ಇಂದು (ಎ.14)ರ ಶ್ರೀದೇವರ ಕಟ್ಟೆಪೂಜೆ ಸವಾರಿಯಲ್ಲಿ ಪರ್ಯಾಯ ವ್ಯವಸ್ಥೆ – ನಗರಸಭೆಯಿಂದ ನಿರ್ಮಿತವಾದ ಹೊಸ ಮಾರ್ಗದಲ್ಲಿ ಶ್ರೀ ದೇವರ ಪಾದಸ್ಪರ್ಶ

0

  • ಹಾರಾಡಿಯಿಂದ ದೇವಳಕ್ಕೆ ಹಿಂದಿರುಗುವಾಗ ಕಟ್ಟೆಗಳ ಸರತಿ ಸಾಲಿನಲ್ಲಿ ಬದಲಾವಣೆ
  • ಭಕ್ತರು ಗಮನಿಸುವಂತೆ ದೇವಳದ ಆಡಳಿತ ಮಂಡಳಿ ವಿನಂತಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ 5 ನೇ ದಿನವಾದ ಎ.14 ರಂದು ಸಂಜೆ ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿಯಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಲು ನಗರಸಭೆಯಿಂದ ನಿರ್ಮಿತವಾದ ಹೊಸ ಮಾರ್ಗದಲ್ಲಿ ಪಾದಸ್ಪರ್ಶ ಮಾಡಲಿರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಶ್ರೀ ದೇವರ ಪೇಟೆ ಸವಾರಿ ಹಾರಾಡಿ ತನಕ ಯಾಥಾ ಸ್ಥಿತಿಯ ಮಾರ್ಗದಲ್ಲಿ ಬಂದು ಹಾರಾಡಿಯಿಂದ ಪುನಃ ಹಿಂದಿರುಗುವಾಗ ಪೂಜೆ ಸ್ವೀಕರಿಸುವ ಕಟ್ಟೆಗಳ ಸಂಪರ್ಕ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿ ಬಂದು ಅಲ್ಲಿ ರೈಲ್ವೇ ರಸ್ತೆಯ ಬದಲು ಮುಖ್ಯರಸ್ತೆಯಲ್ಲೇ ಮುಂದಕ್ಕೆ ಕ್ರಮಿಸಿ ಬಳಿಕ ಎಡಕ್ಕಿರುವ ನಗರಸಭೆಯ ನೂತನ ರಸ್ತೆಯಲ್ಲಿ ಶ್ರೀ ದೇವರು ಕ್ರಮಿಸಲಿದ್ದಾರೆ. ಹೊಸ ರಸ್ತೆಯ ಆರಂಭದಲ್ಲಿ ತಾಳೆಪ್ಪಾಡಿ ಕಮಲಾ ಆಚಾರ್ಯ, ಗೋಪಾಲ ಆಚಾರ್ಯ ಕಟ್ಟೆ ಅಲ್ಲಿಂದ ತಾಳೆಪ್ಪಾಡಿ ರಮೇಶ್ ಪದ್ಯಾಣ, ಬಳಿಕ ಕೊಂಬೆಟ್ಟು ಸಂಕಪ್ಪ ರೈ, ಕೊಂಬೆಟ್ಟು ಕೃಷ್ಣಪ್ಪ ಆಚಾರ್ಯ, ಕೊಂಬೆಟ್ಟು ದ್ರಾವೀಡ ಬ್ರಾಹ್ಮಣರ ಹಾಸ್ಟೇಲ್, ಕೊಂಬೆಟ್ಟು ಸಕ್ಕರೆ ಕಟ್ಟೆ ಎನ್.ಕೆ‌ಜಗನ್ನಿವಾಸ ರಾವ್ ಕಟ್ಟೆಗಳಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿ ದೇವಳಕ್ಕೆ ತೆರಳುವುದು. ಭಕ್ತರು ಸಹಕರಿಸುವಂತೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here