ವಿಭಿನ್ನಶೈಲಿ ಕಥಾಹಂದರದ ಎಟಿಎಮ್ ಕಿರುಚಿತ್ರ ಬಿಡುಗಡೆ

0

  • ಲೋಕಲ್‌ವುಡ್ ಆಪ್‌ನ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ವೀಕ್ಷಣೆ ಲಭ್ಯ

ಪುತ್ತೂರು : ವಿಭಿನ್ನಶೈಲಿಯ ಕಥಾಹಂದರವನ್ನು ಒಳಗೊಂಡಿರುವ ಎಟಿಎಮ್ ಕಿರುಚಿತ್ರವು ಡೈಜಿವರ್ಲ್ಡ್ ಚಾನೆಲ್‌ನ ಲೋಕಲ್ ವುಡ್ ಆಪ್‌ನ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡಗೊಂಡಿದ್ದು ಈ ಆಪ್‌ನ್ನು ಡೌನ್‌ಲೋನ್ ಮಾಡಿ ಎಟಿಎಮ್ ಕಿರುಚಿತ್ರ ವೀಕ್ಷಿಸಬಹುದು.

ವರುಣ್ ಕುಮಾರ್ ಎಚ್.ರವರ ನಿರ್ದೇಶನ, ತುಕಾರಾಮ ಬಾಯಾರುರವರ ನಿರ್ಮಾಣ, ಗೋಕುಲ್‌ಕೃಷ್ಣನ್‌ರವರ ಛಾಯಾಗ್ರಹಣ ಹಾಗೂ ಜಯಕೀರ್ತಿರವರ ಸಂಗೀತದಲ್ಲಿ ಈ ಕಿರುಚಿತ್ರ ಮೂಡಿಬಂದಿದೆ. ಲೋಕಲ್ ವುಡ್ ಆಪ್ ಡೌನ್‌ಲೋಡ್ ಮಾಡಿದಲ್ಲಿ ರೂ.50ಕ್ಕೆ ಕಿರುಚಿತ್ರ ವೀಕ್ಷಣೆ ಮಾಡಬಹುದು. ವೋಚರ್ ಐಡಿಗಾಗಿ 9567273265, 9895132136ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here