಂಬೇಡ್ಕರ್ ಜಯಂತಿಯಂದು ಒಂದಷ್ಟು ಫಲಾನುಭವಿಗಳಿಗೆ ಹುಲ್ಲು ಕಡಿಯುವ ಯಂತ್ರ ನೀಡಲಾಗುತ್ತಿದೆ ಎಂದ ಶಾಸಕ ಸಂಜೀವ ಮಠಂದೂರು ಹೇಳಿದರು. ಪ.ಪಂಗಡದ ಆದಿಯು ಕೊರಗ ಸಮುದಾಯದ ೪ ಮಂದಿ ಫಲಾನುಭವಿಗಳಿಗೆ ತಲಾ ರೂ. ೧೫ಸಾವಿರ ಮೌಲ್ಯದ ಹುಲ್ಲು ಕತ್ತರಿಸುವ ಯಂತ್ರವನ್ನು ಶಾಸಕರು ಹಸ್ತಾಂತರಿಸಿದರು. ಇತ್ತೀಚೆಗೆ ನೇತ್ರಾವದಿ ನದಿಯಲ್ಲಿ ದುರ್ಮಣ ಹೊಂದಿದ ವಿದ್ಯಾರ್ಥಿಯ ತಾಯಿ ಮೀನಾಕ್ಷಿಯವರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರಿಂದ ಕೊಡ ಮಾಡಲ್ಪಟ್ಟ ರೂ.೨.೫೦ ಲಕ್ಷದ ಚೆಕ್ ಅನ್ನು ಶಾಸಕರು ವಿದ್ಯಾರ್ಥಿ ಕುಟುಂಬಕ್ಕೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here