ಸಚಿವ  ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್   ಪ್ರತಿಭಟನೆ

0

  • ತಕ್ಷಣವೇ ಈಶ್ವರಪ್ಪ ರಾಜೀನಾಮೆ ನೀಡಿ ಭಾರತದ ಮರ್ಯಾದೆಯನ್ನು ಉಳಿಸಬೇಕು-ಶಕುಂತಳಾ ಶೆಟ್ಟಿ

ಪುತ್ತೂರು: 40% ಕಮಿಷನ್‌ಗಾಗಿ ಅಮಾಯಕ ವ್ಯಕ್ತಿಯೋರ್ವರ ಸಾವಿಗೀಡಾದ ಬಗ್ಗೆ ತನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಬರೆದಿಟ್ಟಿದ್ದಿದ್ದು ಈ ಆಧಾರದಲ್ಲಿ ಸಚಿವ ಈಶ್ವರಪ್ಪ ತಕ್ಷಣವೇ ರಾಜೀನಾಮೆ ನೀಡಿ ಭಾರತದ ಮರ್ಯಾದೆ ಉಳಿಸಬೇಕು. ಕರ್ನಾಟಕದ ಗೌರವ ಉಳಿಸಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. 40% ಕಮಿಷನ್ ಕೇಳಿ ಸಂತೋಷ್ ಪಾಟೀಲ್‌ರವರ ಸಾವಿಗೆ ಕಾರಣರಾದ ಈಶ್ವರಪ್ಪ ರಾಜೀನಾಮೆ ನೀಡದಿದ್ದರೆ. ರಾಜ್ಯದ ರಾಜ್ಯಪಾಲರು, ಅಥವಾ ಮುಖ್ಯಮಂತ್ರಿಯವರು ಈಶ್ವರನವರ ರಾಜೀನಾಮೆಯನ್ನು ಪಡೆದುಕೊಂಡು ಈ ದೇಶದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಡಾ. ಅಂಬೇಡ್ಕರ್‌ರವರಿಗೆ ಗೌರವ ನೀಡದ ಮತ್ತು ಅವರು ರಚಿಸಿದ ಈ ದೇಶದ ಸಂವಿಧಾನವನ್ನು ನಂಬದ ಸರ್ಕಾರ ಡಾ. ಅಂಬೇಡ್ಕರ್‌ರವರ ಜನ್ಮ ದಿನಾಚರಣೆ ಆಚರಿಸುವುದರಲ್ಲಿ ಯಾವುದೇ ಮಾನ್ಯತೆಯಿಲ್ಲಿ ಎಂದು ಶಕುಂತಳಾ ಶೆಟ್ಟಿಯವರು ಹೇಳಿದರು.

 

ಸಂತೋಷ್‌ರವರ ಸಾವಿಗೆ ಪ್ರಧಾನಿ ಸೇರಿದಂತೆ ಎಲ್ಲರೂ ಕಾರಣ – ಎಂ.ಬಿ ವಿಶ್ವನಾಥ ರೈ
40% ಕಮಿಷನ್‌ಗಾಗಿ ಬಲಿಯಾದ ಬಿಜೆಪಿಯ ಕಾರ್ಯಕರ್ತ ಸಂತೋಷ್ ಪಾಟೀಲ್‌ರವರ ಸಾವಿಗೆ 40% ಕೇಳಿದ ಈಶ್ವರಪ್ಪ ಮಾತ್ರವಾಗಿರದೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತಿ ಬೊಮ್ಮಾಯಿ ಹಾಗೂ 40% ಪಡೆದುಕೊಂಡಿರುವ ಪ್ರತಿಯೊಬ್ಬರೂ ಕಾರಣಕರ್ತರಾಗಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹೇಳಿದರು. ಆರು ತಿಂಗಳ ಗುತ್ತಿಗೆದಾರ ಸಂಘದ ಅಧ್ಯಕ್ಷರು ಪ್ರಧಾನಿ ಮೋದಿಯವರಿಗೆ ಪ್ರತಿ ಕಾಮಗಾರಿಯಲ್ಲಿ 40% ಕೇಳುತ್ತಿದ್ದಾರೆ ಎಂದು ಪತ್ರ ಬರೆದರೂ ಈ ಬಗ್ಗೆ ಪ್ರಕ್ರಿಯೆ ತೋರದ ಹಿನ್ನಲೆಯಲ್ಲಿ ಇವತ್ತು ಅಮಾಯಕ ವ್ಯಕ್ತಿ ಜೀವ ಕಳೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು. ಸಚಿವ ಈಶ್ವರಪ್ಪನವರ ಈ ಹಿಂದೆ ಭ್ರಷ್ಠಾಚಾರಿಯಾಗಿದ್ದು ತನ್ನ ಮನೆಯಲ್ಲಿ ಹಣ ಮನೆಯಲ್ಲಿ ಹಣ ಕೌಂಟ್ ಮಾಡುವ ಮೆಷಿನ್ನನು ಇಟ್ಟುಕೊಂಡಿದ್ದರು. ಈತನಿಗೆ ಮಂತ್ರಿ ಸ್ಥಾನ ಕೊಟ್ಟದ್ದು ದುರದೃಷ್ಟಕರ. ಇಂತಹ ಭ್ರಷ್ಟ ಸಚಿವ ಈಶ್ವರಪ್ಪ ತಕ್ಷಣ ರಾಜೀನಾಮೆ ನೀಡಬೇಕು. ಮಾತ್ರವಲ್ಲದೆ ಇಂತಹ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೆಸೆಯಲು ನಾವೆಲ್ಲರೂ ಮುಂದೆ ಬರಬೇಕು ಎಂದರು.

