ಕೊಡಿಮಾರು ಅಬೀರ ಉಳ್ಳಾಕುಲು, ವ್ಯಾಘ್ರಚಾಮುಂಡಿ ದೈವಗಳ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಕಾಣಿಯೂರು: ಬೆಳಂದೂರು ಗ್ರಾಮದ ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಎ.20,21ರಂದು ನಡೆಯಲಿದ್ದು ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಎ. 15 ರಂದು ನಡೆಯಿತು. ಅರ್ಚಕ ಶಿವರಾಮ ಉಪಾಧ್ಯಾಯ ಕಲ್ಪಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು.

ಈ ಸಂದರ್ಭದಲ್ಲಿ ತರವಾಡು ಮನೆಯ ಗೌರವಾಧ್ಯಕ್ಷರಾದ ಕೃಷ್ಣಪ್ಪ ಗೌಡ ಕಂಡೂರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ತಿಮ್ಮಪ್ಪ ಗೌಡ ಕಾಯೆರ್ತಡಿ, ಅಧ್ಯಕ್ಷರಾದ ಉದಯ ರೈ ಮಾದೋಡಿ, ಉಪಾಧ್ಯಕ್ಷರಾದ ರುಕ್ಮಯ್ಯ ಗೌಡ ಅಜಿರಂಗಳ, ನಾರಾಯಣ ಗೌಡ ಕಂಡೂರು, ಚಂದಪ್ಪ ಗೌಡ ಹೊಸೊಕ್ಲು, ವಸಂತ ಪೂಜಾರಿ ಅಬೀರ, ಸುಂದರ ಗೌಡ ಕಂಡೂರು,ಲಿಂಗಪ್ಪ ಗೌಡ ಸಾರಕರೆ, ಕಾರ್ಯದರ್ಶಿ ಜಯಂತ ಅಬೀರ ಕೋಶಾಧಿಕಾರಿ ಶೇಷಪ್ಪ ಕರೆಮನೆ,ಜಯಸೂರ್ಯ ರೈ ಮಾದೋಡಿ, ಪದ್ಮಯ್ಯ ಗೌಡ ಹೊಸೊಕ್ಲು, ಶ್ರೀಧರ ಪೂಜಾರಿ ಅಬೀರ, ಮೋಹಿತ್ ಕಾಯೆರ್ತಡಿ,ವಿನೋದ್ ಮಡಿವಾಳ, ಗಗನ್, ಧನುಷ್, ಸಾನ್ವಿ ಅಬೀರ ಮತ್ತು ದೈವಗಳ ಸೇವಾಕರ್ತರಾದ ವಿಷ್ಣು ಗೌಡ ಅಬೀರ ಉಪಸ್ಥಿತರಿದ್ದರು. ಎ.20ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಹವಾಚನ, ಗಣಪತಿ ಹೋಮ, ತೋರಣ ಮುಹೂರ್ತ, ದೈವಗಳಿಗೆ ಕಲಶಾಭಿಷೇಕ ಹಾಗೂ ತಂಬಿಲ ಮತ್ತು ರಾತ್ರಿ ದೈವಗಳ ಭಂಡಾರ ಹಿಡಿಯುವುದು. ಎ.21ರಂದು ಬೆಳಿಗ್ಗೆ ಉಳ್ಳಾಕುಲು ದೈವಗಳ ನೇಮೋತ್ಸವ, ಬೈಸುನಾಯಕ, ಬೇಡ ದೈವಗಳ ನೇಮೋತ್ಸವ, ವ್ಯಾಘ್ರಚಾಮುಂಡಿ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here