ಹಿರೇಬಂಡಾಡಿ: ಅಗರಿ-ಗಂಡಿಬಾಗಿಲು ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಉದ್ಘಾಟನೆ

0

  • ರಸ್ತೆ ಅಭಿವೃದ್ಧಿಯಿಂದ ಊರು ಅಭಿವೃದ್ಧಿ, ಕುಟುಂಬ ವಿಕಸನ-ಸಂಜೀವ ಮಠಂದೂರು

ಉಪ್ಪಿನಂಗಡಿ: ಹಿರೇಬಂಡಾಡಿ ಮತ್ತು ಕೊಲ ಸಂಪರ್ಕದ ಹಿರೇಬಂಡಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಅಗರಿ-ಗಂಡಿಬಾಗಿಲು ಸಂಪರ್ಕ ಕಲ್ಪಿಸುವ ೧.೦೬ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ 2 ಕಿ.ಮೀ. ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಎ.14ರಂದು ಅಗರಿಯಲ್ಲಿ ಉದ್ಘಾಟಿಸಲಾಯಿತು.

ಶಾಸಕ ಸಂಜೀವ ಮಠಂದೂರು ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿ ಊರಿನ ರಸ್ತೆ ಅಭಿವೃದ್ಧಿ ಆದರೆ ಆ ಊರು ಅಭಿವೃದ್ಧಿ ಹೊಂದುತ್ತದೆ ಜೊತೆಗೆ ಊರಿನಲ್ಲಿರುವ ಜನರ ಸಮಯ ಉಳಿತಾಯ, ಆಗುತ್ತದೆ, ಪರಿತಪಿಸಿ ಹೋಗುವುದು ತಪ್ಪುವುದರೊಂದಿಗೆ ಕುಟುಂಬದ ವಿಕಸನಕ್ಕೂ ಪ್ರಯೋಜನ ಆಗಲಿದೆ. ಈ ರೀತಿಯ ಉದ್ದೇಶವನ್ನು ಇಟ್ಟುಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚು ಅನುದಾನ ಇಡುತ್ತಿದ್ದು ಈ ಮೂಲಕ ಈ ಭಾಗದ ಜನರ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

ಕಾರ‍್ಯಕ್ರಮದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಸೀತಾರಾಮ ಗೌಡ, ಸದಸ್ಯರುಗಳಾದ ಹಮ್ಮಬ್ಬ ಸೌಕತ್ ಆಲಿ, ನಿತಿನ್, ಸದಾನಂದ ಶೆಟ್ಟಿ, ಲಕ್ಷ್ಮೀಶ, ವಾರಿಜಾಕ್ಷಿ, ಶಾಂಭವಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುಕುಂದ ಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುದ್ದ, ಸ್ಥಳೀಯ ಪ್ರಮುಖರಾದ ದಯಾನಂದ ಸರೋಳಿ, ನೀಲಯ್ಯ ಸರೋಳಿ, ಹೇಮಂತ್ ಮೈತಳಿಕೆ, ವಿಶ್ವನಾಥ, ಜನಾರ್ದನ ಅನಂತಿಮಾರು ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಗಣರಾಜ ಕುಂಬ್ಳೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here