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದಕ್ಕೆ ಅಂತಿಮ ಮೊಳೆ ಹೊಡೆಯುವ ಕೆಲಸ ಇಂತಹ ಪ್ರತಿಭಟನೆಯ ಮೂಲಕ ನಡೆಯಬೇಕಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬಿಜೆಪಿ ಸರಕಾರವು ಇನ್ನೂರು ಶೇಕಡಾ ಆತಂಕದ ಪ್ರಗತಿ ಕಾಣುವಂತಾಗಿದೆ. ಬಿಜೆಪಿ 40% ಕಮಿಷನ್ 100% ಹಿಜಾಬ್, 30ರಿಂದ 35% ಹಲಾಲ್, 30-35% ಜಟ್ಕಾ ಕಟ್, 30-35% ಹಝಾನ್ ವಿವಾದ ಇದರಲ್ಲಿ ಲಾಭ ಪಡೆಯಲು ಯತ್ನಿಸುತ್ತಿದ್ದು ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಪೆಟ್ರೋಲ್ ಬೆಲೆ 111ಕ್ಕೆ ಏರಿದ್ದು. ಡೀಸಿಲ್ ಬೆಲೆ 95ರಿಂದ ಶತಕದಿಂದ ದಾಪುಗಾಲು ಹಾಕುತ್ತಿದ್ದು, ಮಾತ್ರವಲ್ಲದೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಅವರು ಹೇಳಿದರು. 40%ಕ್ಕೆ ಬಲಿಯಾದ ಸಂತೊಷ್ ಪಾಟೀಲ್‌ರವರು ತನ್ನ ಮರಣದ 3 ತಿಂಗಳ ಮೊದಲೇ 40% ಕಮಿಷನ್ ಈಶ್ವರಪ್ಪನವರು ಕೇಳುತ್ತಿದ್ದಾರೆಂದು ದೆಹಲಿಗೆ ತೆರಳಿ ಸಂಬAಧಪಟ್ಟವರಿಗೆ ತಿಳಿಸಿದರಾದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದುರಿಂದ ಇಂದು ಅವರು ತನ್ನ ಪ್ರಾಣ ಕಳೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಮತೀಯ ಸಾಮರಸ್ಯ ನಿರ್ಮಾಣ ಮಾಡಬೇಕಾದ ಈ ಸರ್ಕಾರ ಅದನ್ನು ಮಾಡದೆ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದೆ ಎಂದರು. 40% ಕಮಿಷನ್ ಮಾತ್ರವಲ್ಲ ದೇಶದ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಮಹಾತ್ಮಗಾಂಧಿಯವರ ವಿಚಾರಧಾರೆಗಳು ಉಳಿಯಬೇಕಾದರೆ ನಾವು ಎಚ್ಚೆತ್ತುಕೊಂಡು ಕೋಮುವಾದಿ ಭ್ರಷ್ಟಚಾರಿ ಬಿಜೆಪಿ ಸರಕಾರವನ್ನು ಈ ದೇಶದಲ್ಲಿ, ರಾಜ್ಯದಲ್ಲಿ ಕಿತ್ತೆಸೆದು ಭಾರತಕ್ಕೆ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದರು. ಈಶ್ವರಪ್ಪನವರಿಗೆ ಒಂದು ಚೂರು ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರ ಮಿತಿಮೀರುತ್ತಿದ್ದು 40% ಗಾಗಿ ಒಬ್ಬ ಅಮಾಯಕ ತನ್ನ ಜೀವವನ್ನು ಕಳಕೊಳ್ಳಬೇಕಾಗಿದೆ. ಸಚಿವ ಈಶ್ವರಪ್ಪ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಆರೋಪಿ ಸ್ಥಾನದಲ್ಲಿದ್ದು ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲ. ತಕ್ಷಣ ಈಶ್ವರಪ್ಪ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಕೋಡಿಂಬಾಳ ಅವರು ತಿಳಿಸಿದರು. ಕೆ.ಎಸ್ ಈಶ್ವರಪ್ಪ ಅವರು ಕೆಎಸ್ ಈಶ್ವರಪ್ಪ ಹೆಸರನ್ನು 40% ಈಶ್ವರಪ್ಪ ಎಂದು ಬದಲಾಯಿಸುವಂತಾಗಬೇಕು. ಈ ಹಿಂದೆ ವಿವಿಧ ಪ್ರಕರಣದಲ್ಲಿ ಅವರ ಪ್ರತಿಕೃತಿಯನ್ನು ದಹಿಸಲಾಗಿದ್ದು ಇದೀಗ ಅವರ ಪ್ರತಿಕೃತಿಯನ್ನು ದಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಈಶ್ವರಪ್ಪ ಹಾಗೂ ಬಿಜೆಪಿ ಸರಕಾರ 40% ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್ ಕಾರ್ಯಕರ್ತನಾಗಿರದೆ ಬದಲಾಗಿ ಆತ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಸಂತೋಷ್ ಪಾಟೇಲ್ ಆಗಿದ್ದಾರೆ. ಈಶ್ವರಪ್ಪರವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆತ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದರೂ ಅವರು ಗಮನ ಹರಿಸುತ್ತಿದ್ದರೆ ಇವತ್ತು ಸಂತೋಷ್ ಪಾಟೀಲರವರ ಜೀವ ಉಳಿಸಬಹುದಿತ್ತು ಎಂದು ಅವರು ಹೇಳಿದರು. ಈಶ್ವರಪ್ಪನವರನ್ನು ವಜಾ ಮಾಡದಿದ್ದರೆ ಒಂದು ತಿಂಗಳ ಕಾಲ ಕಾಮಗಾರಿ ಕೆಲಸವನ್ನು ಮಾಡುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ನೋಡಿದರೆ ಇಡೀ ದೇಶದಲ್ಲಿ ರಾಜ್ಯದಲ್ಲಿ ಪ್ರಥಮ ಘಟನೆ ಆಗಿದೆ ಎಂದು ಅವರು ಹೇಳಿದರು. ಸುದ್ದಿ ಬಿಡುಗಡೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಗಳೂರಿನ ವಿಧಾನಸೌಧಕ್ಕೂ ಕೊಂಡೊಯ್ಯಬೇಕಾಗಿದೆ. ಪುತ್ತೂರಿನಲ್ಲಿ ಮಾತ್ರ ಭ್ರಷ್ಟಾಚಾರಿಗಳು ಇರುವುದಲ್ಲ. ವಿಧಾನ ಸೌಧದಲ್ಲಿ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದಾರೆ. ಈಶ್ವರಪ್ಪನವರು ದೇಶದ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಹೇಳಿ, ಒಂದು ತಿಂಗಳಲ್ಲೆ 40% ಕಮಿಷನ್‌ಗಾಗಿ ಸಂತೋಷ್ ಪಾಟೀ¯ ಎಂಬ ಅಮಾಯಕನ ಜೀವ ಆರಿಸಿಯೇ ಬಿಟ್ಟರು ಎಂದು ಹೇಳಿದರು. ನರೇಂದ್ರ ಮೋದಿಯವರಿಗೆ, ಬೊಮ್ಮಾಯಿ ತಕ್ಷಣ ಈಶ್ವರಪ್ಪನವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.

