ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಫಿಲೋಮಿನಾ ಮ್ಯಾಥ್ಯು ನಿಧನ

0

ನೆಲ್ಯಾಡಿ: ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ, ಕಡಬ ಹಳೆಸ್ಟೇಷನ್ ತೇವರ ನಿಕೇತನ ನಿವಾಸಿ ಫಿಲೋಮಿನಾ ಮ್ಯಾಥ್ಯು(72ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.22ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.


10 ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಫಿಲೋಮಿನಾ ಮ್ಯಾಥ್ಯುವರನ್ನು ಮಂಗಳೂರಿನ ಫಾದರ್ ಮುಲ್ಲಾರ‍್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಎ.22ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹಳೆನೇರೆಂಕಿ ಗ್ರಾಮದಲ್ಲಿ ವಾಸ್ತವ್ಯವಿದ್ದ ಫಿಲೋಮಿನಾರವರು ಕಳೆದ ಮೂರು ವರ್ಷಗಳಿಂದ ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೇಂದ್ರಿಯ ವಿದ್ಯಾಲಯದ ನಿವೃತ್ತ ಶಿಕ್ಷಕಿಯೂ ಆಗಿರುವ ಫಿಲೋಮಿನಾರವರು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಷ್ಟ್ರಿಯ ಅಗರ್‌ವುಡ್ ಕೃಷಿಕರ ಸಹಕಾರಿ ಸಂಘದ ನಿರ್ದೇಶಕಿ ಹಾಗೂ ರಾಯಭಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ನಿವೃತ್ತ ಸೈನಿಕ ಮ್ಯಾಥ್ಯು ಟಿ.ಜಿ., ಪುತ್ರ ಜಾರ್ಜ್ ಹಾಗೂ ಪುತ್ರಿ ಪ್ರಶಾಂತಿಯವರನ್ನು ಅಗಲಿದ್ದಾರೆ.

ಎ.23ರಂದು ಅಂತ್ಯಕ್ರಿಯೆ:
ಮೃತರ ಅಂತಿಮ ನಮನ ಕಾರ್ಯಕ್ರಮ ಎ. 23ರಂದು ಬೆಳಿಗ್ಗೆ 9.30ರಿಂದ 11.30೦ರ ತನಕ ಕಡಬ ಹಳೆಸ್ಟೇಷನ್‌ನಲ್ಲಿರುವ ತೇವರ ನಿಕೇತನದಲ್ಲಿ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ನೆಟ್ಟಣ ಸಂತ ಮೇರಿ ದೇವಾಲಯದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here