ಸವಲತ್ತು ಪಡೆದು ಜೀವನ ನಿರ್ವಹಣೆ ಮಾಡಿ ಸ್ವಾಭಿಮಾನ ಬೆಳೆಸಿಕೊಳ್ಳಿ – ವಿಶೇಷ ಚೇತನರು, ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ವಿಶೇಷ ಚೇತನರಿಗೆ ಮತ್ತು ಫಲಾನುಭವಿಗಳು ಸರಕಾರದ ಸವಲತ್ತು ಬಳಸಿಕೊಂಡು ಜೀವನ ನಿರ್ವಹಣೆ ಮಾಡುವ ಜೊತೆಯಲ್ಲಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಕೈಗಾರಿಕೆ, ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಅರ್ಹ ವಿಶೇಷ ಚೇತನರಿಗೆ ಮತ್ತು ಆಯ್ದ ಫಲಾನುಭವಿಗಳಿಗೆ ಎ.18ರಂದು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ನಡೆದ ಶೇ.5ರ ಅಡಿಯಲ್ಲಿ ಒಟ್ಟು ರೂ. 28.5ಲಕ್ಷ ವೆಚ್ಚದಲ್ಲಿ ವಿವಿಧ ಸವಲತ್ತು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶೇಷ ಚೇತನರು ತಮ್ಮ ಜೀವನ ನಿರ್ವಹಣೆ ಮಾಡಿ ಸ್ವಾಭಿಮಾನ ಬೆಳೆಸಿಕೊಳ್ಳಬೇಕೆಂದು ಅವರಿಗೆ ಸ್ಕೂಟರ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದೆ. ಅದೇ ರೀತಿ ಸರಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂದು ತೋರಿಸಲು ಸರಕಾರಿ ಶಾಲೆಯಲ್ಲಿ ಮೂಲಭೂತ ಹೆಚ್ಚಿಸಲು ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಕೊಟ್ಟ ಸವಲತ್ತನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

 


ನಮ್ಮ ಶಾಸಕರ ಇಚ್ಚಾ ಶಕ್ತಿಯಿಂದ ಹಲವು ಕಾರ್ಯಕ್ರಮ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಯೋಚನೆಯನ್ನು ಯೋಜನೆ ರೂಪದಲ್ಲಿ ತರಬೇಕಾದರೆ ಇಚ್ಚಾಶಕ್ತಿ ಬೇಕು. ಆ ಇಚ್ಛಾ ಶಕ್ತಿ ನಮ್ಮ ಶಾಸಕರಿಗಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಶಾಸಕರ ಮೂಲಕ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಮಂಜುನಾಥ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಮಾಜಿ ಸದಸ್ಯರಾದ ಮುಕುಂದ ಗೌಡ, ಮೀನಾಕ್ಷಿ ಮಂಜುನಾಥ್, ವಿಕಲಚೇತನ ಅಭಿವೃದ್ಧಿಯೋಜನೆಯ ಮೇಲ್ವಿಚಾರಕ ನವೀನ್ ಕುಮಾರ್, ಎಸ್ ಮೋಟಾರ‍್ಸ್ ಸಂಸ್ಥೆಯ ಮಾಲಕ ಆಕಾಶ್ ಐತ್ತಾಳ್ ಉಪಸ್ಥಿತರಿದ್ದರು.

ವಿವಿಧ ಸವಲತ್ತು ವಿತರಣೆ
ಈ ಯೋಜನೆಯು ತಾಲೂಕು ಪಂಚಾಯತ್, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ 14 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸ್ಕೂಟರ್‌ಗಳು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 31 ಗ್ರಾಮೀಣ ಕರಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ, 3 ಸರಕಾರಿ ಪ್ರೌಢ ಶಾಲೆಗಳಿಗೆ ಸ್ಮಾರ್ಟ್ ಕ್ಲಸ್ ತೆರೆಯಲು ಸಂಬಂಧಿಸಿದ ಉಕರಣಗಳನ್ನು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನಲ್ಲಿ ವಿಕಲಚೇತನರಿಗೆ ಕೃತಕ ಕಾಲು ವಿತರಣೆ ನೀಡಲಾಗುತ್ತಿದೆ.ನವೀನ್ ಕುಮಾರ್ ಭಂಡಾರಿ ಹೆಚ್. ಕಾರ್ಯನಿರ್ವಾಹಕ ಅಧಿಕಾರಿ .ತಾ.ಪಂ ಪುತ್ತೂರು

LEAVE A REPLY

Please enter your comment!
Please enter your name here