40% ಕಮಿಷನ್‌ಗಾಗಿ ಸಂತೋಷ್ ಪಾಟೀಲ್‌ರವರು ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಬರೆದಿದ್ದು ಈ ಪ್ರಕರಣದಲ್ಲಿ ಆರೋಪಿಯಾಗಿರುವ ಈಶ್ವರಪ್ಪರವರು ಈಗ ತಕ್ಷಣ ರಾಜಿನಾಮೆ ನೀಡಿ ಬಿಜೆಪಿಯವರ ಮುಖ್ಯಮಂತ್ರಿ ಬೊಮ್ಮಾಯಿಯವರ ಮಾನ ಮರ್ಯಾದೆಯನ್ನು ಉಳಿಸಬೇಕು. ನಂತರ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾದರೆ ಮುಂದೆ ಅವರಿಗೆ ಬಿಜೆಪಿಯವರು ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟಪತಿಯನ್ನಾಗಿಯಾದರೂ ಮಾಡಲಿ ಎಂದು ಕಾಂಗ್ರೆಸ್‌ನ ವಕ್ತಾರ ನ್ಯಾಯವಾಧಿ ಕುಂಬ್ರ ದುರ್ಗಾಪ್ರಸಾದ್ ರೈರವರು ಹೇಳಿದರು.

