ಇಚ್ಲಂಪಾಡಿ: ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ಜಾತ್ರೋತ್ಸವ ಸಂಪನ್ನ

0

ನೆಲ್ಯಾಡಿ: ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ-ಬೀಡು ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಉಳ್ಳಾಕ್ಲು ಸಹ-ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ, ನೇಮೋತ್ಸವದ ಅಂಗವಾಗಿ ಎ.17ರಂದು ಹಳ್ಳತ್ತಾಯ, ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮೋತ್ಸವದೊಂದಿಗೆ ವರ್ಷಾವಧಿ ಜಾತ್ರೋತ್ಸವ ಸಂಪನ್ನಗೊಂಡಿತು.

 

ಮಧ್ಯಾಹ್ನ ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಕೊಟ್ಟು ನಂತರ ನೇಮೋತ್ಸವ ನಡೆಯಿತು. ಬಳಿಕ ಶ್ರೀ ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮೋತ್ಸವ ನಡೆಯಿತು. ಈ ಮೂಲಕ ಎ.9ರಂದು ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಶ್ರೀ ಉಳ್ಳಾಕ್ಲು ಸಹ ಪರಿವಾರ ದೈವಗಳ ಜಾತ್ರೋತ್ಸವವು ಸಂಪನ್ನಗೊಂಡಿತು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹಗ್ಗಡೆ, ಪ್ರಧಾನ ಅರ್ಚಕ ಹರೀಶ್ ಭಟ್, ಆಡಳಿತ ಸಮಿತಿ ಅಧ್ಯಕ್ಷ ರುಕ್ಮಯ್ಯ ಗೌಡ ಕೊರಮೇರು, ಕಾರ್ಯದರ್ಶಿ ಹರೀಶ್ ಶೆಟ್ಟಿ ನೇರ್ಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಾಯಿಲಪ್ಪ ಶೆಟ್ಟಿ ಹೊಸಮನೆ, ಶ್ರೀ ಉಳ್ಳಾಕ್ಲು ಸೇವಾ ಸಮಿತಿ ಅಧ್ಯಕ್ಷ ಹರೀಶ್ ಗೌಡ ನೇರ್ಲ, ಕಾರ್ಯದರ್ಶಿ ಆನಂದ ಶೆಟ್ಟಿ ಕಂಚಿನಡ್ಕ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಾಣಪ್ಪ ಪೂಜಾರಿ ಪಟ್ಟೆಗುಡ್ಡೆ, ಕಾರ್ಯದರ್ಶಿ ಶಾಂತರಾಮ ಶೆಟ್ಟಿ ಕುಡಾಲ, ಆಡಳಿತ ಸಮಿತಿ ನಿಕಟಪೂರ್ವಾಧ್ಯಕ್ಷ ರಾಧಾಕೃಷ್ಣ ಕೆರ್ನಡ್ಕ, ನಿಕಟಪೂರ್ವ ಕಾರ್ಯದರ್ಶಿ ಗಿರೀಶ್ ಸಾಲಿಯಾನ್ ಬದನೆ, ರಮೇಶ್ ಗೌಡ ಕೊರಮೇರು, ರಾಮಕೃಷ್ಣ ಗೌಡ ಕೊರಮೇರು, ಜಯರಾಜ್ ಕೊರಮೇರು, ಶಿವರಾಮ ದೇವಾಡಿಗ ಗಾಣದಕೊಟ್ಟಿಗೆ ಸೇರಿದಂತೆ ದೈವದ ಪರಿಚಾರಕರು, ಗುತ್ತು ಮಾಗಣೆಯವರು, ಗ್ರಾಮಸ್ಥರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here