ಪುತ್ತೂರಿನ ಬಿಜೆಪಿ ಶಾಸಕರು ಉಪ್ಪಿನಂಗಡಿಗೆ ಹೋಗಿದ್ದ ಸಂದರ್ಭ ಅವರ ಮೇಲೆ ಹಲ್ಲೆ ನಡೆಯುತ್ತದೆ. ಶಾಸಕರ ಮೇಲೆ ಈ ರೀತಿಯ ಹಲ್ಲೆ ನಡೆಯುವುದಾದರೆ ನಮ್ಮಂತವರು ಬದುಕುವುದಾದರೂ ಹೇಗೆ. ಶಾಸಕರ ಮೇಲೆ ಹಲ್ಲೆ ಯತ್ನಿಸಿದವರು ಕಾಣದ ಕೈಗಳು ಬಿಜೆಪಿಯ ಮುಖಂಡ ಸಾಜ ರಾಧಕೃಷ್ಣ ಆಳ್ವರವರು ತಿಳಿಸಿದ್ದಾರೆ. ಕಾಣದ ಕೈಗಳನ್ನು ಹಿಡಿಯುವ ಕೆಲಸ ಏಕೆ ಶಾಸಕರಿಂದ ಮಾಡಲಾಗುವುದಿಲ್ಲ ಎಂದು ಪ್ರಶ್ನಿಸಿದ ಕುಂಬ್ರ ದುರ್ಗಾಪ್ರಸಾದ್ ರೈರವರು ಇಲ್ಲಿನ ಶಾಸಕರು ಡಿ.ವೈ.ಎಸ್.ಪಿ ಗಾನಕುಮಾರಿಯನ್ನು ವರ್ಗಾವಣೆ ಮಾಡಬೇಕೆಂದು ಬಂಟ್ವಾಳಕ್ಕೆ ತೆರಳಿ ಅಲ್ಲಿ ಮನವಿ ನೀಡುವುದೆಂದರೆ ಇದು ಬಿಜೆಪಿ ಕಾರ್ಯಕರ್ತರಿಗೆ ಮಂಕು ಬೂದಿ ಎರಚುವ ಕೆಲಸವಾಗಿದೆ. ತಮ್ಮದೇ ಆದ ಸರಕಾರವಿದ್ದು ತಾವು ಶಾಸಕರೂ ಕೂಡ ಆಗಿದ್ದೀರಿ ಯಾರೂ ಬೇಡವೆಂದರೆ ಅವರಿಗೆ ಬದಲಾಯಿಸುವ ತಾಕತ್ತು ಶಾಸಕರಿಗೆ ಇರುವಾಗ ಈ ರೀತಿಯ ವರ್ತನೆ ಕಾರ್ಯಕರ್ತರಿಗೆ ಮಂಕುಬೂದಿ ಎರಚುವ ಕೆಲಸವೆಂದು ಹೇಳಿದರು.

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಅವರು ಮಾತನಾಡಿ “ನಾನು ತಿನ್ನುವುದಿಲ್ಲ, ಇನ್ನೊಬ್ಬರಿಗೆ ತಿನ್ನಲೂ ಬಿಡುವುದಿಲ”್ಲ ಎಂದು ಮೋದಿಯ ಮಾತನ್ನು ನಂಬಿದ ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ತಂದು ಕೊಟ್ಟಿದೆ. ಇದೀಗ ಮೋದಿಯು ತನ್ನ ಪಕ್ಷದವರು ಮತ್ತು ಅಂಭಾಣಿ ಅಧಾನಿಯವರು ಮಾತ್ರ ತಿನ್ನುವುದು ಎಂಬ ವ್ಯಾಕ್ಯಾಣದಡಿಯಲ್ಲಿ ಸರ್ಕಾರವನ್ನು ನಡೆಸಿಕೊಂಡು ಬಂದಿದೆ ಎಂದು ಅವರು ಹೇಳಿದರು. ಬಿಜೆಪಿಯವರು ಸುಸಂಸ್ಕೃತ ಹಾಗೂ ಸ್ವಚ್ಛ ಪಕ್ಷವೆಂದು ಹೇಳಿಕೊಂಡು ಬಂದ ಬಿಜೆಪಿ ಪಕ್ಷ ತನ್ನ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರದಿಂದಾಗಿ ಭಾರತೀಯ ಜನತಾ ಪಾರ್ಟಿಯ ಬದಲು, ಭ್ರಷ್ಟಾಚಾರ ಜನತ ಪಕ್ಷ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದೆ ಎಂದರು. ಇಂದು ರಾಜಾರೋಷವಾಗಿ ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಶೇ.40 ರಷ್ಟು ಕಮಿಷನ್ ಪಡೆದುಕೊಂಡು ಚರಿತ್ರೆ ನಿರ್ಮಾಣ ಮಾಡುತ್ತಿದೆ ಎಂದು ಹೇಳಿದರು.

ಸಂತೋಷ್ ಪಾಟೀಲ್‌ರವರು ಈಶ್ವರಪ್ಪನವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಸಂಬಂಧಪಟ್ಟವರಿಗೆ ತಿಳಿಸಿದರೂ ಅವರು ಅದಕ್ಕೆ ಸ್ಪಂದನೆ ಕೊಡುತ್ತಿದ್ದರೆ ಇಂದು ಅವರು ಜೀವ ಉಳಿಸಿಕೊಳ್ಳಬಹುದಿತ್ತು ಎಂದು ಅವರು ಹೇಳಿದರು. ರಾಜ್ಯದ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಕೆಂಪಣ್ಣನವರು ಸಚಿವ ಈಶ್ವರಪ್ಪನವರು ಸೇರಿದಂತೆ 16 ಸಚಿವರು ಕಮಿಷನ್‌ನಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು, ಇದು ಕಮಿಷನ್ ಕಡಿಮೆ ಮಾಡಲು ಗುತ್ತಿಗೆದಾರರ ಸಂಘದವರು ಮಾಡುವ ಹೋರಾಟವು ರಾಜ್ಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಪುತ್ತೂರು ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಜಾನ್ ಶಿರಿಲ್ ರೋಡ್ರಿಗಸ್, ಅಬ್ದುಲ್ ರಝಾಕ್ ಆರ್‌ಪಿ., ಸೈಮನ್ ಗೋನ್ಸಾ÷್ವಲಿಸ್, ಬ್ಲಾಕ್ ಕಾಂಗ್ರೆಸ್ ಖಜಾಂಜಿ ವೆಲೆರಿಯನ್ ಡಯಾಸ್, ವಿಕ್ಟರ್ ಪಾಯಸ್, ಅಬೂಬಕ್ಕರ್ ಕೊರಿಂಗಿಲ, ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ನಿಡ್ಪಳ್ಳಿ, ಆಲಿಕುಂಞಂ ಕೊರಿಂಗಿಲ, ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸಾಯಿರ ಝುಬೈದ್, ಸಿದ್ದೀಕ್ ಸುಲ್ತಾನ್, ಹಮೀದ್ ಸಂಪ್ಯ, ದಿನೇಶ್ ಪಿ.ವಿ., ಸನತ್ ಕುಮಾರ್ ರೈ ಏಳ್ನಾಡುಗುತ್ತು, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಾಬು ಮರಿಕೆ ವಂದಿಸಿದರು.

ಪುತ್ತೂರಿನಲ್ಲಿ ಕೂಡ 30% ಕಮಿಷನ್
ಪುತ್ತೂರಿನಲ್ಲಿಯೂ ಕೂಡ 30% ಕಮಿಷನ್ ವ್ಯವಹಾರ ಆಗುತ್ತಿದೆ. ಇವತ್ತು ಯಾವುದೇ ಕಾಮಗಾರಿ ನಡೆಯಬೇಕಾದರೆ ಪ್ರವಾಸಿ ಮಂದಿರದಲ್ಲಿ ಶಾಸಕರು ಗುತ್ತಿಗೆದಾರರನ್ನು ಕರೆದು ಹಂಚುವ ಕೆಲಸ ಮಾಡುತ್ತಿದ್ದಾರೆ. ಇವತ್ತು ನಡೆಯುವ ಯಾವುದೇ ಕಾಮಗಾರಿ ಕಲಪೆ ಕಾಮಗಾರಿಯಾಗುತ್ತದ್ದಿ ಗುಣಮಟ್ಟದ ಕಾಮಗಾರಿ ಆಗುವುದಿಲ್ಲ ಎಂದು ಆಲಿ ಅವರು ಆರೋಪಿಸಿದರು.

LEAVE A REPLY

Please enter your comment!
Please enter your name here